ಬೆಂಗಳೂರು: ಶಾಲೆ ಕಟ್ಟಡದಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅಮೃತಹಳ್ಳಿಯ ಸೆಂಟ್ ಜೇಮ್ಸ್ ಕಾಲೇಜು ಕಟ್ಟಡದಲ್ಲಿ ನಡೆದಿದೆ. ರಾಜೇಂದ್ರ(55) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು, ತಮಿಳುನಾಡು ಮೂಲದ ರಾಜೇಂದ್ರ ಬೆಂಗಳೂರಲ್ಲಿ ವಾಸವಾಗಿದ್ದರು. ಸೆಂಟ್ ಜೇಮ್ಸ್ ಶಾಲೆಯಲ್ಲಿ ಕಟ್ಟಡ ಕಾಮಗಾರಿ ನಡಿಯುತ್ತಿತ್ತು.
ಕಾಮಗಾರಿಗೆ ಎಂದು ಬಂದಿದ್ದ ರಾಜೇಂದ್ರ ಕೆಲಸ ಮಾಡಿ ಶಾಲೆಯ ಕಟ್ಟಡದಲ್ಲಿ ಮಲಗುತ್ತಿದ್ದರು. ನಿನ್ನೆ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಬೆಳಗ್ಗೆ ಶಾಲೆಗೆ ಮಕ್ಕಳು ಬಂದಾಗ ವಿಚಾರ ಬೆಳಕಿಗೆ ಬಂದಿದೆ.
ಡಯೆಟ್ ಗೆ ಹೇಳಿ ಗುಡ್ ಬಾಯ್: ಬೆಳಗ್ಗೆ ದೋಸೆ-ಇಡ್ಲಿ ತಿಂದೇ ಸ್ಲಿಮ್ ಆಗಬಹುದು! ಹೇಗೆ ಅಂತೀರಾ?
ಶಾಲೆ ಒಳಗೆ ಹೋಗ್ತಿದ್ದಂತೆ ಮೃತದೇಹ ನೋಡಿ ಮಕ್ಕಳು ಚೀರಿಕೊಂಡಿದ್ದಾರೆ. ಶಾಲಾ ಆಡಳಿತ ಮಂಡಳಿ ಶಾಲೆಗೆ ರಜೆ ನೀಡಿ ಮಕ್ಕಳನ್ನು ಮನೆಗೆ ಕಳುಹಿಸಲಾಗಿದೆ. ಸ್ಥಳಕ್ಕೆ ಅಮೃತಹಳ್ಳಿ ಪೊಲೀಸರು ಭೇಟಿ ನೀಡಿ,ಪರಿಶೀಲನೆ ನಡೆಸಿದ್ದಾರೆ.