ಹುಬ್ಬಳ್ಳಿ:ನಗರದಲ್ಲಿನ ಪ್ರತಿಷ್ಠಿತ ಸಂಸ್ಥೆಯ, ಡಾ. ಜಿ.ವ್ಹಿ. ಜೋಶಿ ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 11ನೇ ವಿಶ್ವ ಯೋಗ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಡಾ ಜಿ ವಿ ಜೋಶಿ ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಜಂಟಿ ಕಾರ್ಯದರ್ಶಿಗಳಾದ ಶ್ರೀಮಾನ್ಯ ಸದಾನಂದ ಕಾಮತರವರು ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತುಗಳನ್ನಾಡಿ,
ನಿಂಬೆ ಸಿಪ್ಪೆ ಬಿಸಾಕೋ ಮುನ್ನ ಈ ಸ್ಟೋರಿ ನೋಡಿ: ಇದರಿಂದಾಗುವ ಲಾಭ ಎಷ್ಟು ಗೊತ್ತಾ?
ಶಿರಶಾಸನ ಯೋಗವನ್ನು ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಮುಖ್ಯೋಪಾಧ್ಯರಾದ ಶ್ರೀ ವಿಶಾಲ್ ಬಿನ್ನಾಳರವರು ಅಧ್ಯಕ್ಷತೆ ವಹಿಸಿ ಭಾಷಣ ಮಾಡಿದರು. ದೈಹಿಕ ಶಿಕ್ಷಕಿಯರಾದ ಶ್ರೀಮತಿ ಭಾರತಿ ಪಾಟೀಲ ಹಾಗೂ ಸುಮಾ ಬ್ಯಾಹಟ್ಟಿಯವರು ವಿದ್ಯಾರ್ಥಿಗಳಿಗೆ ಯೋಗದ ಆಸನಗಳನ್ನು ತಿಳಿಸಿಕೊಟ್ಟರು. ಸಂಗೀತ ಶಿಕ್ಷಕಿಯರಾದ ಶ್ರೀಮತಿ ಸವಿತಾ ಕುಲಕರ್ಣಿ ಸಂಗೀತದ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಸಂಚಾಲಕರಾದ ಮಾರುತಿ ತಟ್ಟಿಮನಿ, ಶಾಲೆಯ ವಿದ್ಯಾರ್ಥಿಗಳಾದ ಕುಮಾರಿ ಅನನ್ಯ ಬಿರಾದರ ಪಾಟೀಲ್ ನಿರೂಪಿಸಿದರು, ಕುಮಾರಿ ಜೈನಾ ಶೇಖ್ ಸ್ವಾಗತಿಸಿದರು. ಕುಮಾರ ಶ್ರೇಯಸ್ ರಟಗಲ್ ವಂದನಾರ್ಪಣೆ ಮಾಡಿದರು. ಶಾಲೆಯ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.