ಅಮೆರಿಕದ ವಿರುದ್ಧ ಪ್ರತಿದಾಳಿ ಆರಂಭಿಸಿದ ಇರಾನ್ ಅಮೆರಿಕದ ವಾಯು ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಕತಾರ್-ಇರಾಕ್ನಲ್ಲಿರುವ ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ. ಕತಾರ್ನ ದೋಹಾದಲ್ಲಿರುವ ಅಮೆರಿಕ ವಾಯುನೆಲೆ ಮೇಲೆ ದಾಳಿಯಾಗಿದ್ದು, ಈ ವಾಯುನೆಲೆ ಮೇಲೆ 6 ಖಂಡಾಂತರ ಕ್ಷಿಪಣಿ ಹಾರಿಸಲಾಗಿದೆ. ಈ ದಾಳಿ ಬಳಿಕ ಕತಾರ್ ತನ್ನ ವಾಯುಪ್ರದೇಶವನ್ನು ಬಂದ್ ಮಾಡಿದೆ. ಹೀಗಾಗಿ, ದೋಹಾಗೆ ತೆರಳುತ್ತಿದ್ದ ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ಈ ರಾಶಿಯ ಮಾಜಿ ಸಂಗಾತಿ ಹಠಾತ್ ಭೇಟಿಯಾಗುವರು: ಮಂಗಳವಾರದ ರಾಶಿ ಭವಿಷ್ಯ 24 ಜೂನ್ 2025
ಇರಾನಿನ ಪರಮಾಣು ಸೌಲಭ್ಯಗಳ ಮೇಲಿನ ಅಮೆರಿಕದ ದಾಳಿಗೆ ಶೀಘ್ರದಲ್ಲೇ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂಬ ಇರಾನಿನ ಎಚ್ಚರಿಕೆಗಳ ನಡುವೆ ಕತಾರ್ ತನ್ನ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಿದ ಸ್ವಲ್ಪ ಸಮಯದ ನಂತರ ಈ ದಾಳಿ ನಡೆದಿದೆ. ನಿನ್ನೆ ರಾತ್ರಿ ಕತಾರ್ನ ಆಕಾಶದಲ್ಲಿ ಸ್ಫೋಟಗಳು ಕಂಡುಬಂದವು. ಆದರೂ ಸಾವುನೋವುಗಳು ಅಥವಾ ಹಾನಿಯ ಅಧಿಕೃತ ದೃಢೀಕರಣ ಬಾಕಿ ಉಳಿದಿದೆ.
ಇನ್ನೂ ದಾಳಿ ನಡೆಸಿದ ಕೆಲವೇ ನಿಮಿಷಗಳಲ್ಲಿ ಕತಾರ್ನ ಅಲ್-ಉದೈದ್ನಲ್ಲಿರುವ ಅಮೆರಿಕದ ವಾಯುನೆಲೆಯನ್ನು ನಾಶಗೊಳಿಸಿರುವುದಾಗಿ ಇರಾನ್ನ ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಹೇಳಿಕೊಂಡಿದೆ. ನಮ್ಮ ಅಣುಸ್ಥಾವರಗಳ ಮೇಲೆ ಅಮೆರಿಕ ನಡೆಸಿದ ದಾಳಿಗೆ ಪ್ರತೀಕಾರ ತೀರಿಸಿಕೊಂಡಿದ್ದೇವೆ. ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ನ ಪ್ರಬಲ ಸಶಸ್ತ್ರ ಪಡೆಗಳು ಕತಾರ್ನ ಅಲ್-ಉದೈದ್ನಲ್ಲಿರುವ ಯುಎಸ್ ವಾಯುಪಡೆಯ ನೆಲೆಯ ಮೇಲೆ ದಾಳಿ ಮಾಡಿ ನಾಶಪಡಿಸಿವೆ ಎಂದು ತಿಳಿಸಿದೆ.
ಇನ್ನೂ ಅಮೆರಿಕದ ನೆಲೆಗಳ ಮೇಲೆ ಅಮೆರಿಕ ಬಳಸಿದಷ್ಟೇ ಸಂಖ್ಯೆಯ ಕ್ಷಿಪಣಿ ಬಳಿಸಿದ್ದೇವೆ. ಇದಿನ್ನೂ ಸಾಮಾನ್ಯ ಪ್ರತಿಕ್ರಿಯೆ ಅಷ್ಟೇ. ಇದಕ್ಕೆ ಹೆದರಿರುವ ಅಮೆರಿಕ ಬಹ್ರೇನ್ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಿದೆ ಎಂಬುದಾಗಿಯೂ ಇರಾನ್ ಹೇಳಿದೆ.
ಇರಾನ್ನ ಶಕ್ತಿಶಾಲಿ ಪರಮಾಣು ಕೇಂದ್ರದ ಬಗ್ಗೆ ಫೋರ್ಡೊ, ನಟಾಂಜ್ ಮತ್ತು ಇಸ್ಪಹಾನ್ ಪರಮಾಣು ಕೇಂದ್ರಗಳ ಮೇಲೆ ಒಂದು ದಿನದ ಹಿಂದೆಯಷ್ಟೇ ಅಮೆರಿಕ ಯಶಸ್ವಿ ಬಾಂಬ್ ದಾಳಿ ನಡೆಸಿತ್ತು.
ಅಮೆರಿಕವು 6 ಶಕ್ತಿಶಾಲಿ Northrop B-2 Spirit ಯುದ್ಧವಿಮಾನ ಬಳಸಿಕೊಂಡು ಡಜನ್ಗಟ್ಟಲೇ ಜಿಬಿಯು -57 ಎ/ಬಿ ಬೃಹತ್ ಆರ್ಡ್ನೆನ್ಸ್ ಪೆನೆಟ್ರೇಟರ್ (MOP) ಬಾಂಬ್ಗಳನ್ನ ಬಳಸಿ ದಾಳಿ ನಡೆಸಿದೆ. ಇದನ್ನ ʻಬಂಕರ್ ಬಸ್ಟರ್ʼ ಎಂದೂ ಕರೆಯಲಾಗುತ್ತದೆ
ಅಮೆರಿಕ ದಾಳಿ ಬಳಿಕ ಇರಾನ್, ಇಸ್ರೇಲ್ ಮೇಲೆ ಖಂಡಾಂತರ ಕ್ಷಿಪಣಿ ಹಾರಿಸಿತ್ತು. 10ಕ್ಕೂ ಹೆಚ್ಚು ನಗರಗಳ ಮೇಲೆ 30ಕ್ಕೂ ಹೆಚ್ಚು ಮಿಸೈಲ್ಗಳನ್ನ ಹಾರಿಸಿ ದಾಳಿ ಮಾಡಿತ್ತು. ಆದ್ರೆ ನಿನ್ನೆ ಕತಾರ್ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆಯೇ ದಾಳಿ ನಡೆಸಿದೆ. ಇದು ಜಾಗತಿಕವಾಗಿ ಮತ್ತಷ್ಟು ಉದ್ವಿಗ್ನತೆ ಹೆಚ್ಚಳವಾಗಲು ಕಾರಣವಾಗಿದೆ