ಬೆಂಗಳೂರು:- ಇ.ಡಿ ಫೇಸ್ ಮಾಡೋಕೆ ನಮ್ಮ ಕುಟುಂಬ ರೆಡಿ ಇದೆ ಎಂದು DCM ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಳಗ್ಗೆ ಎದ್ದ ಕೂಡಲೇ ತಲೆನೋವು ಬರುತ್ತಾ!? ಹಾಗಿದ್ರೆ ರಾತ್ರಿ ಮಾಡುವ ಈ ತಪ್ಪು ಕಾರಣ!
ಡಿಕೆ ಸುರೇಶ್ ಇ.ಡಿ ತನಿಖೆಗೆ ಹೋಗಿರುವ ವಿಚಾರದ ಬಗ್ಗೆ ಮಾತನಾಡಿ, ಇ.ಡಿ ವಿಚಾರಣೆ ಎದುರಿಸಲು ನಮ್ಮ ಕುಟುಂಬ ರೆಡಿ ಇದೆ. ಇಡಿ ಕೇಸ್ ಆಯ್ತು, ಯಾರೂ ನಮ್ಮ ರಕ್ಷಣೆಗೆ ಬಂದಿಲ್ಲ. ಕೊನೆಗೆ ನ್ಯಾಯಾಲಯ ರಕ್ಷಣೆಗೆ ಬಂದಿದ್ದು. ಯಾರೋ ಹೇಳಿಕೆ ಕೊಟ್ಟಿದ್ದಾರೆಂದು ಕರೆದಿದ್ದಾರೆ. ಜನಪ್ರತಿನಿಧಿಗಳನ್ನ ಯಾರು ಬೇಕಿದ್ರು ಭೇಟಿ ಮಾಡಬಹುದು. ಅದನ್ನ ಯಾಕೆ ನೀವು ದೊಡ್ಡದಾಗಿ ಬಿಂಬಿಸುತ್ತಿದ್ದೀರಿ ಎಂದರು.
ಗ್ರಾಮ ಸಭೆಯಲ್ಲಿ ಕಮಿಷನ್ ಕೊಟ್ಟು ಮನೆ ಪಡೆಯುವ ಬಿಆರ್ ಪಾಟೀಲ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಆ ವಿಚಾರ ನಾನು ಏನು ಹೇಳಬೇಕೋ ಹೇಳಿದ್ದೀನಿ. ಸಿಎಂ ಮತ್ತು ವಸತಿ ಸಚಿವರು ಅದಕ್ಕೆ ಉತ್ತರ ಕೊಡುತ್ತಾರೆ. ಶಾಸಕರ ಗಮನಕ್ಕೆ ಬರದೇ ಅನುದಾನ ತೆಗೆದುಕೊಂಡು ಹೋಗುವ, ರಾಜೀನಾಮೆ ಕೊಡುವ ಬಗ್ಗೆ ಶಾಸಕ ರಾಜು ಕಾಗೆ ಹೇಳಿಕೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.