ಬೆಂಗಳೂರು:- ಇಂದು ಕರ್ನಾಟಕದ ವಿವಿದ ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಭ್ರಷ್ಟರಿಗೆ ಬಿಸಿ ಮುಟ್ಟಿಸಿದ್ದಾರೆ. ಬೆಂಗಳೂರು ಸೇರಿದಂತೆ ಸುಮಾರು 8 ಅಧಿಕಾರಿಗಳಿಗೆ ಸೇರಿದ ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.
ಹಾಸನದಲ್ಲಿ ಧಾರಕಾರ ಮಳೆ: ಶಾಲಾ-ಕಾಲೇಜುಗಳಿಗೆ ಜಿಲ್ಲಾಧಿಕಾರಿ ಘೋಷಿಸಿದ ಜಿಲ್ಲಾಧಿಕಾರಿ!
ಯಾರ ಮೇಲೆ ದಾಳಿ?
ಪ್ರಕಾಶ, ಬಿಬಿಎಂಪಿ ಸಹಾಯಕ ಎಂಜಿನಿಯರ್ (ಗೋವಿಂದರಾಜನಗರ, ಬೆಂಗಳೂರು)
ಡಾ. ಎಸ್. ಪ್ರದೀಪ, ಸಹ ಸಂಶೋಧನಾ ನಿರ್ದೇಶಕ, ಸಾವಯವ ಕೃಷಿ (ಶಿವಮೊಗ್ಗ)
ಲತಾ ಮಣಿ, ಲೆಕ್ಕಾಧಿಕಾರಿ, ಚಿಕ್ಕಮಗಳೂರು ಪುರಸಭೆ
ಕೆ.ಜಿ. ಅಮರನಾಥ್, ಮುಖ್ಯಾಧಿಕಾರಿ, ಆನೇಕಲ್ ಪುರಸಭೆ
ಧ್ರುವರಾಜ್, ನಗರ ಪೊಲೀಸ್ ನಿರೀಕ್ಷಕ, ಗದಗ
ಅಶೋಕ್ ವಲ್ಸಂದ್, ಎಂಜಿನಿಯರ್, ಮಲಪ್ರಭಾ ಪ್ರಾಜೆಕ್ಟ್, ಧಾರವಾಡ
ಮಲ್ಲಿಕಾರ್ಜುನ ಅಲಿಪುರ, ಮಾಜಿ ಎಂಜಿನಿಯರ್, ಆರ್ಡಿಪಿಆರ್, ಕಲಬುರಗಿ
ರಾಮಚಂದ್ರ, ಪಿಡಿಒ ಕಲಬುರಗಿ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಗದಗ, ಧಾರವಾಡ, ಕಲಬುರಗಿ ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ರೇಡ್ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲದೆ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಿಬಿಎಂಪಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರಕಾಶ್ ಮನೆ ಮೇಲೆ ರೇಡ್ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಕಚೇರಿ, ನಿವಾಸ ಸೇರಿದಂತೆ ನಗರದ ಒಟ್ಟು 5 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಗೋವಿಂದರಾಜನಗರ ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರಕಾಶ್, ನಾಗರಬಾವಿ, ಗೋವಿಂದರಾಜನಗರ, ಯಲಹಂಕ ಭಾಗದಲ್ಲಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಆದಾಯಕ್ಕಿಂತ ಹೆಚ್ಚು ಆದಾಯಗಳಿಸಿದ ಹಿನ್ನೆಲೆ ಕಲಬುರಗಿ ಲೋಕಾ ಎಸ್ಪಿ ಬಿ.ಕೆ.ಉಮೇಶ್,ಡಿವೈಎಸ್ ಪಿ ಗೀತಾ ಬೇನಾಳ ನೈತೃತ್ವದಲ್ಲಿ ಈ ದಾಳಿ ನಡೆದಿದೆ. ಅದರಂತೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಇಇ ಮಲ್ಲಿಕಾರ್ಜುನ ಅಲಿಪುರ ಬೆಂಗಳೂರಿನ ಮನೆ ಹಾಗೂ ಕಲಬುರಗಿ ಮನೆ ಕಚೇರಿ ಹಾಗೂ ಸಣ್ಣೂರು ಪಿಡಿಓ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ನಡೆಸಿದ್ದಾರೆ.
ಇನ್ನೂ ನಾಲ್ಕು ದಿನಗಳಲ್ಲಿ ನಿವೃತಿಯಾಗಲಿದ್ದ ಮಲ್ಲಿಕಾರ್ಜುನ ಅಲಿಪುರ ಮನೆ ಮೇಲೆ ದಾಳಿ ಮಾಡಿದ್ದು ಅಕ್ರಮ ಸಂಪಾದನೆ ಇತರ ಆರೋಪಗಳ ಅಡಿಯಲ್ಲಿ ಲೋಕಾಯುಕ್ತ ಪೊಲೀಸರು ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಅದಲ್ಲದೆ ಸಣ್ಣೂರು ಪಿಡಿಓ ರಾಮಚಂದ್ರ ಅವರಿಗೆ ಸೇರಿದ್ದು ಎನ್ನಲಾದ ಸೇಡಂ ರಸ್ತೆಯ ಮಾನಸ ರೆಸಿಡೆನ್ಸಿ ಮೇಲೆ ದಾಳಿ ಮಾಡಲಾಗಿದೆ ಅದೇ ರೀತಿಯಾಗಿ ವಿಜಯಪುರ ಜಿಲ್ಲೆಯ ಬೊಮ್ಮನಹಳ್ಳಿ ಗ್ರಾಮದ ಮನೆ ಮೇಲೆ ದಾಳಿ ಮಾಡಲಾಗಿದೆ.
ಇನ್ನೂ ಲೋಕಾಯುಕ್ತ ಎಸ್ಪಿ ಎಂ.ಹೆಚ್.ಮಂಜುನಾಥ್ ಚೌಧರಿ ನೇತೃತ್ವದ ಟೀಂ, ಶಿವಮೊಗ್ಗ, ಶಿಕಾರಿಪುರ ಹಾಗೂ ಹೊಸನಗರದಲ್ಲಿ ದಾಳಿ ನಡೆಸಿದೆ. ಸಾವಯವ ಕೃಷಿ ವಿಭಾಗದ ಸಹ ಸಂಶೋಧನಾ ನಿರ್ದೇಶಕರು, ಸಹ ಸಂಶೋಧನಾ ನಿರ್ದೇಶಕ ಡಾ ಎಸ್.ಪ್ರದೀಪ್ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರಿನಲ್ಲೂ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ನಗರಸಭೆ ಲೆಕ್ಕಾಧಿಕಾರಿ ಲತಾಮಣಿ ನಿವಾಸದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.