Close Menu
Ain Live News
    Facebook X (Twitter) Instagram YouTube
    Saturday, June 28
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ನಿಮ್ಮ ಹತ್ತಿರ ಇರುವ ಬೆಳ್ಳಿ ಅಸಲಿನಾ? ನಕಲಿನಾ? ತಿಳಿಯಲು ಹೀಗೆ ಮಾಡಿ!

    By AIN AuthorJune 28, 2025
    Share
    Facebook Twitter LinkedIn Pinterest Email
    Demo

    ಬೆಳ್ಳಿ ಉಂಗುರವನ್ನು ಬೆರಳಿಗೆ ಧರಿಸುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ? ಅವು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ಚಂದ್ರ ಮತ್ತು ಇತರ ಗ್ರಹಗಳ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವಲ್ಲಿ ಬೆಳ್ಳಿ ಉಂಗುರವು ತುಂಬಾ ಪರಿಣಾಮಕಾರಿಯಾಗಿರುತ್ತದೆ. ಇದನ್ನು ಸರಿಯಾದ ಆಚರಣೆಗಳೊಂದಿಗೆ ಹೆಬ್ಬೆರಳಿನ ಮೇಲೆ ಧರಿಸಿದರೆ, ಒಬ್ಬರ ಜೀವನದಲ್ಲಿ ಅನೇಕ ಅದ್ಭುತ ಬದಲಾವಣೆಗಳನ್ನು ಕಾಣಬಹುದು.

    ನಿಮ್ಮ ಬಳಿ ಈ ವಸ್ತುಗಳಿದ್ದರೆ ಹಾವುಗಳು ಹತ್ತಿರ ಸುಳಿಯಲ್ವಂತೆ!

    ಪ್ರಾಚೀನ ಭಾರತೀಯ ಜ್ಯೋತಿಷ್ಯ ಮತ್ತು ಆಯುರ್ವೇದವು ಲೋಹಗಳು ನಮ್ಮ ದೇಹದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಮಾತನಾಡುತ್ತವೆ. ಬೆಳ್ಳಿಯನ್ನು ತಂಪಾದ, ಶಾಂತಗೊಳಿಸುವ ಲೋಹವೆಂದು ಪರಿಗಣಿಸಲಾಗುತ್ತದೆ. ಇದನ್ನು ಧರಿಸುವುದರಿಂದ ಮಾನಸಿಕ, ದೈಹಿಕ ಮತ್ತು ಆಧ್ಯಾತ್ಮಿಕ ಪ್ರಯೋಜನಗಳಿವೆ.

    ಮದುವೆ ಮನೆಯಲ್ಲಿ ಬೆಳ್ಳಿ ತಟ್ಟೆ ಊಟ ಇರಬೇಕು, ಹಬ್ಬಕ್ಕೆ ಬೆಳ್ಳಿ ಲೋಟದಲ್ಲಿ ನೀರು ಕುಡಿಬೇಕು, ಹೆಂಗಸರಿಗೆ ಬೆಳ್ಳಿ ಆಭರಣ ಅಂದ್ರೆ ಎಲ್ಲಿಲ್ಲದ ಪ್ರೀತಿ. ಆದ್ರೆ ಇತ್ತೀಚಿನ ದಿನಗಳಲ್ಲಿ ಬೆಳ್ಳಿ ಹೆಸರಲ್ಲಿ ಮಂಗ್ಯಾ ಮಾಡೋರು ಜಾಸ್ತಿಯಾಗಿದ್ದಾರೆ. ಮಾರ್ಕೆಟ್‌ನಲ್ಲಿ ನೋಡಿದ್ರೆ ಸಾಕು, ಬೆಳ್ಳಿದಂತೆ ಕಾಣೋ ನಕಲಿ ವಸ್ತುಗಳು ತುಂಬಿ ತುಳುಕುತ್ತಿರುತ್ತವೆ. ಇದರಿಂದ ಎಷ್ಟೋ ಜನ ಮೋಸ ಹೋಗಿದ್ದಾರೆ.

    ಹಂಗಾಗಿ, ನೀವು ಕಷ್ಟಪಟ್ಟು ದುಡಿದಿರೋ ದುಡ್ಡು ಕೊಟ್ಟು ಬೆಳ್ಳಿ ಅಂತ ತಗೊಂಡು ಬರ್ತೀರಲ್ಲ, ಅದು ಅಸಲಿಯೋ ನಕಲಿಯೋ ಅಂತ ತಿಳ್ಕೊಳ್ಳೋದು ತುಂಬಾನೇ ಮುಖ್ಯ. ಚಿನ್ನದ ಬಗ್ಗೆ ಎಷ್ಟೋ ಜನಕ್ಕೆ ಗೊತ್ತಿರುತ್ತೆ, ಆದ್ರೆ ಬೆಳ್ಳಿ ಅಂದ್ರೆ ಸುಮ್ನೆ ತಗೊಂಡು ಬಂದು ಬಿಡ್ತಾರೆ. ಆಮೇಲೆ ಮೋಸ ಹೋದ ಮೇಲೆ ಬೇಜಾರಾಗ್ತಾರೆ. ಅದಕ್ಕೆ ಸ್ವಲ್ಪ ಹುಷಾರಾಗಿರಿ. ನೀವು ಶುದ್ಧ ಬೆಳ್ಳಿ ಕೊಳ್ಳಬೇಕು ಅಂದ್ರೆ, ಇಲ್ಲಿದೆ ನೋಡಿ ಒಂದ್ಸಲ ಟ್ರೈ ಮಾಡಿ.

    ನೋಡಿ, ನೂರಕ್ಕೆ ನೂರು ಪಾಲು ಶುದ್ಧ ಬೆಳ್ಳಿ ಇದೆಯಲ್ಲ, ಅದು ಮೃದು ಇರುತ್ತೆ. ಅದಕ್ಕೆ ದಿನಾ ಯೂಸ್ ಮಾಡೋಕೆ ಗಟ್ಟಿ ಇರಲ್ಲ. ಅದಕ್ಕೆ ಬೇರೆ ಲೋಹಗಳನ್ನ ಮಿಕ್ಸ್ ಮಾಡ್ತಾರೆ. ಸಾಮಾನ್ಯವಾಗಿ ಶೇ.92.5 ರಷ್ಟು ಶುದ್ಧ ಬೆಳ್ಳಿ ಇದ್ರೆ ಅದನ್ನ ಸ್ಟರ್ಲಿಂಗ್ ಸಿಲ್ವರ್ ಅಂತ ಕರೀತಾರೆ. ಇದರಲ್ಲಿ ಶೇ.7.5 ರಷ್ಟು ತಾಮ್ರ ಇಲ್ಲಾಂದ್ರೆ ಬೇರೆ ಲೋಹ ಮಿಕ್ಸ್ ಆಗಿರುತ್ತೆ.

    ನಮ್ಮ ಇಂಡಿಯಾದಲ್ಲಿ ಬೆಳ್ಳಿ ಶುದ್ಧ ಇದ್ಯಾ ಇಲ್ವಾ ಅಂತ ಚೆಕ್ ಮಾಡೋಕೆ ಅಂತಾನೆ “ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್” ಅಂತ ಒಂದು ಸಂಸ್ಥೆ ಇದೆ. ಇವರು ಬೆಳ್ಳಿಗೆ ಹಾಲ್‌ಮಾರ್ಕ್ ಹಾಕ್ತಾರೆ. ನೀವು ಅಸಲಿ ಬೆಳ್ಳಿ ತಗೊಂಡ್ರೆ ಅದರ ಮೇಲೆ ಈ ಕೆಳಗಿನ ಗುರುತುಗಳೆಲ್ಲಾ ಇರ್ಬೇಕು.

    BIS ಲೋಗೋ
    ಶುದ್ಧತೆ ನಂಬರ್ (ಉದಾಹರಣೆಗೆ 925 ಅಂದ್ರೆ 92.5% ಶುದ್ಧ ಅಂತ)
    ಟೆಸ್ಟ್ ಮಾಡಿರೋ ಸೆಂಟರ್ ಮತ್ತೆ ತಯಾರಕರ ಕೋಡ್ಇ
    ವೆಲ್ಲಾ ಕರೆಕ್ಟಾಗಿ ಬೆಳ್ಳಿ ಮೇಲೆ ಇದ್ರೆ, ನೀವು ಮೋಸ ಹೋಗೋ ಚಾನ್ಸೇ ಇಲ್ಲ.

    ಮನೆಯಲ್ಲೇ ಬೆಳ್ಳಿ ಶುದ್ಧತೆ ಚೆಕ್ ಮಾಡೋದು ಹೇಗೆ?

    ಒಂದು ವೇಳೆ ನಿಮ್ಮ ಹತ್ರ ಹಾಲ್‌ಮಾರ್ಕ್ ಇಲ್ಲದ ಬೆಳ್ಳಿ ಇದ್ರೆ ಚಿಂತೆ ಮಾಡ್ಬೇಡಿ. ಮನೆಯಲ್ಲೇ ಒಂದ್ಸಲ ಟ್ರೈ ಮಾಡಿ ನೋಡಬಹುದು:

    ಮ್ಯಾಗ್ನೆಟ್ ಟ್ರಿಕ್: ಅಪ್ಪಟ ಬೆಳ್ಳಿ ಯಾವತ್ತೂ ಮ್ಯಾಗ್ನೆಟ್‌ಗೆ ಅಂಟಿಕೊಳ್ಳಲ್ಲ. ಒಂದು ವೇಳೆ ಅಂಟಿಕೊಂಡ್ರೆ ಅದು ಕಲಬೆರಕೆ ಬೆಳ್ಳಿ ಅಂತ ತಿಳ್ಕೊಳ್ಳಿ.

    ಐಸ್ ಟೆಸ್ಟ್: ಬೆಳ್ಳಿ ಬೇಗನೆ ಶಾಖನ ಹೀರಿಕೊಳ್ಳುತ್ತೆ. ಬೆಳ್ಳಿ ಮೇಲೆ ಐಸ್ ಇಟ್ಟರೆ ಅದು ಬೇಗ ಕರಗಿದ್ರೆ, ನಿಮ್ಮ ಬೆಳ್ಳಿ ಅಸಲಿ ಅಂತ ಅರ್ಥ.

    ಇಲ್ಲಪ್ಪಾ, ನನಗೆ ಮನೆಯಲ್ಲಿ ಮಾಡುವ ಟ್ರಿಕ್ ಎಲ್ಲಾ ಸರಿ ಬರುತ್ತಿಲ್ಲ ಅಂದ್ರೆ, ನೀವು ನೇರವಾಗಿ ಆಭರಣ ಅಂಗಡಿಗೆ ಹೋಗಿ ಅಲ್ಲಿರುವ ಆಸಿಡ್ ಟೆಸ್ಟ್ ಅಥವಾ ಎಲೆಕ್ಟ್ರಾನಿಕ್ ಟೆಸ್ಟಿಂಗ್ ಮೆಷಿನ್ ಬಳಸಿಕೊಂಡು ಚೆಕ್ ಮಾಡಿಸಿಕೊಳ್ಳಬಹುದು. ಆಸಿಡ್ ಟೆಸ್ಟ್‌ನಲ್ಲಿ ಒಂದು ವಿಶೇಷ ಕೆಮಿಕಲ್ ಹಾಕಿ ಟೆಸ್ಟ್ ಮಾಡುತ್ತಾರೆ, ಇದರಿಂದ ಬೆಳ್ಳಿಯ ಶುದ್ಧತೆ ಗೊತ್ತಾಗುತ್ತದೆ. ಆದರೆ ಎಲೆಕ್ಟ್ರಾನಿಕ್ ಮೆಷಿನ್ ಟೆಸ್ಟ್ ತುಂಬಾ ಸರಿಯಾಗಿಯೇ ಫಲಿತಾಂಶ ಕೊಡುತ್ತದೆ ಅಂತಾರೆ.

    Demo
    Share. Facebook Twitter LinkedIn Email WhatsApp

    Related Posts

    ನಿಮ್ಮ ಬಳಿ ಈ ವಸ್ತುಗಳಿದ್ದರೆ ಹಾವುಗಳು ಹತ್ತಿರ ಸುಳಿಯಲ್ವಂತೆ!

    June 28, 2025

    ಹಾಸನದಲ್ಲಿ ಹೃದಯಾಘಾತ ಮರಣ ಮೃದಂಗ: ಈ ಲೀಸ್ಟ್ ನೋಡಿದ್ರೆ ನಿಮ್ಮ ಎದೆಬಡಿತ ಜಾಸ್ತಿ ಆಗೋದ್ರಲ್ಲಿ ಡೌಟೇ ಇಲ್ಲ..!

    June 28, 2025

    ಶನಿವಾರ ಈ ಐದು ಕೆಲಸಗಳನ್ನು ಮಾಡಿದ್ರೆ ಶನಿದೋಷ ದೂರವಾಗತ್ತೆ.. ತಪ್ಪದೇ ಮಾಡಿ!

    June 28, 2025

    ಎಷ್ಟು ದಿನಕ್ಕೊಮ್ಮೆ ಬಾತ್ ಟವೆಲ್ ವಾಶ್ ಮಾಡ್ಬೇಕು? ತಜ್ಞರು ಹೇಳುವುದು ಹೀಗಿದೆ!

    June 28, 2025

    ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರ ಇಡುವ ಮಾಹಿತಿ!

    June 28, 2025

    ಬೇರೆಯವರಿಗೆ ತಿಳಿಯದಂತೆ ಕಾಲ್ ರೆಕಾರ್ಡ್ ಮಾಡ್ಬಹುದು: ಈ ಟ್ರಿಕ್ ಫಾಲೋ ಮಾಡಿ!

    June 28, 2025

    ಮಧುಮೇಹಿಗಳೇ ಗಮನಿಸಿ.. ಸಕ್ಕರೆ ಕಾಯಿಲೆಗೆ ಕೆಂಪು ದಂಟಿನ ಸೊಪ್ಪು ವರದಾನ..! ಸಿಕ್ಕರೆ ಬಿಡದೆ ತಿನ್ನಿ

    June 28, 2025

    “ನಿಮ್ಮ ಮದುವೆಯ ಅಥವಾ ಸಪ್ತಪದಿ ಮಹತ್ವವೇನು?

    June 28, 2025

    ಈ ರಾಶಿಯವರ ಹಿತ ಶತ್ರುಗಳನ್ನು ನಿಯಂತ್ರಿಸುವುದೇ ಕಷ್ಟ: ಶನಿವಾರದ ರಾಶಿ ಭವಿಷ್ಯ – 28 ಜೂನ್ 2025

    June 28, 2025

    ಮನೆಯಲ್ಲಿ ಕಪ್ಪು ಹಲ್ಲಿ ಕಾಣಿಸಿಕೊಂಡ್ರೆ ಏನದರ ಸೂಚನೆ: ನಿಮಗೆ ಗೊತ್ತಿಲ್ಲದ ವಿಚಾರ ಇಲ್ಲಿದೆ!

    June 27, 2025

    ನಿಮ್ಮ ಡೊಳ್ಳು ಹೊಟ್ಟೆ ಚಪ್ಪಟೆ ಆಗಲು ಕಾಫಿ ಟೀ ಬದಲು ಬೆಳಗೆದ್ದು ಈ ನೀರು ಕುಡಿಯಿರಿ!

    June 27, 2025

    ಡ್ರೈ ಫ್ರೂಟ್ಸ್ ಒಳ್ಳೆಯದು ಆದರೆ ಇಂಥವರು ಯಾವುದೇ ಕಾರಣಕ್ಕೂ ತಿನ್ನಬಾರದು..!

    June 27, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.