ನಾವು ಯಾವುದಾದರೂ ವಿಶೇಷವಾದ ಅಡುಗೆ ಮಾಡುವ ಸಂದರ್ಭದಲ್ಲಿ ಒಂದು ವೇಳೆ ನಿಂಬೆ ಹಣ್ಣಿನ ಅವಶ್ಯಕತೆ ಇದ್ದರೆ, ಅದನ್ನು ಎರಡು ಹೋಳು ಮಾಡಿ ನಿಂಬೆ ಹಣ್ಣಿನ ರಸ ಹಿಂಡಿಕೊಂಡು ಸಿಪ್ಪೆಯನ್ನು ಹೊರಗಡೆ ಬಿಸಾಡುತ್ತೇವೆ. ಅಂದ್ರೆ ನಮ್ಮ ಪ್ರಕಾರದಲ್ಲಿ ನಿಂಬೆಹಣ್ಣಿನ ಸಿಪ್ಪೆ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ ಎಂದು. ಯಾವುದಾದರೂ ವಸ್ತುಗಳ ಮೇಲೆ ಬಿಡದೆ ಇರುವ ಕಲೆಗಳನ್ನು ಇದು ಹೋಗಲಾಡಿಸುತ್ತದೆ. ಪಾತ್ರೆಗಳನ್ನು ಬೆಳ್ಳಗಾಗಿಸುತ್ತದೆ. ಹೀಗೆ ಹೇಳುತ್ತ ಹೋದರೆ ನಿಂಬೆಹಣ್ಣಿನ ಸಿಪ್ಪೆ ಇಂದ ಸಿಗುವ ಲಾಭಗಳು ಒಂದೆರಡಲ್ಲ. ಅದೇ ಆರೋಗ್ಯಕ್ಕೆ ಏನು ಲಾಭ ಎಂದು ನೀವು ಇಲ್ಲಿ ತಿಳಿದು ಕೊಳ್ಳಬಹುದು
ಸಿಟ್ರಸ್ ಹಣ್ಣುಗಳಲ್ಲಿ ನಿಂಬೆ ಹಣ್ಣು ಕೂಡ ಒಂದಾಗಿದೆ. ಹುಳಿ ರುಚಿಯನ್ನು ಹೊಂದಿರುವ ಈ ನಿಂಬೆ ರಸದ ಪಾನೀಯ ಕುಡಿಯಲು ತುಂಬಾ ಟೇಸ್ಟಿ ಆಗಿರುತ್ತದೆ. ಜೊತೆಗೆ ಆರೋಗ್ಯಕ್ಕೆ ಕೂಡ ಒಳ್ಳೆಯದು. ಅನೇಕ ಅದ್ಭುತ ಔಷಧೀಯ ಗುಣಗಳಿಂದ ಕೂಡಿರುವ ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ, ಫೈಬರ್, ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಹಾಗಾದ್ರೆ ಇದು ನಮ್ಮ ದೇಹಕ್ಕೆ ಶಕ್ತಿ ಮತ್ತು ಪೋಷಣೆಯನ್ನು ಹೇಗೆ ಒದಗಿಸುತ್ತದೆ.
ಅನೇಕ ಮಂದಿ ಹೊರಗೆ ಬಿಸಿಲಿನಲ್ಲಿ ಸುತ್ತಾಡಿ ಮನೆಗೆ ಹಿಂದಿರುಗಿದ ನಂತರ ನಿಂಬೆಯಿಂದ ಶರಬತ್ತು ತಯಾರಿಸಿ ಕುಡಿಯುತ್ತಾರೆ. ಇನ್ನೂ ಕೆಲ ಮಂದಿ ಆಹಾರಕ್ಕೆ ನಿಂಬೆದ ರಸ ಹಿಂಡಿ ಸೇವಿಸುತ್ತಾರೆ. ಆದರೆ ರಸ ತೆಗೆದುಕೊಂಡ ನಂತರ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯುತ್ತಾರೆ. ಆದರೆ ನಿಂಬೆ ಸಿಪ್ಪೆಯಿಂದಲೂ ಅನೇಕ ಪ್ರಯೋಜನಗಳಿದೆ ಎಂದು ನಿಮಗೆ ತಿಳಿದಿದ್ಯಾ? ಈ ಬಗ್ಗೆ ತಿಳಿಯೋ ಕುತೂಹಲವಿದ್ದರೆ ಈ ಸುದ್ದಿ ಓದಿ
ಹೌದು, ಅನೇಕ ಬಾರಿ ಪಾತ್ರೆಗಳು ಅದರಲ್ಲೂ ವಿಶೇಷವಾಗಿ ಹಿತ್ತಾಳೆ ಪಾತ್ರೆಗಳು ಎಷ್ಟು ಕಪ್ಪಾಗಿರುತ್ತದೆ ಎಂದರೆ ಉತ್ತಮ ಡಿಶ್ ವಾಶರ್ ಪೌಡರ್ನಲ್ಲಿ ತೊಳೆದರೂ ಸರಿಯಾಗಿ ಸ್ವಚ್ಛವಾಗುವುದಿಲ್ಲ. ಅದರಲ್ಲೂ ಹಳೆಯ ನಿಂಬೆ ಸಿಪ್ಪೆ ಇದರಲ್ಲಿ ಬಹಳ ಪರಿಣಾಮಕಾರಿಗಿ ಕಾರ್ಯನಿರ್ವಹಿಸುತ್ತದೆ. ಸಾಮಾನ್ಯವಾಗಿ ಇದು ನಿಮ್ಮ ಮನೆಯಲ್ಲಿಯೇ ಸುಲಭವಾಗಿ ಲಭ್ಯವಿರುವ ವಸ್ತುವಾಗಿದ್ದು, ಇದರ ಸಿಪ್ಪೆಯ ಸಹಾಯದಿಂದ ನೀವು ಕಪ್ಪಾಗಿಸಿದ ಪಾತ್ರೆಗಳನ್ನು ಮತ್ತೆ ಹೊಳೆಯುವಂತೆ ಮಾಡಬಹುದು.
ನಿಂಬೆ ಹಣ್ಣು ಸಿಟ್ರಿಕ್ ಆಮ್ಲವನ್ನು ಹೊಂದಿರುತ್ತದೆ. ಇದರಿಂದಾಗಿ ಪಾತ್ರೆಗಳನ್ನು ಸ್ವಚ್ಛಗೊಳಿಸುವಲ್ಲಿ ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇದರ ಸಹಾಯದಿಂದಾಗಿ ನೀವು ತಾಮ್ರ, ಹಿತ್ತಾಳೆ, ಉಕ್ಕು, ಅಲ್ಯೂಮಿನಿಯಂ ಇತ್ಯಾದಿಗಳಿಂದ ತಯಾರಿಸಿರುವ ಪಾತ್ರೆಗಳನ್ನು ಸ್ವಚ್ಛಗೊಳಿಸಬಹುದು. ಇದು ಹಳೆಯ ಕಪ್ಪು ಬಣ್ಣವನ್ನು ತೆಗೆದುಹಾಕುವುದಲ್ಲದೇ, ಪಾತ್ರೆಗಳಿಂದ ಎಣ್ಣೆಯುಕ್ತತೆಯನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ.
ಮನೆಯಲ್ಲಿ ವರ್ಷಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ಬಳಸುವ ಸಾಕಷ್ಟು ಪಾತ್ರೆಗಳಿರುತ್ತದೆ. ಇವು ಹಳೆಯದಾದಂತೆ ಈ ಪಾತ್ರೆಗಳು ಕಪ್ಪಾಗಿ ಕಾಣಲು ಪ್ರಾರಂಭವಾಗುತ್ತವೆ. ವಿಶೇಷವಾಗಿ ಪೂಜೆಗೆ ಬಳಸುವ ಪಾತ್ರೆಗಳಲ್ಲಿ ನೀವು ಈ ಸಮಸ್ಯೆಯನ್ನು ಕಾಣಬಹುದು. ಈ ಸಮಯದಲ್ಲಿ ನೀವು ನಿಂಬೆಹಣ್ಣನ್ನು ಸಹ ಬಳಸಬಹುದು. ಇದು ನಿಮ್ಮ ಪಾತ್ರೆಗಳನ್ನು ಹೊಸದಾಗಿ ಕಾಣುವಂತೆ ಮಾಡುತ್ತದೆ.
ಎಲ್ಲಾ ಸೀಸನ್ನಲ್ಲಿ ಸಿಗುವ ನಿಂಬೆ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತದೆ. ಹೀಗಾಗಿ ಇದು ಪ್ರತಿಯೊಬ್ಬರ ಮನೆಯಲ್ಲೂ ಇದ್ದೇ ಇರುತ್ತದೆ. ಇದನ್ನು ಅನೇಕ ರೀತಿ ಬಳಸಲಾಗುತ್ತದೆ. ಆಗಾಗ, ನಿಂಬೆಹಣ್ಣಿನ ರಸವನ್ನು ಹಿಂಡಿ ತೆಗೆದ ನಂತರ ಅದರ ಸಿಪ್ಪೆಯನ್ನು ಎಸೆಯಲಾಗುತ್ತದೆ. ಆದರೆ ಇನ್ಮುಂದೆ ನಿಂಬೆ ಸಿಪ್ಪೆಯನ್ನು ಬಿಸಾಡುವ ಅಗತ್ಯವಿಲ್ಲ.
ನಿಂಬೆ ಹಣ್ಣನ್ನು ಹಿಂಡಿ ಅದರ ಒಳಭಾಗವನ್ನು ಬಳಸುವ ಮೂಲಕ ನೀವು ಪಾತ್ರೆಗಳನ್ನು ಸುಲಭವಾಗಿ ಪಾಲಿಶ್ ಮಾಡಬಹುದು. ಪಾತ್ರೆಗಳ ಕಪ್ಪು ಭಾಗಕ್ಕೆ ನಿಧಾನವಾಗಿ ಉಜ್ಜುವುದರಿಂದ ಅವುಗಳನ್ನು ಸ್ವಚ್ಛಗೊಳಿಸಬಹುದು