Close Menu
Ain Live News
    Facebook X (Twitter) Instagram YouTube
    Wednesday, June 25
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ತಲೆಯಲ್ಲಿ ವಿಪರೀತ ಹೇನಿದ್ಯಾ? ಹಾಗಿದ್ರೆ ಹೀಗೆ ಮಾಡಿ, ತಕ್ಷಣವೇ ಒಂದೂ ಉಳಿಯದಂತೆ ಉದುರಿಹೋಗುತ್ತೆ!

    By AIN AuthorJune 25, 2025
    Share
    Facebook Twitter LinkedIn Pinterest Email
    Demo

    ಚಿಕ್ಕ ಮಕ್ಕಳಾಗಿದ್ದಾಗ ನಮಗೂ ಕೂಡ ತಲೆಯಲ್ಲಿ ಹೇನುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದವು. ಈಗಲೂ ಕೂಡ ಮಕ್ಕಳಲ್ಲಿ ಈ ಸಮಸ್ಯೆ ತಪ್ಪಿದ್ದಲ್ಲ. ದೊಡ್ಡವರಿಗೂ ತಲೆಯಲ್ಲಿ ಹೇನುಗಳು ಓಡಾಡುತ್ತಿರುತ್ತವೆ. ಇದೇನು ಆಶ್ಚರ್ಯ ಪಡಬೇಕಾದ ವಿಚಾರವೇನಲ್ಲ. ಆದರೆ ಸಾಮಾನ್ಯವಾಗಿ ತಲೆಯಲ್ಲಿ ಹೇನುಗಳು ಇದ್ದರೆ ಅದರಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತವೆ, ಇದಕ್ಕೆ ಪರಿಹಾರಗಳೇನು ಎಂಬುದನ್ನು ಈ ಲೇಖನದಲ್ಲಿ ಓದಿ ತಿಳಿಯಿರಿ.

    ಬೆಳಿಗ್ಗೆ ಎದ್ದಾಕ್ಷಣ ಈ ರೀತಿಯ ಲಕ್ಷಣ ಕಂಡುಬಂದ್ರೆ ಇದು ಥೈರಾಯ್ಡ್ ಸಮಸ್ಯೆ ಎಂದರ್ಥ

    ತಲೆಯಲ್ಲಿ ಡ್ಯಾಂಡ್ರಫ್‌ ಆಗೋದು ಸಾಮಾನ್ಯ. ಆದರೆ ಕೆಲವರ ತಲೆಯಲ್ಲಿ ಹೇನು ಕೂಡ ಆಗುತ್ತದೆ. ಅದರಲ್ಲೂ ಮಕ್ಕಳ ತಲೆಯಲ್ಲಿ ಹೇನು ಆಗೋದು ಜಾಸ್ತಿ. ಹೇನು ಅಂದ್ರೆ ಮತ್ತೇನೂ ಅಲ್ಲ, ತಲೆಯಲ್ಲಿ ಬೆಳೆಯುವ ಪರಾವಲಂಬಿ ಕೀಟಗಳು. ಇದು ಒಬ್ಬರ ತಲೆಯಿಂದ ಮತ್ತೊಬ್ಬರ ತಲೆಗೆ ಹರಡಬಹುದು. ಒಂದು ಹೇನು ತಲೆಗೆ ಸೇರಿದರೆ ಸಾಕು..ಅಲ್ಲೇ ಮೊಟ್ಟೆ ಇಟ್ಟು, ಮತ್ತಷ್ಟು ಹುಳುಗಳನ್ನ ಉಂಟು ಮಾಡುತ್ತವೆ.

    ತಲೆಯಲ್ಲಿ ಹೇನು ಆದ್ರೆ ಅದನ್ನ ಪೂರ್ತಿಯಾಗಿ ನಿವಾರಣೆ ಮಾಡಿಕೊಳ್ಳೋದು ಅಷ್ಟು ಸುಲಭವಲ್ಲ. ಅದರಲ್ಲೂ ವಿಪರೀತ ಹೇನು ಆದ್ರೆ ತೆಗೆಯೋದೇ ಕಷ್ಟ. ಹೇನು ನಾಶ ಮಾಡೋಕೆ ಹಲವು ಬಗೆಯ ಶಾಂಪೂ, ಸೋಪು, ಎಣ್ಣೆಗಳು ಬಂದಿವೆ. ಆದರೆ ಇದರಲ್ಲೆಲ್ಲ ಒಮ್ಮೆ ಕಡಿಮೆಯಾದಂತೆ ಕಂಡ್ರೂ..ಸಂಪೂರ್ಣವಾಗಿ ಹೋಗೋದಿಲ್ಲ. ನೀವೂ ಕೂಡ ಎಷ್ಟೇ ಪ್ರಯತ್ನ ಪಟ್ಟರೂ ಹೇನು ತೆಗೆಯೋಕೆ ಆಗುತ್ತಿಲ್ಲ ಎಂದರೆ..ಐದು ವಿಧಾನಗಳಿಂದ ಕೂದಲ ಆರೈಕೆ ಮಾಡಿಕೊಳ್ಳಿ.

    ಈ ವಿಧಾನಗಳನ್ನ ಹಂತಹಂತವಾಗಿ ಪಾಲಿಸಿ..
    ಹೇನುಗಳನ್ನ ಪೂರ್ತಿಯಾಗಿ ತೆಗೆಯಬೇಕು ಎಂದ್ರೆ ನೀವು ಈ ಕೆಳಗಿನ ವಿಧಾನಗಳನ್ನ ಹಂತಹಂತವಾಗಿ ಪಾಲಿಸಬೇಕು..
    ವಿನೆಗರ್‌ನಿಂದ ತೊಳೆಯಿರಿ
    ಮೊದಲು ತಲೆ ಕೂದಲನ್ನ ವಿನೆಗರ್‌ ಮತ್ತು ಬಿಸಿನೀರಿನಿಂದ ತೊಳೆಯಿರಿ. ಒಂದು ಕಪ್‌ ಉಗುರು ಬೆಚ್ಚಗಿನ ನೀರಿಗೆ ಒಂದು ಕಪ್‌ ಆಪಲ್‌ ಸೈಡರ್‌ ವಿನೆಗರ್‌ ಸೇರಿಸಿ. ಅದನ್ನ ನೇರವಾಗಿ ನೆತ್ತಿಯ ಭಾಗ, ಕೂದಲಿಗೆಲ್ಲ ಹಚ್ಚಿ ಸುಮಾರು 30 ನಿಮಿಷ ಬಿಟ್ಟುಬಿಡಿ. ಈ ಟೈಮ್‌ನಲ್ಲಿ ನೀವು ಹೇರ್‌ ಕವರ್‌ ಹಾಕಿಕೊಳ್ಳಬಹುದು. ನಂತರ ನಾರ್ಮಲ್‌ ಆಗಿ ನೀವು ಬಳಸುವ ಶಾಂಪೂವಿನಿಂದ ಕೂದಲು ತೊಳೆಯಿರಿ. ವಿನೆಗರ್‌ನಲ್ಲಿ ಹೇನುಗಳನ್ನ ನಾಶ ಮಾಡುವ ಸಂಕೀರ್ಣ ಇರುತ್ತದೆ.

    ಸಾರಭೂತ ಎಣ್ಣೆಗಳ ಮಿಶ್ರಣ ಹಚ್ಚಬೇಕು
    ವಿನೆಗರ್‌ನಿಂದ ಕೂದಲು ತೊಳೆದ ಬಳಿಕ ಒಣಗಲು ಬಿಡಿ. ನಂತರ 50 ಎಂಎಲ್‌ ತೆಂಗಿನ ಎಣ್ಣೆ, 2-3 ಹನಿ ಟೀ ಟ್ರೀ ಎಣ್ಣೆ, 1-3 ಹನಿ ಅಪೂರ್ವ ಚಂಪಕ ( ಪರಿಮಳಯುಕ್ತ ಸಂಪಿಗೆ ಎಣ್ಣೆ-ylang ylang essential oil), 50 ಎಂಎಲ್‌ ಆಪಲ್‌ ಸೈಡರ್‌ ವಿನೆಗರ್‌ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ಈ ಮಿಶ್ರಣವನ್ನ ನಿಮ್ಮ ತಲೆ ಕೂದಲ ಬುಡದಿಂದ ಹಿಡಿದು..ಪೂರ್ಣ ಕೂದಲಿಗೆ ಹಚ್ಚಿ. ಸುಮಾರು 20 ನಿಮಿಷ ಬಿಟ್ಬಿಡಿ.

    ತಲೆ ಬಾಚಿ..
    ಎಣ್ಣೆ ಹಚ್ಚಿದ ಬಳಿಕ ಒಂದು ಮೃದು ಹಲ್ಲುಗಳಿರುವ ಬಾಚಣಿಗೆಯಲ್ಲಿ ತಲೆ ಬಾಚಿ. ಹೀಗೆ ಚೆನ್ನಾಗಿ ಬಾಚಿದಾಗ ಹೇನುಗಳು ಕೆಳಕ್ಕೆ ಬೀಳುತ್ತವೆ ಅಥವಾ ನಿಮ್ಮಬಾಚಣಿಗೆಗೆ ಬರುತ್ತವೆ. ತಲೆಗೆ ಎಣ್ಣೆ ಹಾಕಿದಾಗ ಹೇನುಗಳಿಗೆ ತಲೆಯ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ವೇಗವಾಗಿ ಹೋಗಲು ಆಗೋದಿಲ್ಲ. ಎಣ್ಣೆಯ ಸುವಾಸನೆಯೂ ಅವುಗಳು ಚಲಿಸದಂತೆ ಮಾಡುತ್ತವೆ. ಹಾಗಾಗಿ ಅವರು ಬಾಚಣಿಗೆಯ ಜೊತೆಗೆ ಬರುತ್ತವೆ. ನಂತರ ಕೂದಲನ್ನ ಚೆನ್ನಾಗಿ ತೊಳೆಯರಿ.

    ಬಟ್ಟೆಯನ್ನ ಬಿಸಿನೀರಲ್ಲಿ ವಾಶ್‌ ಮಾಡಿ..
    ಹೀಗೆ ತಲೆ ಬಾಚುವಾಗ ನೀವು ಹಾಕಿಕೊಂಡಿರುವ ಬಟ್ಟೆಯನ್ನೆಲ್ಲ ಬಿಸಿನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ಅಷ್ಟೇ ಅಲ್ಲ, ನೀವು ಕೂದಲಿಗೆ ಈ ಆರೈಕೆ ಮಾಡಿದ ದಿನ ನಿಮ್ಮ ಬಾಚಣಿಗೆ, ಬೆಡ್‌ಶೀಟ್‌, ತಲೆದಿಂಬಿನ ಕವರ್‌ನ್ನೂ ತೊಳೆಯಿರಿ. ಯಾಕೆಂದ್ರೆ ಹೇನುಗಳು ಬಟ್ಟೆಯಲ್ಲೂ ಇರುತ್ತವೆ. ಬಿಸಿಬಿಸಿ ನೀರಲ್ಲಿ ತೊಳೆದಾಗ ಹೇನುಗಳು ಸಾಯುತ್ತವೆ. ನೀವು 9 ದಿನಗಳಿಗೆ ಒಮ್ಮೆ ಈ ಕ್ರಮದಲ್ಲಿ ಕೂದಲು ಆರೈಕೆ ಮಾಡಿಕೊಂಡರೆ ಹೇನುಗಳು ನಾಶವಾಗುತ್ತವೆ.

     

     

    Demo
    Share. Facebook Twitter LinkedIn Email WhatsApp

    Related Posts

    ಬೆಳಿಗ್ಗೆ ಎದ್ದಾಕ್ಷಣ ಈ ರೀತಿಯ ಲಕ್ಷಣ ಕಂಡುಬಂದ್ರೆ ಇದು ಥೈರಾಯ್ಡ್ ಸಮಸ್ಯೆ ಎಂದರ್ಥ

    June 25, 2025

    ಅಬ್ಬಬ್ಬಾ.. ಜನರು ಹೆಚ್ಚು ಖರ್ಚು ಮಾಡೋದು ಇದಕ್ಕೇನಾ..? ವರದಿಯಲ್ಲಿ ಶಾಕಿಂಗ್ ವಿಷಯ ಬಯಲು

    June 25, 2025

    ಚಳಿಗಾಲದಲ್ಲಿ ಮೂಲಂಗಿ ಸೇವನೆ ಒಳ್ಳೆಯದು, ಆದ್ರೆ ತಪ್ಪಿಯೂ ಈ ಆಹಾರಗಳ ಜೊತೆ ತಿನ್ನಬೇಡಿ..!

    June 25, 2025

    ಮಳೆಗಾಲದಲ್ಲಿ ಮೊಸರು ಸೇವನೆ ಒಳ್ಳೆಯದೇ? ತಜ್ಞರು ಹೇಳಿದಿಷ್ಟು!

    June 24, 2025

    ಮೊಡವೆಯಿಂದ ಮುಖದ ಕಳೆ ಕುಂದಿದ್ಯಾ!? ಹಾಗಿದ್ರೆ ವಾರ ಪೂರ್ತಿ ಹೀಗೆ ಮಾಡಿ!

    June 24, 2025

    ಮುಟ್ಟಿನ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸುವುದು ಸರಿಯೋ ತಪ್ಪೋ? ತಜ್ಞರು ಹೇಳೋದು ಹೀಗೆ

    June 24, 2025

    Healthy Food: ಎಲ್ಲಕ್ಕಿಂತ ಮಿಗಿಲು ಆರೋಗ್ಯ ಸಂಪತ್ತು; ಮೆಂತ್ಯ ನೀರು ಕುಡಿದ್ರೆ ಸಿಗುತ್ತೆ ಸೂಪರ್ ಪ್ರಯೋಜನಗಳು..!

    June 24, 2025

    ಮಂಗಳವಾರ ಸಂಜೆ ಹೀಗೆ ಮಾಡಿದ್ರೆ ಕಷ್ಟಗಳೆಲ್ಲಾ ಕ್ಷಣಾರ್ಧದಲ್ಲಿ ಮಾಯವಾಗತ್ತೆ!

    June 24, 2025

    ಬೆಳಗ್ಗೆ ಎದ್ದ ಕೂಡಲೇ ತಲೆನೋವು ಬರುತ್ತಾ!? ಹಾಗಿದ್ರೆ ರಾತ್ರಿ ಮಾಡುವ ಈ ತಪ್ಪು ಕಾರಣ!

    June 23, 2025

    ನಿಮಗಿದು ಗೊತ್ತಾ!? ಕರಿಬೇವಿನ ಎಲೆಗಳನ್ನು ನೆನೆಸಿ ನೀರು ಕುಡಿಯುವುದರಿಂದ, ಸಿಗುವ ಆರೋಗ್ಯ ಬೆನಿಫಿಟ್ ಎಷ್ಟು ಗೊತ್ತಾ!?

    June 23, 2025

    ಒಂದೇ ತಿಂಗಳಲ್ಲಿ ಹೊಟ್ಟೆಯ ಕೊಬ್ಬು ಕರಗಿಸಬೇಕಾ? ಹಾಗಿದ್ರೆ ಏಲಕ್ಕಿಯನ್ನು ಹೀಗೆ ತಿನ್ನಿರಿ!

    June 23, 2025

    Milk For Health: ನೀವು ಜಾಸ್ತಿ ಹಾಲು ಕುಡಿತೀರಾ? ಹಾಗಾದ್ರೆ ಈ ವಿಚಾರ ಮೊದ್ಲು ತಿಳಿದುಕೊಳ್ಳಿ!

    June 23, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.