ಗಾಂಧಿನಗರ:- ಗುಜರಾತ್ ಹೈಕೋರ್ಟ್ನಲ್ಲಿ ವಿಚಿತ್ರ ಘಟನೆ ಜರುಗಿದ್ದು, ಟಾಯ್ಲೆಟ್ನಿಂದಲೇ ವಿಚಾರಣೆಗೆ ಭೂಪನೋರ್ವ ಹಾಜರಾದ ಘಟನೆ ಜರುಗಿದೆ.
ಸಿಲಿಕಾನ್ ಸಿಟಿಯಲ್ಲೊಂದು ಅಮಾನಿಯ ಘಟನೆ: ಪ್ರಾಣಿ ಪ್ರಿಯರು ನೋಡಲೇ ಬೇಕಾದ ಸ್ಟೋರಿ!
ಪ್ರಕರಣವೊಂದರಲ್ಲಿ ಎಫ್ಐಆರ್ ರದ್ದುಗೊಳಿಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಈ ಪ್ರಸಂಗ ನಡೆದಿದೆ. ಆನ್ಲೈನ್ನಲ್ಲಿ ವಿಚಾರಣೆ ಆರಂಭಿಸಲಾಯಿತು. ಈ ವೇಳೆ ಸೂರತ್ನ ದೂರುದಾರ ಅಬ್ದುಲ್ ಸಮದ್ ಶೌಚಾಲಯದಲ್ಲೇ ಕುಳಿತು ವಿಚಾರಣೆಯಲ್ಲಿ ಪಾಲ್ಗೊಂಡರು
ನ್ಯಾಯಮೂರ್ತಿ ನಿರ್ಜಾರ್ ದೇಸಾಯಿ ಅವರು ಅರ್ಜಿ ವಿಚಾರಣೆ ನಡೆಸಿದ್ದರು. ಯೂಟ್ಯೂಬ್ನಲ್ಲಿನ ವೀಡಿಯೊ ಲಿಂಕ್ ಮೂಲಕ ಹಾಜರಾದ ಸಮದ್, ಈ ಸಂದರ್ಭದಲ್ಲಿ ಶೌಚಾಲಯವನ್ನು ಬಳಸುತ್ತಿರುವುದು ಕಂಡುಬಂತು. ಈ ವೀಡಿಯೊ ವೈರಲ್ ಆಗಿದೆ.