ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಚಿನ್ನ, ಬೆಳ್ಳಿಯ ಬೆಲೆ ಗಗನಕ್ಕೇರಿದ್ದು, ಖರೀದಿದಾರರಲ್ಲಿ ನಿರಾಸೆಯನ್ನುಂಟು ಮಾಡಿದೆ. ಚಿನ್ನದ ರೇಟ್ ಒಂದೇ ತೆರನಾಗಿರುವುದಿಲ್ಲ ಒಮ್ಮೊಮ್ಮೊ ಏರಿಕೆಯಾದರೆ ಇನ್ನೊಮ್ಮೆ ಕಡಿಮೆಯಾಗಿರುತ್ತದೆ.
ಹೀಗಾದಾಗ ಬೆಲೆ ಕಡಿಮೆಯಾದ ಸಂದರ್ಭದಲ್ಲೇ ಚಿನ್ನ ಕೊಳ್ಳೋಣವೆಂದು ಗೃಹಿಣಿಯರು ಲೆಕ್ಕಾಚಾರ ಹಾಕುತ್ತಾರೆ. ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆ ಕಡಿಮೆಯಾಗಿದ್ದು, ಹಬ್ಬದ ಸಂಭ್ರಮಕ್ಕೆ ಶೋಭೆ ತರುವ ಬಂಗಾರ ಖರೀದಿಗೆ ಇದುವೇ ಸುಸಮಯವಾಗಿದೆ. ಇಂದಿನ ಬಂಗಾರ, ಬೆಳ್ಳಿ ಹೇಗಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಮಧುಮೇಹಿಗಳೇ ಗಮನಿಸಿ.. ಸಕ್ಕರೆ ಕಾಯಿಲೆಗೆ ಕೆಂಪು ದಂಟಿನ ಸೊಪ್ಪು ವರದಾನ..! ಸಿಕ್ಕರೆ ಬಿಡದೆ ತಿನ್ನಿ
.ನಿನ್ನೆ 22 ಕ್ಯಾರೆಟ್ನ 1 ಗ್ರಾಂ ಚಿನ್ನದ ದರ 8,985 ರೂಪಾಯಿ ಇತ್ತು. ಇದು ಇಂದು 8,930 ಇದ್ದು 55 ರೂಪಾಯಿ ಇಳಿಕೆ ಆಗಿದೆ. ನಿನ್ನೆ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 89,850 ರೂಪಾಯಿ ಇತ್ತು.
ಇಂದು 89,300 ಆಗಿದ್ದು ಬರೋಬ್ಬರಿ 550 ರೂಪಾಯಿ ಕಡಿಮೆ ಆಗಿದೆ. ನಿನ್ನೆ 24 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆ 9,802 ರೂಪಾಯಿ ಇತ್ತು. ಇಂದು 9,742 ರೂಪಾಯಿ ಆಗಿದೆ. ಬೆಲೆಯಲ್ಲಿ 60 ಕಡಿಮೆ ಆಗಿದೆ. ನಿನ್ನೆ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 98,020 ರೂಪಾಯಿ ಇತ್ತು. ಇಂದು 97,420 ರೂಪಾಯಿ ಆಗಿದೆ. ಬೆಲೆಯಲ್ಲಿ 600 ಇಳಿಕೆ ಆಗಿದೆ.
ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹107.80 ಇದೆ. ಇದು ನಿನ್ನೆ ₹107.90 ಇತ್ತು. ಬೆಲೆಯಲ್ಲಿ 10 ಪೈಸೆ ಕಡಿಮೆ ಆಗಿದೆ. ಹಾಗೇ ಇಂದು 10 ಗ್ರಾಂ ಬೆಳ್ಳಿಯ ಬೆಲೆ ₹1,078 ಇದ್ದು ನಿನ್ನೆ ಇದರ ಬೆಲೆ ₹1,079 ಇತ್ತು. ಹೀಗಾಗಿ ಬೆಳ್ಳಿಯ ಬೆಲೆಯಲ್ಲಿ 1 ರೂಪಾಯಿ ಇಳಿಕೆ ಆಗಿದೆ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಅಹಮದಾಬಾದ್ನಲ್ಲಿ 22 ಕ್ಯಾರೆಟ್ ಚಿನ್ನ ₹89,350 ಇದೆ
- ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ ₹89,450 ಇದೆ.
- ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ದರ ₹89,300 ಇದೆ.
- ಬಳ್ಳಾರಿಯಲ್ಲಿ 22 ಕ್ಯಾರೆಟ್ ಚಿನ್ನ ₹89,300 ಇದೆ.