Close Menu
Ain Live News
    Facebook X (Twitter) Instagram YouTube
    Tuesday, June 24
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಕಾರು ಓವರ್ ಟೇಕ್ ಮಾಡಿದ್ದಕ್ಕೆ ಹಲ್ಲೆ: ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಸೇರಿ ಮೂವರ ವಿರುದ್ಧ FIR

    By AIN AuthorJune 24, 2025
    Share
    Facebook Twitter LinkedIn Pinterest Email
    Demo

    ನೆಲಮಂಗಲ:- ಇಲ್ಲಿನ ಹಳೇ ನಿಜಗಲ್ ಬಳಿಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕಾರು ಓವರ್ ಟೇಕ್ ಮಾಡಿದ್ದಕ್ಕೆ ಹಲ್ಲೆ ಆರೋಪ ಕೇಳಿ ಬಂದಿದ್ದು, ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಸೇರಿ ಮೂವರ ವಿರುದ್ಧ FIR ದಾಖಲಾಗಿದೆ.

    ಕೊಡಗು: ಕೃಷಿಕರ ಗಮನ ಸೆಳೆದ ಬಟರ್ ಫ್ರೂಟ್ ಹಣ್ಣಿನ ವೈವಿಧ್ಯತೆ ಮೇಳ!

    ಓವರ್‌ಟೇಕ್ ವಿಚಾರವಾಗಿ ನೆಲಮಂಗಲದ ಹಳೇ ನಿಜಗಲ್ ಬಳಿ ಕಾರು ಅಡ್ಡಗಟ್ಟಿ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಸಲ್ಮಾನ್, ಸೈಫ್, ಇಲಿಯಾಜ್, ಗುಲಷಿರ್ ಉನ್ನೀಸಾ ಎಂಬವರು ದೂರು ದಾಖಲಿಸಿದ್ದಾರೆ. ಈ ಬೆನ್ನಲ್ಲೇ ಹೆಗಡೆ ಕಾರಿನಲ್ಲಿದ್ದ ನಾಲ್ವರನ್ನೂ ನೆಲಮಂಗಲ ಡಿವೈಎಸ್‌ಪಿ ಕಚೇರಿಯಲ್ಲಿ ವಿಚಾರಣೆ ನಡೆಸಲಾಗಿದೆ. ಹಲ್ಲೆಯಿಂದ ಗಾಯಗೊಂಡವರನ್ನು ದಾಬಸ್‌ಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಅನಂತ್ ಕುಮಾರ್ ಹೆಗಡೆ ಅವರಿಗೆ ಬೆದರಿಕೆ ಇರುವ ಕಾರಣ ಗನ್ ತೆಗೆದಿರೋದಾಗಿ ಗನ್‌ಮ್ಯಾನ್ ಶ್ರೀಧರ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ದಾಬಸ್ ಪೇಟೆ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದೆ.

    ಘಟನೆ ಸಂಬಂಧ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿಕೆ ಬಾಬಾ ಪ್ರತಿಕ್ರಿಯಿಸಿ, ಅನಂತ್‌ಕುಮಾರ್ ಹೆಗಡೆ ಸೇರಿದಂತೆ ಮೂವರ ಮೇಲೆ ಎಫ್‌ಐಆರ್ ದಾಖಲಾಗಿದೆ, ಎ.1 ಅನಂತ್‌ಕುಮಾರ್ ಹೆಗಡೆ, ಎ2 ಗನ್ ಮ್ಯಾನ್, ಎ3- ಚಾಲಕ ಆರೋಪಿಗಳಾಗಿದ್ದಾರೆ. ತನಿಖೆ ಮಾಡಿ ಅಗತ್ಯವಿದ್ದರೆ ಬಂಧಿಸುತ್ತೆವೆ. ಇದರೊಂದಿಗೆ ಗಾಯಾಳುಗಳ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

    ಅನ್ಯ ಕೋಮಿನವರ ಮೇಲೆ ಹಲ್ಲೆ ಮಾಡಿರುವುದನ್ನು ಅನಂತ ಕುಮಾರ್ ಹೆಗಡೆ ಕಾರು ಚಾಲಕ ಮತ್ತು ಗನ್​ಮ್ಯಾನ್​ ಒಪ್ಪಿಕೊಂಡಿದ್ದಾರೆ. “ಕಾರಿನಲ್ಲಿ ಬೆಂಗಳೂರಿಗೆ ಬರುತ್ತಿದ್ದಾಗ, ಹಿಂದಿನಿಂದ ಬಂದ ಇನ್ನೊವಾ ಕಾರು ಓವರ್ ಟೇಕ್ ಮಾಡಿತು. ಓವರ್ ಟೇಕ್ ಮಾಡಿದ ಕಾರು ನಮ್ಮ ಕಾರಿಗೆ ಟಚ್ ಆಗುವ ಸಂದರ್ಭ ಹಿನ್ನೆಲೆಯಲ್ಲಿ ಚಾಲಕ ಕೇಳಿದ್ದಾನೆ. ಅವರೂ ಕೂಡಾ ಬೈದಿದ್ದಾರೆ ಮಾತಿಗೆ ಮಾತು ಬೆಳೆದಿದೆ” ಎಂದು ಅನಂತ್​ ಕುಮಾರ್ ಹೆಗಡೆ ಹೇಳಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ಕೊಡಗು: ಕೃಷಿಕರ ಗಮನ ಸೆಳೆದ ಬಟರ್ ಫ್ರೂಟ್ ಹಣ್ಣಿನ ವೈವಿಧ್ಯತೆ ಮೇಳ!

    June 24, 2025

    ಮಂಡ್ಯ: ಬಾಲಕಿ ಎಳೆದೊಯ್ದಿದ್ದ ಮೈಕ್ರೋ ಸಿಬ್ಬಂದಿ ಅರೆಸ್ಟ್!

    June 24, 2025

    KRS ಜಲಾಶಯಕ್ಕೆ ಭಾರೀ ನೀರು: ಡ್ಯಾಂ ಗೇಟ್‌ ತೆರದು ಕಾವೇರಿ ನದಿಗೆ ನೀರು ಬಿಡುಗಡೆ ಸಾಧ್ಯತೆ!

    June 23, 2025

    ಗೋಡೌನ್ ನಲ್ಲಿ ದಾಸ್ತಾನು ಮಾಡಲಾಗಿದ್ದ ಪಿಓಪಿ ಗಣಪತಿಗಳು ಸೀಜ್!

    June 23, 2025

    ಅಮೇರಿಕಾವು ಇರಾನ್ ಮೇಲೆ ದಾಳಿ ಮಾಡಿದ್ದು ತಪ್ಪು : ಮಲ್ಲಿಕಾರ್ಜುನ ಖರ್ಗೆ!

    June 23, 2025

    ಕೊಡಗಿನಲ್ಲಿ ಭಾರೀ ಮಳೆ: ಬೆಂಗೂರು ದೋಣಿಕಾಡು ಮತ್ತೆ ಮುಳುಗಡೆ..ದೋಣಿಯಲ್ಲಿ ಓಡಾಟ!

    June 23, 2025

    ಶಾಲಾ ಕೊಠಡಿಯ ಮೇಲ್ಬಾವಣಿ ಕುಸಿತ: ಐವರು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಗಾಯ.!

    June 23, 2025

    ಈಗಿರುವ ಸಿದ್ದರಾಮಯ್ಯ ಲೂಟಿ ಮಾಡೋರಿಗೆ ಗಾಡ್ ಫಾದರ್: ಆರ್. ಅಶೋಕ್

    June 23, 2025

    ರಾಜ್ಯದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಇದೆ: ಬಸವರಾಜ ಬೊಮ್ಮಾಯಿ

    June 23, 2025

    ಕೋಲಾರ: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳ ಬಂಧನ

    June 23, 2025

    ರೋಟರಿ ಕ್ಲಬ್ ಹುಬ್ಬಳ್ಳಿ ಮಿಡಟೌನ್ ವತಿಯಿಂದ ಶಾಲೆಗೆ ಡೆಸ್ಕ್ ವಿತರಣೆ

    June 23, 2025

    ಹುಬ್ಬಳ್ಳಿ: ವಿಶ್ವ ಯೋಗ ದಿನಾಚರಣೆ ಹಾಗೂ ಸಂಗೀತ ದಿನಾಚರಣೆ

    June 23, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.