Close Menu
Ain Live News
    Facebook X (Twitter) Instagram YouTube
    Friday, June 20
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಊಟ ಮಾಡಿದಾಕ್ಷಣ ಹೊಟ್ಟೆ ಉಬ್ಬುತ್ತಾ!? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!

    By AIN AuthorJune 20, 2025
    Share
    Facebook Twitter LinkedIn Pinterest Email
    Demo

    ಯಾರಿಗೆ ತಾನೇ ನಾಲಿಗೆಗೆ ರುಚಿ ಅನ್ನಿಸುವ ಊಟ ಮಾಡಬಾರದು ಅಂತ ಅನ್ನಿಸುತ್ತದೆ ಹೇಳಿ? ಬಹುತೇಕರಿಗೆ ಬಾಯಿಗೆ ರುಚಿ ಅನ್ನಿಸುವ ಆಹಾರ ಪದಾರ್ಥಗಳನ್ನು ಅಥವಾ ಭಕ್ಷ್ಯಗಳನ್ನು ಹೊಟ್ಟೆ ತುಂಬಾ ತಿಂದು ಬಿಡಬೇಕು ಅಂತ ಅನ್ನಿಸುತ್ತದೆ ಮತ್ತು ಇದು ಜೀವನದ ಸರಳ ಆನಂದಗಳಲ್ಲಿ ಒಂದಾಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಭಾರಿ ಊಟ ಮಾಡಿದ ನಂತರ ಅನೇಕರ ಹೊಟ್ಟೆ ಉಬ್ಬುತ್ತದೆ, ಇದನ್ನು ಹೊಟ್ಟೆ ಉಬ್ಬರ ಅಂತ ಸಹ ಹೇಳುತ್ತಾರೆ. ರುಚಿಕರವಾದ ಮತ್ತು ಸ್ವಾದಿಷ್ಟಕರವಾದ ಊಟ ಮಾಡಿದ ನಂತರ ಹೊಟ್ಟೆ ಉಬ್ಬುವಿಕೆಯ ಅಹಿತಕರ ಪರಿಣಾಮವು ತ್ವರಿತವಾಗಿ ಆ ಊಟದ ಸಂತೋಷವನ್ನು ಕಡಿಮೆ ಮಾಡುತ್ತದೆ.

    ಅಗಸೆಬೀಜ ಸೇವಿಸೋದ್ರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!? ಶುಗರ್‌ , ಕೊಲೆಸ್ಟ್ರಾಲ್‌ ಕಡಿಮೆ ಆಗುತ್ತಂತೆ!

    ಸಾಮಾನ್ಯವಾಗಿ ಭಾರೀ ಊಟದ ನಂತರ ಕಂಡುಬರುವ ಉಬ್ಬಿದ, ಉಬ್ಬಿದ ಹೊಟ್ಟೆ, ಎಂಡೊಮೆಟ್ರಿಯೊಸಿಸ್ ಇರುವವರಲ್ಲಿಯೂ ಕಾಣಿಸಿಕೊಳ್ಳಬಹುದು. ಇದು ಗರ್ಭಾಶಯದ ಒಳ ಪದರವನ್ನು ಹೋಲುವ ಅಂಗಾಂಶವು ಬೆಳೆಯುವ ಸ್ಥಿತಿಯಾಗಿದೆ. ಎಂಡೊಮೆಟ್ರಿಯೊಸಿಸ್ ಸಾಮಾನ್ಯವಾಗಿ ನೋವಿನಿಂದ ಕೂಡಿದ್ದು, ಸಾಮಾನ್ಯವಾಗಿ ತೀವ್ರವಾದ ಸೆಳೆತ, ಆಯಾಸ ಮತ್ತು ಬಂಜೆತನದ ಸಮಸ್ಯೆಗಳಿಂದ ಗುರುತಿಸಲ್ಪಡುತ್ತದೆ. ಕರುಳಿನ ಸಮಸ್ಯೆಗಳು ಒಮ್ಮೊಮ್ಮೆ ಕಾಣಿಸಿಕೊಳ್ಳುತ್ತವೆ.

    ಹೊಟ್ಟೆ ಉಬ್ಬರ ಸಮಸ್ಯೆ ಎದುರಾದರೆ ನಾವು ಅದನ್ನು ಸಾಧಾರಣವಾಗಿ ನಿರ್ಲಕ್ಷ್ಯ ಮಾಡುತ್ತೇವೆ. ಏಕೆಂದರೆ ಇದು ಸ್ವಲ್ಪ ಹೊತ್ತು ಇದ್ದು ಆನಂತರ ಹೊರಟು ಹೋಗುತ್ತದೆ ಎನ್ನುವ ಧೈರ್ಯದ ಮೇಲೆ. ಆದರೆ ಹೊಟ್ಟೆ ಉಬ್ಬರವನ್ನು ಈ ರೀತಿ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಏಕೆಂದರೆ ಇದು ಮುಂದಿನ ದಿನಗಳಲ್ಲಿ ಇರಿಟೇಬಲ್ ಬೋವೆಲ್ ಸಿಂಡ್ರೋಮ್ ಅಥವಾ ಕರುಳಿಗೆ ಸಂಬಂಧಪಟ್ಟಂತೆ ಸಮಸ್ಯೆಗಳನ್ನು ತಂದು ಕೊಡುತ್ತದೆ. ಒಂದು ವೇಳೆ ನಿಮಗೆ ಊಟದ ನಂತರ ಹೊಟ್ಟೆ ಉಬ್ಬರ ಎದುರಾಗಿದ್ದರೆ ಅಥವಾ ಮುಂಬರುವ ದಿನಗಳಲ್ಲಿ ಹೊಟ್ಟೆ ಉಬ್ಬರ ಉಂಟಾಗಬಾರದು ಎಂದಿದ್ದರೆ, ಅದಕ್ಕೆ ಸುಲಭವಾಗಿ ಹೊರಬರುವ ಪರಿಹಾರಗಳಿವೆ.

    ಯಾವುದೇ ಆಹಾರವನ್ನು ನೀವು ಸೇವನೆ ಮಾಡುತ್ತಿದ್ದರೂ ಅದು ನಿಮ್ಮ ಹೊಟ್ಟೆ ಹಸಿವನ್ನು ನಿಯಂತ್ರಣ ಮಾಡುವಂತೆ ಇರಬೇಕು ಎಂಬುದನ್ನು ಮರೆಯಬೇಡಿ. ಯಾವಾಗ ಹೊಟ್ಟೆ ತುಂಬುತ್ತದೆ ಆ ಸಂದರ್ಭದಲ್ಲಿ ಆಹಾರ ತಿನ್ನುವುದನ್ನು ನಿಲ್ಲಿಸಿಬಿಡಿ.
    ಜೊತೆಗೆ ಆಹಾರ ಸೇವಿಸುವಾಗ ಗಾಳಿಯನ್ನು ಒಳಗೆ ತೆಗೆದು ಕೊಳ್ಳುವುದು ಕೂಡ ನಿಮ್ಮ ಹೊಟ್ಟೆ ಉಬ್ಬರಕ್ಕೆ ಕಾರಣವಾಗ ಬಹುದು. ಬೇಗ ಬೇಗ ತಿನ್ನುವುದು ಕೂಡ ಈ ಸಮಸ್ಯೆಯನ್ನು ತಂದು ಕೊಡುತ್ತದೆ.

    ಹೀಗಾಗಿ ಸಣ್ಣ ಪ್ರಮಾಣದಲ್ಲಿ ಆಹಾರ ಸೇವಿಸಿ ಮತ್ತು ಆಗಾಗ ಸೇವಿಸುವ ಅಭ್ಯಾಸ ಇಟ್ಟುಕೊಳ್ಳಿ. ಕೆಲವೊಂದು ಆಹಾರ ಪದಾರ್ಥಗಳು ನಿಮಗೆ ಹೊಟ್ಟೆ ಉಬ್ಬರ ತಂದುಕೊಡುತ್ತವೆ. ಅವುಗಳ ಬಗ್ಗೆ ಗಮನವಿರಲಿ. ಉದಾಹರಣೆಗೆ ಬೀನ್ಸ್, ಎಲೆ ಕೋಸು, ಹೂಕೋಸು, ಡೈರಿ ಪದಾರ್ಥಗಳು, ಕೃತಕ ಸಿಹಿ ಪದಾರ್ಥಗಳು ಇತ್ಯಾದಿ. ಹೊಟ್ಟೆ ಉಬ್ಬರ ಸಮಸ್ಯೆ ತಂದು ಕೊಡುವ ಇಂತಹ ಆಹಾರಗಳನ್ನು ಸ್ವಲ್ಪ ದೂರವೇ ಇಡಿ.

    ನೀವು ಸೇವಿಸಿದ ಆಹಾರ ಚೆನ್ನಾಗಿ ಜೀರ್ಣವಾಗಬೇಕು ಎಂದರೆ ಜೀರ್ಣ ಪ್ರಕ್ರಿಯೆಗೆ ತಕ್ಕಂತೆ ನೀರು ಕುಡಿಯುವುದು ಕೂಡ ಬಹಳ ಮುಖ್ಯ. ಆದರೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವನೆ ಬೇಡ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಹಾಳು ಮಾಡುತ್ತದೆ.
    ಕಾರ್ಬೋನೇಟೆಡ್ ಪಾನೀಯ ಗಳನ್ನು ಅಂದರೆ ಸೋಡ ಇತ್ಯಾದಿಗಳನ್ನು ಸೇವಿಸಬೇಡಿ. ಇದು ಸಹ ನಿಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಗ್ಯಾಸ್ ಸೇರಿಸಿ ಹೊಟ್ಟೆ ಉಬ್ಬರ ಇನ್ನಷ್ಟು ಜಾಸ್ತಿಯಾಗುವಂತೆ ಮಾಡುತ್ತದೆ.

    ಹೀಗಾಗಿ ಸಾಧ್ಯವಾದಷ್ಟು ನೀರು ಅಥವಾ ಗಿಡಮೂಲಿಕೆ ಚಹಾಗಳನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದರ ಜೊತೆಗೆ ಶುಂಠಿ ಇರಲಿ. ಏಕೆಂದರೆ ಶುಂಠಿ ತನ್ನಲ್ಲಿ ಆಂಟಿ ಇಂಫ್ಲಾಮೇಟರಿ ಗುಣಲಕ್ಷಣಗಳನ್ನು ಒಳಗೊಂಡಿದ್ದು, ನಿಮ್ಮ ಹೊಟ್ಟೆ ಉಬ್ಬರ ಮತ್ತು ಅಜೀರ್ಣತೆ ಸಮಸ್ಯೆ ಯನ್ನು ದೂರ ಮಾಡುತ್ತದೆ. ಊಟಕ್ಕೆ ಮುಂಚೆ ಅಥವಾ ನಂತರದಲ್ಲಿ ಶುಂಠಿ ಚಹಾ ಕುಡಿಯುವುದು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಅನುಕೂಲಕಾರಿ.​

    ನೀವು ಸೇವಿಸುವ ಮೊಸರು, ಗ್ರೀಕ್ ಯುಗರ್ಟ್ ಇತ್ಯಾದಿಗಳು ಕರುಳಿನ ಭಾಗದ ಬ್ಯಾಕ್ಟೀರಿಯಗಳನ್ನು ಸಮತೋಲನ ಪಡಿಸುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಗೆ ಸಾಕಷ್ಟು ಅನುಕೂಲಕಾರಿ ಮತ್ತು ಹೊಟ್ಟೆ ಉಬ್ಬರವನ್ನು ದೂರ ಮಾಡಬಲ್ಲ ಸಾಮರ್ಥ್ಯ ಹೊಂದಿದೆ.

    ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸರಿಪಡಿಸುವಲ್ಲಿ ಪೂರಕಗಳು ಅತ್ಯುತ್ತಮವಾಗಿ ಕೆಲಸ ಮಾಡುತ್ತವೆ ಎಂದು ಹೇಳಬಹುದು.
    ಉದಾಹರಣೆಗೆ ಆಕ್ಟಿವೇಟೆಡ್ ಚಾರ್ಕೋಲ್ ಪೂರಕಗಳು ನಿಮ್ಮ ಹೊಟ್ಟೆಯಲ್ಲಿನ ಗ್ಯಾಸ್ ಅನ್ನು ಹೀರಿಕೊಳ್ಳುವಂತೆ ಮಾಡುತ್ತವೆ ಇದರಿಂದ ಹೊಟ್ಟೆ ಉಬ್ಬರ ಕಡಿಮೆಯಾಗುತ್ತದೆ. ಯಾವುದಕ್ಕೂ ನಿಮ್ಮ ಆರೋಗ್ಯ ತಜ್ಞರ ಬಳಿ ಒಮ್ಮೆ ಇದರ ಬಗ್ಗೆ ಮಾಹಿತಿ ಪಡೆದುಕೊಳ್ಳಿ.

    ಯಾವ ಬಗೆಯ ಆಹಾರವನ್ನು ಸೇವನೆ ಮಾಡುತ್ತಿದ್ದೀರಿ ಮತ್ತು ಅದರಿಂದ ನಿಮಗೆ ಆಗುವ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ನಿಮ್ಮ ಗಮನ ಇರಲಿ. ಏಕೆಂದರೆ ಕೆಲವೊಂದು ಆಹಾರಗಳು ಕೇಳಲು ಆರೋಗ್ಯ ಕರ ಎನಿಸಿದರೂ ಕೂಡ ಹೊಟ್ಟೆ ಉಬ್ಬರ ಉಂಟು ಮಾಡುತ್ತವೆ. ಇಂತಹ ಆಹಾರಗಳಿಂದ ದೂರವಿದ್ದರೆ ಒಳ್ಳೆಯದು. ಕೇವಲ ಆರೋಗ್ಯಕರವಾದ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಹಿತಕರವಾದ ಆಹಾರಗಳನ್ನು ಸೇವಿಸಿ.

    Demo
    Share. Facebook Twitter LinkedIn Email WhatsApp

    Related Posts

    ಅಗಸೆಬೀಜ ಸೇವಿಸೋದ್ರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!? ಶುಗರ್‌ , ಕೊಲೆಸ್ಟ್ರಾಲ್‌ ಕಡಿಮೆ ಆಗುತ್ತಂತೆ!

    June 20, 2025

    ಮಧುಮೇಹಿಗಳ ಗಮನಕ್ಕೆ: ಮನೆಯಲ್ಲಿರುವ ಈ ಮಸಾಲೆಯನ್ನು ಹಾಲಿಗೆ ಬೆರಸಿ ಕುಡಿಯಿರಿ! ಶುಗರ್ ಕಂಟ್ರೋಲ್ ಇರತ್ತೆ!

    June 20, 2025

    ವಸತಿ ಯೋಜನೆಗಳಲ್ಲಿ ಮುಸ್ಲಿಂರಿಗೆ ಮೀಸಲಾತಿ: ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಪ್ರಹ್ಲಾದ್ ಜೋಶಿ!

    June 20, 2025

    ನಿಮಗೂ ಗ್ಯಾಸ್ಟ್ರಿಕ್ ಸಮಸ್ಯೆ ಇದ್ಯಾ!? ಹಾಗಿದ್ರೆ ಈ ಆಹಾರಗಳನ್ನು ತಪ್ಪದೇ ಸೇವಿಸಿ!

    June 20, 2025

    ನಿಮ್ಮ ಮನೆಯಲ್ಲಿ ಮನಿ ಪ್ಲಾಂಟ್ ಇದೆಯೇ..? ಹಾಗಿದ್ರೆ ಅಪ್ಪಿತಪ್ಪಿಯೂ ಈ ತಪ್ಪುಗಳನ್ನ ಮಾಡಬೇಡಿ.!

    June 20, 2025

    ನಿತ್ಯ ಖಾಲಿ ಹೊಟ್ಟೆಗೆ ಉಗುರು ಬೆಚ್ಚಗಿನ ನೀರು ಕುಡಿದ್ರೆ ಲಿವರ್ ಕ್ಲೀನ್ ಆಗುತ್ತಾ? ಇಲ್ಲಿದೆ ಉತ್ತರ!

    June 19, 2025

    ನೀವು ಮಾಡಿದ ಚಪಾತಿ ಹೂವಿನಂತಾಗಬೇಕಾ!? ಹಾಗಿದ್ರೆ ಹಿಟ್ಟು ಕಲಿಸುವಾಗ ಈ ಟಿಪ್ಸ್ ಫಾಲೋ ಮಾಡಿ!

    June 19, 2025

    Lipstick ಹಚ್ಚದೇ ನಿಮ್ಮ ತುಟಿ ನ್ಯಾಚುಲರ್ ಆಗಿ ಕೆಂಪಾಗಬೇಕಾ..? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ ಸಾಕು

    June 19, 2025

    Gruhalakshmi Scheme: ಗೃಹಲಕ್ಷ್ಮಿ ಹಣ ನಿಮಗೆ ಬಂದಿಲ್ಲವೇ..? ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇನು..?

    June 19, 2025

    Chicken Health Care: ಚಿಕನ್ ತಿಂದ್ರೆ ಬರುತ್ತಾ ಕ್ಯಾನ್ಸರ್? ಈ ಬಗ್ಗೆ ವೈದ್ಯರು ಹೇಳೋದೇನು..?

    June 19, 2025

    ಡಯೆಟ್ ಗೆ ಹೇಳಿ ಗುಡ್ ಬಾಯ್: ಬೆಳಗ್ಗೆ ದೋಸೆ-ಇಡ್ಲಿ ತಿಂದೇ ಸ್ಲಿಮ್ ಆಗಬಹುದು! ಹೇಗೆ ಅಂತೀರಾ?

    June 19, 2025

    ಇದು ಹೆಣ್ಮಕ್ಕಳು ತಿಳಿಯಲೇಬೇಕಾದ ವಿಚಾರ: ಈ ವಸ್ತುಗಳನ್ನು ಎಂದಿಗೂ ನಿಮ್ಮ ತವರು ಮನೆಯಿಂದ ತರಲೇಬೇಡಿ!

    June 19, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.