ಹಾಸನ:- ಸಕಲೇಶಪುರ ತಾಲೂಕಿನ ಯಡೆಕುಮಾರಿ ಬಳಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದ ಘಟನೆ ಜರುಗಿದೆ. ಪರಿಣಾಮ ಬೆಂಗಳೂರು ಮುರುಡೇಶ್ವರ ರೈಲು ಸ್ಥಗಿತ ಮಾಡಲಾಗಿದೆ.
ಭಾರೀ ಗಾತ್ರದ ಬಂಡೆ ಉರುಳಿ ಬಿದ್ದಿದ್ದು, ಹಳಿಗೆ ಹಾನಿಯಾಗಿದೆ. ಇದರಿಂದಾಗಿ ಬೆಂಗಳೂರು-ಕಣ್ಣೂರು ಘಾಟ್, ಬೆಂಗಳೂರು-ಮುರುಡೇಶ್ವರ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.,
ಕಿಲೋಮೀಟರ್ ಸಂಖ್ಯೆ 74 & 75ರ ನಡುವಿನ ಅರೆಬೆಟ್ಟ ಮತ್ತು ಯಡೆಕುಮಾರಿ ಮಧ್ಯೆ ಭಾಗದಲ್ಲಿ ರೈಲ್ವೆ ಹಳಿ ಮೇಲೆ ಭೂಕುಸಿತವಾಗಿದೆ. ಭಾರೀ ಮಳೆಯಿಂದ ಈ ಅವಾಂತರ ನಡೆದಿದೆ ಎಂದು ತಿಳಿದುಬಂದಿದೆ.