ಬೆಂಗಳೂರು: ಇಂದು ದೇಶಾದ್ಯಂತ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಎಲ್ಲೆಡೆಯೂ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ.
ಅದರಂತೆ ಆಯುಷ್ ಇಲಾಖೆಯ ವತಿಯಿಂದ ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಲಾಗಿದ್ದ
ಯೋಗ ದಿನಾಚರಣೆಯಲ್ಲಿ ಕರ್ನಾಟಕ ವಿಧಾನ ಪರಿಷತ್ ಶಾಸಕ ಹಾಗು ಜೆ.ಡಿ.ಎಸ್ ನಾಯಕರಾದ ಟಿ. ಎ.ಶರವಣ ಭಾಗಿಯಾಗಿದ್ದರು. ನಂತರ ಮಾತನಾಡಿದ ಅವರು,
ಇಂದು ಬೆಳಗ್ಗೆ ವಿಧಾನಸೌಧ ಮುಂಭಾಗದಲ್ಲಿ ಆಯುಷ್ ಇಲಾಖೆ ಆಯೋಜಿಸಿದ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದು ನನಗೆ ಸಂತಸ ತಂದಿದೆ.
ಹಾಗೂ ಯೋಗವು ಮಾನವ ಜೀವನದ ಶಾರೀರಿಕ, ಮಾನಸಿಕ ಹಾಗೂ ಆತ್ಮೀಯ ಸಮತೋಲನದ ಶ್ರೇಷ್ಠ ಕೊಡುಗೆ ಎಂದು ಯೋಗದಿನದ ಶುಭಾಶಯ ಕೋರಿದರು.