Close Menu
Ain Live News
    Facebook X (Twitter) Instagram YouTube
    Friday, June 20
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಅಗಸೆಬೀಜ ಸೇವಿಸೋದ್ರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!? ಶುಗರ್‌ , ಕೊಲೆಸ್ಟ್ರಾಲ್‌ ಕಡಿಮೆ ಆಗುತ್ತಂತೆ!

    By AIN AuthorJune 20, 2025
    Share
    Facebook Twitter LinkedIn Pinterest Email
    Demo

    ಅಗಸೆಬೀಜ ನೋಡಲು ಚಪ್ಪಟೆ, ಪುಟ್ಟ ಗಾತ್ರದ್ದು ಆದರೆ ಪ್ರಯೋಜನಗಳು ಬೆಟ್ಟದಷ್ಟು. ಇದು ಆರೋಗ್ಯಕರವಾದ ಸೂಪರ್‌ಫುಡ್‌ಗಳಲ್ಲಿ ಒಂದು ಎನ್ನುವುದು ತಜ್ಞರ ಅಭಿಪ್ರಾಯ. ಯಾಕೆಂದರೆ, ಇದರಲ್ಲಿ ಸಮೃದ್ದವಾಗಿರುವ ಮೂರು ಪ್ರೊಟೀನ್ ಯುಕ್ತ ಅಂಶಗಳು. ಅನೇಕ ಪೋಷಕಾಂಶಗಳನ್ನು ಹೊಂದಿರುವ ಅಗಸೆಬೀಜದಲ್ಲಿ ರೋಗ ನಿರೋಧಕ ಶಕ್ತಿಯೂ ಇದೆ.

    ಇಂಗ್ಲಿಷ್ ನಾಚಿಕೆಗೇಡಿನ ಭಾಷೆಯಲ್ಲ, ಅದು ಸಬಲೀಕರಣಗೊಳಿಸುವ ಭಾಷೆ: ರಾಹುಲ್ ಗಾಂಧಿ

    ಫ್ಲಾಕ್ಸ್ ಬೀಜಗಳು ಎಂದೂ ಕರೆಯಲ್ಪಡುವ ಅಗಸೆಬೀಜವನ್ನು ಪ್ರಾಚೀನ ಕಾಲದಿಂದಲೂ ಸಹ ಬಳಸಿಕೊಂಡು ಬರಲಾಗುತ್ತಿದ್ದ ಬಗ್ಗೆ ಮಾಹಿತಿಯನ್ನು ತಿಳಿಯ ಬಹುದಾಗಿದೆ. ಈಜಿಪ್ಟ್‌ನಲ್ಲಿ ನೆಫೆರೆಟಿಗಳು ಇದ್ದ ಕಾಲದಲ್ಲಿ ಅಗಸೆಬೀಜ ಬಳಸಲು ಆರಂಭಿಸಿದ ಬಗ್ಗೆ ಇತಿಹಾಸದ ಪುಟದಲ್ಲಿ ದಾಖಲಾಗಿದೆಯಂತೆ

    ಅಗಸೆಬೀಜ ಅಥವಾ ಪ್ಲ್ಯಾಕ್ಸ್ ಬೀಜ ನೀವು ನೋಡಿರಬಹುದು. ಯಾರು ತೂಕ ಇಳಿಸಬೇಕೆಂದಿರುತ್ತಾರೋ ಅವರು ಹೆಚ್ಚಾಗಿ ಇದನ್ನು ಸೇವಿಸುತ್ತಾರೆ. ಹಾಗಂದ ಮಾತ್ರಕ್ಕೆ ಇದು ಬರೀ ತೂಕ ಇಳಿಸಲು ಸಹಕಾರಿಯಲ್ಲ, ಅಗಸೆ ಬೀಜವನ್ನು ಸೇವಿಸುವುದರಿಂದ ಇನ್ನೂ ಹಲವಾರು ಪ್ರಯೋಜನಗಳಿವೆ.

    ಭಾರತದಲ್ಲಿ ಸಾವಿರಾರು ವರ್ಷಗಳಿಂದ ಅಗಸೆಬೀಜವನ್ನು ಆಯುರ್ವೇದ ಔಷಧದಲ್ಲಿ ಬಳಸಲಾಗುತ್ತಿದೆ. ಅಗಸೆಬೀಜವು ಬೀಜ, ಎಣ್ಣೆ, ಪುಡಿ, ಮಾತ್ರೆಗಳು, ಕ್ಯಾಪ್ಸುಲ್‌ಗಳು ಮತ್ತು ಹಿಟ್ಟಿನ ರೂಪದಲ್ಲಿ ಲಭ್ಯವಿದೆ. ಮಲಬದ್ಧತೆ, ಮಧುಮೇಹ, ಅಧಿಕ ಕೊಲೆಸ್ಟ್ರಾಲ್, ಹೃದ್ರೋಗ, ಕ್ಯಾನ್ಸರ್ ಮತ್ತು ಇತರ ಅನೇಕ ರೋಗಗಳನ್ನು ತಡೆಗಟ್ಟಲು ಜನರು ಇದನ್ನು ಆಹಾರದಲ್ಲಿ ಬಳಸುತ್ತಾರೆ.

    ಅಗಸೆಬೀಜಗಳು ಲಿಗ್ನಾನ್‌ಗಳು, ಆಂಟಿಆಕ್ಸಿಡೆಂಟ್‌ಗಳು, ಫೈಬರ್, ಪ್ರೋಟೀನ್ ಮತ್ತು ಆಲ್ಫಾ-ಲಿನೋಲೆನಿಕ್ ಆಮ್ಲ ಅಥವಾ ಒಮೆಗಾ -3 ನಂತಹ ಬಹುಅಪರ್ಯಾಪ್ತ ಕೊಬ್ಬಿನಾಮ್ಲಗಳನ್ನು ಹೊಂದಿದೆ.

    ನೀವು ಮಾಂಸ ಮತ್ತು ಮೀನುಗಳನ್ನು ತಿನ್ನದಿದ್ದರೆ, ಅಗಸೆ ಬೀಜಗಳು ನಿಮಗೆ ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ಇದನ್ನು ಸಸ್ಯ ಆಧಾರಿತ ಪ್ರೋಟೀನ್ ಎಂದು ಪರಿಗಣಿಸಲಾಗುತ್ತದೆ. ಇದು ಸಸ್ಯಾಹಾರಿಗಳಿಗೆ ಉತ್ತಮ ಆಯ್ಕೆಯಾಗಿದೆ

    ಅಗಸೆಬೀಜದ ಸೇವನೆಯು ವಿವಿಧ ರೋಗಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆಯುರ್ವೇದ ವೈದ್ಯ ದೀಕ್ಷಾ ಭಾವಸರ್ ಅವರು ನಿಮ್ಮ ಆಹಾರದಲ್ಲಿ ಅಗಸೆ ಬೀಜಗಳನ್ನು ಸೇರಿಸುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂದು ಇಲ್ಲಿ ತಿಳಿಸಿದ್ದಾರೆ.

    ಅಗಸೆ ಬೀಜಗಳು ಫೈಬರ್‌ಲ್ಲಿ ಸಮೃದ್ಧವಾಗಿವೆ ಮತ್ತು ಅದಕ್ಕಾಗಿಯೇ ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಮಲಬದ್ಧತೆಯ ಸಮಸ್ಯೆಯನ್ನು ತೊಡೆದುಹಾಕಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

    ಅಗಸೆಬೀಜಗಳು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರ ಜೊತೆಗೆ ಉತ್ತಮ ಕೊಲೆಸ್ಟ್ರಾಲ್ ಅನ್ನು ಸುಧಾರಿಸುತ್ತದೆ. ಇದರಿಂದಾಗಿ ನೀವು ರಕ್ತದ ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸಲು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

    ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಅಗಸೆ ಬೀಜಗಳು ಸಹಾಯಕವಾಗಿವೆ. ಇದರ ಕರಗುವ ಫೈಬರ್ ನಿಮಗೆ ಬೇಗನೆ ಹಸಿವಾಗದಂತೆ ಮಾಡಲು ಸಹಾಯ ಮಾಡುತ್ತದೆ, ಆದ್ದರಿಂದ ತೂಕ ನಷ್ಟದ ಪ್ರಯತ್ನದಲ್ಲಿರುವವರಿಗೆ ಮತ್ತು ಬೊಜ್ಜು ಹೊಂದಿರುವವರಿಗೆ ಇದು ಉತ್ತಮವಾಗಿದೆ.

    ಇದು ರುಚಿಯಲ್ಲಿ ಸಿಹಿ ಮತ್ತು ಕಹಿ ಯಾಗಿದ್ದು ಲೋಳೆಯಂತಿರುತ್ತದೆ ಆದ್ದರಿಂದ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಇದು ನರಸೆಳೆತ, ಪಾರ್ಶ್ವವಾಯು, ಸಂಧಿವಾತದಂತಹ ವಾತ ಅಸ್ವಸ್ಥತೆಗಳಿಗೆ ಉಪಯುಕ್ತವಾಗಿದೆ.

    ಇದು ವಾತವನ್ನು ಸಮತೋಲನಗೊಳಿಸುತ್ತದೆ ಆದರೆ ಪಿತ್ತ ಮತ್ತು ಕಫವನ್ನು ಉಲ್ಬಣಗೊಳಿಸುತ್ತದೆ ಆದ್ದರಿಂದ ಅತಿಯಾದ ರಕ್ತಸ್ರಾವದ ಅಸ್ವಸ್ಥತೆಗಳಿಂದ ಬಳಲುತ್ತಿರುವ ಮತ್ತು ಗರ್ಭಧರಿಸಿರುವವರು ಇದನ್ನು ಎಚ್ಚರಿಕೆಯಿಂದ ಬಳಸಬೇಕು.

    ಅಗಸೆ ಬೀಜವನ್ನು ನೀವು ಹಾಗೇ ಸೇವಿಸಿದರೆ ಅದು ನಿಮ್ಮ ಮಲದ ಜೊತೆಗೆ ಹಾಗೆಯೇ ಹೊರಹೋಗುತ್ತದೆ. ಅದಕ್ಕಾಗಿ ನೀವು ಈ ಬೀಜವನ್ನು ಪುಡಿಮಾಡಿ ಸೇವಿಸಿ. ಇಲ್ಲವಾದರೆ ಇದನ್ನು ನೀರಿನಲ್ಲಿ ನೆನೆಸಿಟ್ಟು ಕೂಡಾ ಸೇವಿಸಬಹುದು. ಅಗಸೆ ಬೀಜದ ಎಣ್ಣೆಯನ್ನು ಕೈ ಕಾಲು ನೋವಿಗೂ ಬಳಸಬಹುದು.

    Demo
    Share. Facebook Twitter LinkedIn Email WhatsApp

    Related Posts

    ಊಟ ಮಾಡಿದಾಕ್ಷಣ ಹೊಟ್ಟೆ ಉಬ್ಬುತ್ತಾ!? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!

    June 20, 2025

    ಮಧುಮೇಹಿಗಳ ಗಮನಕ್ಕೆ: ಮನೆಯಲ್ಲಿರುವ ಈ ಮಸಾಲೆಯನ್ನು ಹಾಲಿಗೆ ಬೆರಸಿ ಕುಡಿಯಿರಿ! ಶುಗರ್ ಕಂಟ್ರೋಲ್ ಇರತ್ತೆ!

    June 20, 2025

    ವಸತಿ ಯೋಜನೆಗಳಲ್ಲಿ ಮುಸ್ಲಿಂರಿಗೆ ಮೀಸಲಾತಿ: ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಪ್ರಹ್ಲಾದ್ ಜೋಶಿ!

    June 20, 2025

    ನಿಮಗೂ ಗ್ಯಾಸ್ಟ್ರಿಕ್ ಸಮಸ್ಯೆ ಇದ್ಯಾ!? ಹಾಗಿದ್ರೆ ಈ ಆಹಾರಗಳನ್ನು ತಪ್ಪದೇ ಸೇವಿಸಿ!

    June 20, 2025

    ನಿಮ್ಮ ಮನೆಯಲ್ಲಿ ಮನಿ ಪ್ಲಾಂಟ್ ಇದೆಯೇ..? ಹಾಗಿದ್ರೆ ಅಪ್ಪಿತಪ್ಪಿಯೂ ಈ ತಪ್ಪುಗಳನ್ನ ಮಾಡಬೇಡಿ.!

    June 20, 2025

    ನಿತ್ಯ ಖಾಲಿ ಹೊಟ್ಟೆಗೆ ಉಗುರು ಬೆಚ್ಚಗಿನ ನೀರು ಕುಡಿದ್ರೆ ಲಿವರ್ ಕ್ಲೀನ್ ಆಗುತ್ತಾ? ಇಲ್ಲಿದೆ ಉತ್ತರ!

    June 19, 2025

    ನೀವು ಮಾಡಿದ ಚಪಾತಿ ಹೂವಿನಂತಾಗಬೇಕಾ!? ಹಾಗಿದ್ರೆ ಹಿಟ್ಟು ಕಲಿಸುವಾಗ ಈ ಟಿಪ್ಸ್ ಫಾಲೋ ಮಾಡಿ!

    June 19, 2025

    Lipstick ಹಚ್ಚದೇ ನಿಮ್ಮ ತುಟಿ ನ್ಯಾಚುಲರ್ ಆಗಿ ಕೆಂಪಾಗಬೇಕಾ..? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ ಸಾಕು

    June 19, 2025

    Gruhalakshmi Scheme: ಗೃಹಲಕ್ಷ್ಮಿ ಹಣ ನಿಮಗೆ ಬಂದಿಲ್ಲವೇ..? ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇನು..?

    June 19, 2025

    Chicken Health Care: ಚಿಕನ್ ತಿಂದ್ರೆ ಬರುತ್ತಾ ಕ್ಯಾನ್ಸರ್? ಈ ಬಗ್ಗೆ ವೈದ್ಯರು ಹೇಳೋದೇನು..?

    June 19, 2025

    ಡಯೆಟ್ ಗೆ ಹೇಳಿ ಗುಡ್ ಬಾಯ್: ಬೆಳಗ್ಗೆ ದೋಸೆ-ಇಡ್ಲಿ ತಿಂದೇ ಸ್ಲಿಮ್ ಆಗಬಹುದು! ಹೇಗೆ ಅಂತೀರಾ?

    June 19, 2025

    ಇದು ಹೆಣ್ಮಕ್ಕಳು ತಿಳಿಯಲೇಬೇಕಾದ ವಿಚಾರ: ಈ ವಸ್ತುಗಳನ್ನು ಎಂದಿಗೂ ನಿಮ್ಮ ತವರು ಮನೆಯಿಂದ ತರಲೇಬೇಡಿ!

    June 19, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.