ಹಾಸನ: ಒಂದು ಕಾಲದಲ್ಲಿ ವಯಸ್ಸಾದವರಲ್ಲಿ ಬರುತ್ತಿದ್ದ ಹೃದಯಾಘಾತ ಈಗ ಯುವಕರನ್ನು ಸಹ ಬಲಿಪಶುಗಳನ್ನಾಗಿ ಮಾಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಯುವ ಜನರ ಸಾವಿನ ಸರಣಿ ಮುಂದುವರಿದಿದೆ.
ಅದರಲ್ಲೂ ಹಾಸನ ಜಿಲ್ಲೆಯ ಯುವಕ-ಯುವತಿಯರು ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಇಂದು ಹೃದಯಾಘಾತದಿಂದ ಮತ್ತೋರ್ವ ವ್ಯಕ್ತಿಯ ಸಾವು ಸಂಭವಿಸಿದೆ. ಗೋವಿಂದ (37) ಹೃದಯಾಘಾತದಿಂದ ಸಾವನ್ನಪ್ಪಿದ ಆಟೋ ಚಾಲಕ. ಹಾಸನದ ಸಿದ್ದೇಶ್ವರ ನಗರದಲ್ಲಿ ಘಟನೆ ನಡೆದಿದೆ.
ಮಧುಮೇಹಿಗಳೇ ಗಮನಿಸಿ.. ಸಕ್ಕರೆ ಕಾಯಿಲೆಗೆ ಕೆಂಪು ದಂಟಿನ ಸೊಪ್ಪು ವರದಾನ..! ಸಿಕ್ಕರೆ ಬಿಡದೆ ತಿನ್ನಿ
ಇಂದು ಬೆಳಗ್ಗೆ ಏಳು ಗಂಟೆ ಸಮಯದಲ್ಲಿ ಆಟೋ ಚಲಾಯಿಸುವಾಗ ಗೋವಿಂದ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಆಟೋ ಚಲಾಯಿಸಿಕೊಂಡು ಗೋವಿಂದ ಜಿಲ್ಲಾಸ್ಪತ್ರೆಗೆ ತೆರಳಿದ್ದರು. ಸರ್ಕಾರಿ ಆಸ್ಪತ್ರೆಯಲ್ಲಿ ಗೋವಿಂದ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಒಂದು ತಿಂಗಳ ಅಂತರದಲ್ಲಿ ಹಾಸನ ಜಿಲ್ಲೆಯಲ್ಲಿ ಹದಿನೇಳು ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.