ಬೆಂಗಳೂರು: ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ಬೇರೆ ಬೇರೆ ಕಾಯಿಲೆ ಬಂದಿದ್ದರೆ ಆಯಾ ಕಾಯಿಲೆಗೆ ಬೇರೆ ಬೇರೆ ಮಾತ್ರೆ ಕೊಡುವ ಬದಲು ಒಂದೇ ಮಾತ್ರೆಯಲ್ಲಿ ಅವೆಲ್ಲಾ ಔಷಧವನ್ನು ಅಡಕ ಮಾಡಿದರೆ ಎಲ್ಲಕ್ಕೂ ರಾಮಬಾಣದಂತಾಗುತ್ತದೆ ಎನ್ನುವ ಅಭಿಪ್ರಾಯ ಇದೆ.
ಉದಾಹರಣೆಗೆ, ನಿಮಗೆ ಶೀತ, ಜ್ವರ, ಕೆಮ್ಮು, ಗಂಟಲು ನೋವು ಇತ್ಯಾದಿ ಇದ್ದರೆ ವಿವಿಧ ಸಂಯೋಜನೆಗಳ ಔಷಧಗಳನ್ನು ಕೊಡಬಹುದು. ಈ ರೀತಿಯ ಔಷಧಗಳು ಕೆಲಸ ಮಾಡಬಹುದಾದರೂ ಅವುಗಳ ಅಡ್ಡಪರಿಣಾಮ ಬಹಳಷ್ಟು ಬಾರಿ ಗಂಭೀರವಾಗಿರಬಹುದು. ಹೀಗಾಗಿ, ಅಪಾಯಕಾರಿ ಎನಿಸುವ ಔಷಧ ಸಂಯೋಜನೆಗಳನ್ನು ಗುರುತಿಸಿ ನಿಷೇಧಿಸಲಾಗಿದೆ.
Green Tea: ರಾತ್ರಿ ಮಲಗುವ ಮುನ್ನ ಗ್ರೀನ್ ಟೀ ಕುಡಿಯುವುದು ಒಳ್ಳೆಯದಾ? ಇಲ್ಲಿದೆ ನೋಡಿ ಉತ್ತರ
ಹೌದು ಕಳಪೆ ಗುಣಮಟ್ಟದ 15 ಔಷಧ ಹಾಗೂ ಕಾಂತಿವರ್ಧಕ ಉತ್ಪನ್ನಗಳನ್ನು ನಿಷೇಧ ಮಾಡಿ ಮಾರಾಟ ಮಾಡದಂತೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆದೇಶ ಹೊರಡಿಸಿದ್ದು, ಸಾರ್ವಜನಿಕರು ಈ ಕಾಂತಿವರ್ಧಕಗಳನ್ನು ಬಳಸಬಾರದು ಎಂದು ಸೂಚಿಸಿದೆ.
ಅಸುರಕ್ಷಿತ ಔಷಧ ಅಥವಾ ಕಾಂತಿವರ್ಧಕಗಳನ್ನು ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ದಾಸ್ತಾನು ಮಾಡುವುದಾಗಲಿ, ಮಾರಾಟ ಮಾಡುವುದಾಗಲಿ ಅಥವಾ ಉಪಯೋಗಿಸುವುದಾಗಲಿ ಮಾಡಬಾರದು ಎಂದು ಇಲಾಖೆ ಆದೇಶಿಸಿದೆ.
ಒಂದು ವೇಳೆ ಈ ಔಷಧಿಗಳನ್ನು ದಾಸ್ತಾನು ಮಾಡಿದ್ದಲ್ಲಿ ಕೂಡಲೇ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರ ಗಮನಕ್ಕೆ ತರುವಂತೆ ಸೂಚನೆ ನೀಡಲಾಗಿದೆ.
ಯಾವೆಲ್ಲ ಔಷಧಗಳು ನಿಷೇಧ?
- ಓಂ ಶಾಂತಿ ಗೋಲ್ಡ್ ಕ್ಲಾಸ್ ಕುಂಕುಮ್
- ಕಂಪೌಂಡ್ ಸೋಡಿಯಂ ಲ್ಯಾಕ್ಟೆಟ್ ಇನ್ಜೆಕ್ಷನ್ ಐ.ಪಿ.
- ಕಾಂಪೌಂಡ್ ಸೋಡಿಯಂ ಲ್ಯಾಕ್ಟೇಟ್ ಇನ್ಜೆಕ್ಷನ್ ಐ.ಪಿ
- ಪೋಮೋಲ್-650
- ಮಿಟೊ ಕ್ಯೂ7 ಸಿರಪ್
- ಸ್ಟೈರೆಲ್ ಡಿಲ್ಯೂಯಂಟ್ ಫಾರ್ ರಿಕನ್ಸಿಟ್ಯೂಷನ್ ಆಫ್ ಎನ್ಡಿ
- ಐಬಿ
- ಐಬಿಡಿ ಆ್ಯಂಡ್ ಕಾಂಬಿನೇಷನ್ ವ್ಯಾಕ್ಸಿನ್ಸ್ ಫಾರ್ ಪೌಲ್ಟಿ ಮಲ್ಟಿ ಡೋಸ್ ವಿಲಾ 200 ಎಂಎಲ್
- ಸ್ಪಾನ್ಪ್ಲಾಕ್ಸ್ – ಓಡ್ ಟ್ಯಾಬ್ಲೆಟ್ಸ್
- ಪ್ಯಾಂಟೋಕೋಟ್ – ಡಿಎಆರ್
- ಸೋಡಿಯಂ ಕ್ಲೋರೈಡ್ ಇಂಜೆಕ್ಷನ್ ಐಪಿ ಶೇ. 0.9 ಡಬ್ಲ್ಯು/ವಿ (ಎನ್ಎಸ್)
- ಅಲ್ಫಾ ಲಿಪೋಯಿಕ್ ಆಸಿಡ್, ಫೋಲಿಕ್ ಆಸಿಡ್
- ಮಿಥೈಲ್ಕೋಬಾಲಮಿನ್ ವಿಟಮಿನ್ ಬಿ6 ಮತ್ತು ವಿಟಮಿನ್ ಡಿ3 ಟ್ಯಾಬ್ಲೆಟ್ಸ್
- ಪಿರಾಸಿಡ್ -ಓ ಸಸ್ಪೆನ್ಷನ್ ಗ್ಲಿಮಿಜ್-2,
- ಐರನ್ ಸುಕ್ರೋಸ್ ಇಂಜೆಕ್ಷನ್ ಯುಎಸ್ಪಿ 100 ಎಂಜಿ
- ಕಂಪೌಂಡ್ ಸೋಡಿಯಂ ಲ್ಯಾಕ್ಟೆಟ್ ಇಂಜೆಕ್ಷನ್ ಐಪಿ