ಚಿಕ್ಕಮಗಳೂರು:- ಮೈಸೂರು ಪ್ರವಾಸಕ್ಕೆ ಹೋಗಿದ್ದ ಚಿಕ್ಕಮಗಳೂರಿನ ವ್ಯಕ್ತಿ ಸೈಬರ್ ವಂಚಕರ ಜಾಲದಲ್ಲಿ ಬಿದ್ದು 25 ಸಾವಿರ ಹಣ ಕಳೆದುಕೊಂಡಿರುವ ಘಟನೆ ಜರುಗಿದೆ.
ರಾಜಾಜಿನಗರ ಇ ಎಸ್ ಐ ಆಸ್ಪತ್ರೆಯ ಕರ್ಮಕಾಂಡ: ವೈದ್ಯರ ನಿರ್ಲಕ್ಷ್ಯಕ್ಕೆ ನವಜಾತ ಶಿಶು ಸಾವು!?
ಚಿಕ್ಕಮಗಳೂರಿನ ಮಹೇಶ್ ಎಂಬುವರು ಕುಟುಂಬದವರ ಜೊತೆ ಮೈಸೂರಿಗೆ ಹೋಗಿದ್ದರು. ಮೈಸೂರಿನಲ್ಲಿನ GRS ಫ್ಯಾಂಟಸಿ ಪಾರ್ಕ್ಗೆ ಹೋಗಲು ಮಹೇಶ್ ಅವರು ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡಲು ಸರ್ಚ್ ಮಾಡಿದ್ದಾರೆ. ಆನ್ಲೈನ್ನಲ್ಲಿ ತೋರಿಸಿದ GRS ಫ್ಯಾಂಟಸಿ ಪಾರ್ಕ್ ಎಂಬ ಲಿಂಕನ್ನು ಮಹೇಶ್ ಕ್ಲಿಕ್ ಮಾಡಿದ್ದಾರೆ. ಅದರಲ್ಲಿ ಬಂದ ಎಲ್ಲ ಆಟಗಳನ್ನು ಕಂಪ್ಲೀಟ್ ಮಾಡಿ, ನಂತರ ಹಣ ಪೇ ಮಾಡಲು ಕಂಪ್ಲೀಟ್ ಬುಕ್ಕಿಂಗ್ಗೆ ಹೋಗಿ ಹೆಸರು, ಇಮೇಲ್ ಐಡಿ, ಮೊಬೈಲ್ ನಂಬರ್, ಪಿನ್ಕೋಡ್ ನಂಬರ್ ಅನ್ನು ಹಾಕಿ ನಂತರ ಗೂಗಲ್ ಪೇ ಮೂಲಕ ಹಣ ಪಾವತಿ ಮಾಡಲು ಹೋದಾಗ ರಾಂಗ್ UPI ಪಿನ್ ಎಂದು ತೋರಿಸಿದೆ. ಸ್ವಲ್ಪ ಸಮಯದ ನಂತರ ಮಹೇಶ್ ಅವರ ಖಾತೆಯಲ್ಲಿದ್ದ 90 ಸಾವಿರ ಹಣ ಡೆಬಿಟ್ ಆಗಿರುವ ಸಂದೇಶ ಬಂದಿದೆ. ಐದು ನಿಮಿಷದ ನಂತರ ಮತ್ತೆ 5000 ಹಣ ಡೆಬಿಟ್ ಆಗಿರುಚ ಮೆಸೇಜ್ ಬಂದಿದೆ.
ಗಾಭರಿಗೊಂಡ ಮಹೇಶ್ ಅವರು ಬ್ಯಾಲೆನ್ಸ್ ಚೆಕ್ ಮಾಡಿದಾಗ 95,000 ಹಣ ವರ್ಗಾವಣೆಯಾಗಿರುವುದು ಗೊತ್ತಾಗಿದೆ. ಕೂಡಲೇ ಮಹೇಶ್ ಸೈಬರ್ ಕ್ರೈಮ್ಗಳ ಸಹಾಯಕ್ಕಾಗಿ ರಾಷ್ಟ್ರೀಯ ಸಹಾಯವಾಣಿ 1930 ಗೆ ಕರೆ ಮಾಡಿ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು 95 ಸಾವಿರದಲ್ಲಿ 70000 ಹಣವನ್ನು ಫ್ರೀಜ್ ಮಾಡಿದ್ದಾರೆ.