ಬೆಂಗಳೂರು: ನಾಳೆ ಅಂದರೆ ಜೂನ್ 29 ರಾಜಧಾನಿ ಬೆಂಗಳೂರಿನ ಹಲವು ಕಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಯಾವ ಯಾವ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ ಅಂತ ನೋಡುವುದಾದರೆ,
ಶೇಷಾದ್ರಿ ರಸ್ತೆ, ಕುರುಬರ ಸಂಘದ ವೃತ್ತ 1ನೇ ಮುಖ್ಯರಸ್ತೆ, ಗಾಂಧಿ ನಗರ 1ನೇ ಕ್ರಾಸ್ ಮತ್ತು 2ನೇ ಕ್ರಾಸ್ ಭಾಗಗಳು, ಕ್ರೆಸೆಂಟ್ ರಸ್ತೆ, ಶೇಷಾದ್ರಿಪುರಂ, ವಿನಾಯಕ ವೃತ್ತ, ಕೆಂಪೇಗೌಡ ರಸ್ತೆ, ಟ್ಯಾಂಕ್ ಬಂಡ್ ರಸ್ತೆ, ಸುಬೇದಾರ್ ಛತ್ರಂ ರಸ್ತೆ, ಲಕ್ಷ್ಮಣಪುರಿ ಸ್ಲಂ ಏರಿಯಾ, ಕಬ್ಬನ್ಪೇಟೆ, ಚಲುಕೂರ್ಪೇಟೆ, ಚಲುಕೂರ್ಪೇಟೆ, ಸಿ.ಸಿ. ಹೈಗ್ರೌಂಡ್ಸ್, ಮಲ್ಲೇಶ್ವರಂ ಮತ್ತು ಶೇಷಾದ್ರಿಪುರಂನ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ.
ಬೆಳಗ್ಗೆ 10 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಕಡಿತ ಇರಲಿದ್ದು, ಕೆಲವು ಪ್ರದೇಶಗಳಲ್ಲಿ ಸಮಯದಲ್ಲಿ ತುಸು ಬದಲಾವಣೆ ಇರಬಹುದು. ನಿಗದಿತ ತ್ರೈಮಾಸಿಕ ನಿರ್ವಹಣಾ ಕಾರ್ಯಗಳು ಮತ್ತು ನಿರ್ವಹಣಾ ಕಾಮಗಾರಿಯ ಕಾರಣ ವಿದ್ಯುತ್ ಕಡಿತ ಮಾಡಲಾಗುತ್ತದೆ.
ಇದು 66/11 ಕಿಲೋವೋಲ್ಟ್ (ಕೆವಿ) ಎ ಸ್ಟೇಷನ್ ಅಡಿಯಲ್ಲಿ ಬರುವ ಪ್ರದೇಶಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. ವಾರಾಂತ್ಯದಲ್ಲಿ ಗ್ರಿಡ್ನಲ್ಲಿ ಒಟ್ಟಾರೆ ವಿದ್ಯುತ್ ಬಳಕೆಯ ಹೊರೆ ಗಮನಾರ್ಹವಾಗಿ ಕಡಿಮೆಯಾದ ಸಂದರ್ಭದಲ್ಲೇ ಬೆಸ್ಕಾಂ ವಿದ್ಯುತ್ ಕಡಿತ ಯೋಜಿಸುಗತ್ತಿದೆ. ಆ ಮೂಲಕ ಕಚೇರಿ ಕೆಲಸಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.