ಸೂಪರ್ ಸ್ಟಾರ್ ರಜನಿಕಾಂತ್ ಸದ್ಯ ಮೈಸೂರಿನಲ್ಲಿ ಬೀಡುಬಿಟ್ಟಿದ್ದಾರೆ. ಕಳೆದೊಂದು ವಾರದಿಂದ ತಲೈವಾ ನಟಿಸುತ್ತಿರುವ ಜೈಲರ್ 2 ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. ಕಳೆದ ಭಾನುವಾರಷ್ಟೇ ಅಭಿಮಾನಿಗಳತ್ತ ರಜನಿ ಕೈಬೀಸಿದ್ದ ವಿಡಿಯೋ ವೈರಲ್ ಆಗಿತ್ತು. ಇದೀಗ ತಲೈವರ್ ಜೊತೆ ದೊಡ್ಮನೆ ಹೆಣ್ಮಕ್ಕಳು ಕಾಣಿಸಿಕೊಂಡಿದ್ದಾರೆ.
ಭಾರತೀಯ ಚಿತ್ರರಂಗದ ಮೊದಲ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಅಣ್ಣಾವ್ರ ಮಗಳು ಹಾಗೂ ಮೊಮ್ಮಗಳು ಭೇಟಿಯಾಗಿದ್ದಾರೆ. ಮೈಸೂರಿನಲ್ಲಿ ರಜನಿಯನ್ನು ಪೂರ್ಣಿಮಾ ರಾಮ್ ಕುಮಾರ್ ಹಾಗೂ ಧನ್ಯ ರಾಮ್ ಕುಮಾರ್ ಭೇಟಿಯಾಗಿದ್ದು, ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಅಣ್ಣಾವ್ರ ಕುಟುಂಬಕ್ಕೆ ರಜನಿಕಾಂತ್ ಆಪ್ತರು. ವರನಟ ಡಾ.ರಾಜ್ ಅಂದ್ರೆ ಪಡೆಯಪ್ಪನಿಗೆ ಬಲುಪ್ರೀತಿ. ಹೀಗಾಗಿ ಅವರ ಮಕ್ಕಳು, ಮೊಮ್ಮಕ್ಕಳು ಅಂದ್ರೂ ರಜನಿಗೆ ಇಷ್ಟ.
ಸದ್ಯ ಜೈಲರ್ 2 ಸಿನಿಮಾದಲ್ಲಿ ರಜನಿ ತೊಡಗಿಸಿಕೊಂಡಿದ್ದಾರೆ. ಶಿವಣ್ಣ ಕೂಡ ಈ ಚಿತ್ರದ ಭಾಗವಾಗಿದ್ದಾರೆ.