ಲಂಡನ್, ಲೀಡ್ಸ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ಆಟಗಾರರು ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿಸುತ್ತಿದ್ದಾರೆ. ನಾಯಕ ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್ ಭರ್ಜರಿಯಾಗಿ ಶತಕ ಬಾರಿಸಿದ್ದು, ಇದೀಗ ಉಪನಾಯಕ ರಿಷಭ್ ಪಂತ್ ಕೂಡ ಸೆಂಚೂರಿ ಹೊಡೆದಿದ್ದಾರೆ.
ಟೆಸ್ಟ್ ಪಂದ್ಯದಲ್ಲಿ ಇಲ್ಲಿವರೆಗೂ ಆರು ಸೆಂಚೂರಿ ಬಾರಿಸಿದ್ದ ಪಂತ್ ಈಗ ಮತ್ತೊಂದು ಶತಕ ಹೊಡೆದು ರೆಕಾರ್ಡ್ ಬರೆದಿದ್ದಾರೆ. ಸೆಂಚೂರಿ ಬಾರಿಸಿದ ಖುಷಿಯಲ್ಲಿ ಮೈದಾನದಲ್ಲಿ ಪಲ್ಟಿ ಹೊಡೆದು ರಿಷಭ್ ಪಂತ್ ಸಂತಸಪಟ್ಟಿದ್ದಾರೆ. 146 ಎಸೆತಗಳನ್ನು ತೆಗೆದುಕೊಂಡ ಪಂತ್ 10 ಬೌಂಡರಿ ಮತ್ತು 4 ಸಿಕ್ಸರ್ಗಳ ಸಹಿತ ತಮ್ಮ ಟೆಸ್ಟ್ ವೃತ್ತಿಜೀವನದ ಏಳನೇ ಶತಕವನ್ನು ದಾಖಲಿಸಿದ್ದಾರೆ.
ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿದ್ದ ಧೋನಿ 6 ಶತಕಗಳನ್ನು ಬಾರಿಸಿದ್ದಾರೆ. ಅವರನ್ನು ಹೊರತುಪಡಿಸಿ, ಬೇರೆ ಯಾವುದೇ ಭಾರತೀಯ ವಿಕೆಟ್ಕೀಪರ್ ಟೆಸ್ಟ್ನಲ್ಲಿ 3 ಕ್ಕಿಂತ ಹೆಚ್ಚು ಶತಕಗಳನ್ನು ಬಾರಿಸಲು ಸಾಧ್ಯವಾಗಿಲ್ಲ. ಇದೀಗ ರಿಷಭ್ ಪಂತ್ ಆ ರೆಕಾರ್ಡ್ನ್ನು ಅಳಿಸಿ ಹಾಕಿದ್ದಾರೆ.
ಶತಕ ಬಾರಿಸಿದ ವಿಕೆಟ್ ಕೀಪರ್ ಬ್ಯಾಟರ್ಸ್
ರಿಷಭ್ ಪಂತ್, 43 ಟೆಸ್ಟ್, 7 ಶತಕ
ಎಂಎಸ್ ಧೋನಿ, 90 ಟೆಸ್ಟ್, 6 ಶತಕ
ವೃದ್ಧಿಮನ್ ಸಹಾ, 40 ಟೆಸ್ಟ್, 3 ಶತಕ
ಫಾರೂಖ್ ಇಂಜಿನಿಯರ್, 46 ಟೆಸ್ಟ್, 2 ಶತಕ
ಸೈಯದ್ ಕಿರ್ಮಾನಿ, 88 ಟೆಸ್ಟ್, 2 ಶತಕ
HUNDRED for Vice-captain Rishabh Pant! 🫡
His 7th TON in Test cricket 👏👏
4⃣0⃣0⃣ up for #TeamIndia in the 1st innings 👌👌
Updates ▶️ https://t.co/CuzAEnBkyu#ENGvIND | @RishabhPant17 pic.twitter.com/IowAP2df6L
— BCCI (@BCCI) June 21, 2025