ಕೊಡಗು:- 11 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಮಡಿಕೇರಿಯ ಗೌಡ ಸಮಾಜದಲ್ಲಿ ನೆರವೇರಿದೆ.
ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಅಧಿಕಾರಿಗಳ ಎಡವಟ್ಟು: ಕೈ ಕೊಟ್ಟ ಲೈವ್ ಸ್ಟ್ರೀಮಿಂಗ್, ವಿ. ಸೋಮಣ್ಣ ಗರಂ!
ಯೋಗ ಗುರು ಮಹೇಶ್ ನೇತೃತ್ವದಲ್ಲಿ ನಡೆದ ಯೋಗ ಅಭ್ಯಾಸ ಕಾರ್ಯಕ್ರಮಕ್ಕೆ ಶಾಸಕ ಮಂತರ್ ಗೌಡ ಚಾಲನೆ ಕೊಟ್ಟಿದ್ದಾರೆ. ಕೊಡಗು ಎಸ್ಪಿ ರಾಮರಾಜನ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು ಹಾಗೂ ಯೋಗ ಪಟುಗಳು ಭಾಗಿಯಾಗಿದ್ದರು.
ಇನ್ನೂ ಇಂದು ಅಂತರಾಷ್ಟ್ರೀಯ ಯೋಗ ದಿನ. ಭಾರತ ಮಾತ್ರವಲ್ಲದೇ ಇಡೀ ವಿಶ್ವದಾದ್ಯಂತ ಬಹಳ ಅದ್ಧೂರಿಯಾಗಿ ಯೋಗ ದಿನಾಚರಣೆ ಆಚರಣೆ ಮಾಡಲಾಗ್ತಿದೆ. ಒಂದು ಕಾಲದಲ್ಲಿ ಯೋಗ ಎಂದರೆ ಒಂದು ವಿಚಿತ್ರವಾದ ಅಭ್ಯಾಸ ಮತ್ತು ಅದು ಕೆಲವರಿಗೆ ಮಾತ್ರ ಸೇರಿದ್ದು ಎಂಬ ಭಾವನೆಯಿತ್ತು. ಆದರೆ ಇಂದು ಜಗತ್ತಿನ ಮೂರನೇ ಒಂದಕ್ಕಿಂತಲೂ ಹೆಚ್ಚು ಜನಸಂಖ್ಯೆ ಯೋಗಾಭ್ಯಾಸವನ್ನು ಮಾಡುತ್ತಿದೆ.