ವಿಶಾಖಪಟ್ಟಣಂ: ಯೋಗವು ಎಲ್ಲಾ ಎಲ್ಲೆಗಳು, ವಯಸ್ಸು, ಸಾಮರ್ಥ್ಯವನ್ನು ಮೀರಿ ಎಲ್ಲರಿಗೂ ಸೇರಿದ್ದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ವಿಶಾಖಪಟ್ಟಣಂನ ಆರ್.ಕೆ ಬೀಚ್ನಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದ ಅವರು,
ಟೆಕ್ ಉದ್ಯಮಕ್ಕೆ ಸೆಡ್ಡು: 16ನೇ ವಯಸ್ಸಿನಲ್ಲಿಯೇ 100 ಕೋಟಿ ಮೌಲ್ಯದ ಕಂಪನಿಯ ಮುಖ್ಯಸ್ಥೆ..!
ಯೋಗವು ಎಲ್ಲಾ ಎಲ್ಲೆಗಳು, ವಯಸ್ಸು, ಸಾಮರ್ಥ್ಯವನ್ನು ಮೀರಿ ಎಲ್ಲರಿಗೂ ಸೇರಿದ್ದಾಗಿದೆ. ಇದು ಜಗತ್ತನ್ನು ಒಂದುಗೂಡಿಸಿದೆ. ಅಂತಾರಾಷ್ಟ್ರೀಯ ಯೋಗ ದಿನ ಆರಂಭಗೊಂಡ 11 ವರ್ಷಗಳ ಬಳಿಕ ಯೋಗ ಪ್ರಪಂಚದಾದ್ಯಂತದ ಕೋಟ್ಯಂತರ ಜನರ ಜೀವನದ ಭಾಗವಾಗಿದೆ ಎಂದಿದ್ದಾರೆ.
ಯೋಗ ನಮ್ಮ ಪರಸ್ಪರ ಸಂಬಂಧವನ್ನು ಜಾಗೃತಗೊಳಿಸುತ್ತದೆ. ನಮ್ಮನ್ನು ʻನನ್ನಿಂದ ನಮ್ಮʼ ಕಡೆಗೆ ಕರೆದೊಯ್ಯುತ್ತದೆ. ಯೋಗದ ಮೂಲಕ ಭಾರತವು ಜಗತ್ತಿಗೆ ಚಿಕಿತ್ಸೆಯನ್ನು ನೀಡುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಇದೇ ವೇಳೆ ಯೋಗವನ್ನು ಕ್ರಾಂತಿಯನ್ನಾಗಿ ಪರಿವರ್ತಿಸೋಣ. ಸಮತೋಲನ ಮತ್ತು ಸಾಮರಸ್ಯವನ್ನು ಸಾಧಿಸಲು ಪ್ರತಿದಿನವನ್ನು ಯೋಗದೊಂದಿಗೆ ಪ್ರಾರಂಭಿಸಬೇಕು ಎಂದು ಕರೆ ನೀಡಿದ್ದಾರೆ.