Close Menu
Ain Live News
    Facebook X (Twitter) Instagram YouTube
    Sunday, June 29
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ನಿಮಗಿದು ಗೊತ್ತಾ!? ಹೆಣ್ಣು ಮಕ್ಕಳಿಗೆ ಎಡಭಾಗದಲ್ಲಿ ಏಕೆ ಮೂಗು ಚುಚ್ಚುತ್ತಾರೆ?

    By AIN AuthorJune 29, 2025
    Share
    Facebook Twitter LinkedIn Pinterest Email
    Demo

    ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಯುವತಿಯರು ಮೂಗುತಿ ಚುಚ್ಚಿಸಿಕೊಳ್ಳುವುದನ್ನೇ ಮರೆತು ಬಿಟ್ಟಿದ್ದಾರೆ. ಮೂಗುತಿ ಎಂದರೆ ಸಾಂಪ್ರದಾಯಿಕ ಆಭರಣವೆನಿಸಿಕೊಂಡ ಕಾಲವಿತ್ತು. ಆದರೆ ಈಗ ಅದು ಫ್ಯಾಶನ್ ಕೂಡಾ ಆಗಿದೆ. ಸಾಂಪ್ರದಾಯಿಕ ಆಭರಣವಾದರೂ ಇದು ಅತ್ಯಂತ ಮಹಿಳೆಯರಿಗೆ ಆಕರ್ಷಕವಾಗಿ ಕಾಣಿಸುತ್ತದೆ. ಆದರೆ ಹಿಂದಿನ ಕಾಲದಲ್ಲಿ ಹಿರಿಯರು ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ತಪ್ಪದೇ ಮೂಗುತಿ ಚುಚ್ಚಿಸುತ್ತಿದ್ದರು.

    ಹಾಡಹಗಲೇ ಕೊಡಲಿಯಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ!

    ಭಾರತೀಯ ಸಂಸ್ಕೃತಿಯಲ್ಲಿ ಮೂಗುತಿ ಧರಿಸುವ ಪದ್ಧತಿಯು 16ನೇ ಶತಮಾನದಲ್ಲಿ ಪ್ರಾರಂಭವಾಯಿತು. ಇದು ಮಧ್ಯಪ್ರಾಚ್ಯ ದೇಶಗಳಲ್ಲಿ ಹುಟ್ಟಿಕೊಂಡಿತು ಮತ್ತು ಮುಖ್ಯವಾಗಿ ಮೊಘಲ್ ಚಕ್ರವರ್ತಿಗಳ ಆಳ್ವಿಕೆಯಲ್ಲಿ ಭಾರತದಲ್ಲಿ ಜನಪ್ರಿಯವಾಯಿತು. ಮೂಗುತಿ ಧರಿಸುವ ಸಂಪ್ರದಾಯವು ಭಾರತೀಯ ಸಂಸ್ಕೃತಿಯಲ್ಲಿ ಇರುವ ಕೆಲವು ತತ್ವಗಳನ್ನು ಆಧರಿಸಿದೆ. ಮೂಗಿನ ಮೇಲೆ ಚುಚ್ಚುವುದರಿಂದ ನಮ್ಮ ವ್ಯವಸ್ಥೆಯ ಮೇಲೆ ನಕಾರಾತ್ಮಕ ಶಕ್ತಿ ಕಡಿಮೆಯಾಗುತ್ತದೆ. ಇದು ಸಂಪ್ರದಾಯವಾಗಿದ್ದರೂ ಮೂಗು ಚುಚ್ಚುವುದರಿಂದ ಕೆಲವು ಅನುಕೂಲಗಳು ಮತ್ತು ಅನಾನುಕೂಲಗಳೂ ಇವೆ.

    ನಮ್ಮ ಹಿರಿಯರು ಅನುಸರಿಸಿಕೊಂಡು ಬಂದಂತಹ ಅದೆಷ್ಟೋ ಸಂಪ್ರದಾಯಗಳ ಹಿಂದೆ ಅನೇಕ ಕಾರಣಗಳಿರುತ್ತವೆ. ಅದರಲ್ಲಿಯೂ ನಮ್ಮವರು ಅನುಸರಿಸಿಕೊಂಡು ಬಂದಂತಹ ಸಂಪ್ರದಾಯ ಮತ್ತು ಸಂಸ್ಕೃತಿ ನಮ್ಮ ದೇಶದ ಪರಂಪರೆಯನ್ನು ಬಿಂಬಿಸುತ್ತದೆ. ನೀವು ನೋಡಿರಬಹುದು ಹಿಂದಿನವರು ಅಂದರೆ ನಮ್ಮ ಪೂರ್ವಜರು ಕಿವಿ ಅಥವಾ ಮೂಗು ಚುಚ್ಚಿಕೊಳ್ಳುವ ಅಭ್ಯಾಸವನ್ನು ಕಡ್ಡಾಯಗೊಳಿಸಿದ್ದರು. ಅದರಲ್ಲಿಯೂ ಪ್ರಾಚೀನ ಕಾಲದಲ್ಲಿ, ಪುರುಷರು ಮತ್ತು ಮಹಿಳೆಯರು ಇಬ್ಬರೂ ಕೂಡ ತಮ್ಮ ಕಿವಿಗಳನ್ನು ಚುಚ್ಚಿಕೊಳ್ಳುತ್ತಿದ್ದರು. ಮಾತ್ರವಲ್ಲ, ಮಹಿಳೆಯರು ಮೂಗು ಚುಚ್ಚಿಕೊಳ್ಳುತ್ತಿದ್ದರು. ಆದರೆ ಇದು ಕೇವಲ ಸೌಂದರ್ಯ ಅಥವಾ ಸಂಪ್ರದಾಯಕ್ಕಾಗಿ ಮಾಡಿದ್ದಲ್ಲ ಎಂದರೆ ನೀವು ನಂಬುತ್ತೀರಾ? ಹೌದು. ಈ ರೀತಿ ಮೂಗು, ಕಿವಿ ಚುಚ್ಚುವುದರ ಹಿಂದೆ ಕಾರಣವಿದೆ. ಅದರಲ್ಲಿಯೂ ಹೆಣ್ಣಿಗೆ ಮೂಗು ಚುಚ್ಚಿ ಮುಗೂತಿ ಹಾಕುವುದಕ್ಕೆ ವೈಜ್ಞಾನಿಕ ಕಾರಣವಿದೆ. ಹಾಗಾದರೆ ಏನದು? ಯಾಕೆ ಎಡಭಾಗದಲ್ಲಿ ಮೂಗುತಿ ಹಾಕಬೇಕು ಎಂಬುದನ್ನು ತಿಳಿದುಕೊಳ್ಳಿ.

    ಮೂಗು ಚುಚ್ಚಿಸುವುದು, ಬಿಡುವುದು ಆಕೆಯ ನಿರ್ಧಾರ. ಆದರೆ ಹಿಂದಿನವರು ಅದನ್ನು ಕಡ್ಡಾಯಗೊಳಿಸಿದ್ದರು. ಕೆಲವು ಜನಾಂಗದಲ್ಲಿ ಮೂಗು ಚುಚ್ಚಿಕೊಳ್ಳದಿರುವ ಹೆಣ್ಣು ಮಕ್ಕಳಿಗೆ ಮದುವೆಯನ್ನು ನಿಷೇಧಿಸಲಾಗಿತ್ತು. ಬಳಿಕ ಈ ಪದ್ಧತಿ ಕಡಿಮೆಯಾಗುತ್ತಾ ಬಂತು. ಬಳಿಕ ರೀತಿಯ ಆಚರಣೆಗಳನ್ನು ಪಾಲಿಸುವವರ ಸಂಖ್ಯೆ ಕಡಿಮೆಯಾಯಿತು. ಇಷ್ಟ ಇರುವವರು ಅಥವಾ ಮನೆಯಲ್ಲಿ ಚುಚ್ಚಿಸಿಕೊಳ್ಳಬೇಕು ಎಂಬ ಸಂಪ್ರದಾಯವಿದ್ದವರು ಮುಗೂತಿ ಹಾಕಿಕೊಳ್ಳುತ್ತಿದ್ದರು. ಆದರೆ ಇತ್ತೀಚಿಗೆ ಇದೊಂದು ಟ್ರೆಂಡ್ ಆಗಿ ಬದಲಾಯಿತು. ಪ್ರತಿಯೊಬ್ಬ ಮಹಿಳೆಯೂ ಮೂಗು ಚುಚ್ಚಿಕೊಳ್ಳುವುದಕ್ಕೆ ಆರಂಭಿಸಿದರು. ಕೆಲವರಂತು ಸಿನಿಮಾಗಳನ್ನು ನೋಡಿ ಪ್ರೇರಿತರಾಗಿ, ಮೂಗಿನ ಎರಡು ಕಡೆ ಮುಗೂತಿ ಹಾಕುವುದಕ್ಕೆ ಆರಂಭ ಮಾಡಿದರು. ಅಲಂಕಾರಿಕ ದೃಷ್ಟಿಕೋನದಿಂದ ನೋಡುವುದಾದರೆ ಇದು ಹೆಣ್ಣಿನ ಸೌಂದರ್ಯವನ್ನು ಇಮ್ಮಡಿಗೊಳಿಸುವುದರಲ್ಲಿ ಸಂಶಯವಿಲ್ಲ. ಆದರೆ ಇದು ಅಂದ ಹೆಚ್ಚಿಸುವುದಕ್ಕೆ ಮಾತ್ರವಲ್ಲ ಬದಲಾಗಿ ಈ ಆಭರಣಗಳು ಮಹಿಳೆಯರ ಆರೋಗ್ಯ ಕಾಪಾಡುತ್ತವೆ

    ಕೆಲವು ಕಡೆಗಳಲ್ಲಿ ಮದುವೆಯಾದ ಹೆಂಗಸರು ಇದನ್ನು ಕಡ್ಡಾಯವಾಗಿ ಹಾಕಿಕೊಳ್ಳಬೇಕು. ಇದೊಂದು ವಿವಾಹಿತರ ಸಂಕೇತ ಅದಲ್ಲದೆ ಮೂಗುತಿ ಧರಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ. ಕೆಲವು ನಂಬಿಕೆಗಳ ಪ್ರಕಾರ, ಮೂಗು ಚುಚ್ಚುವುದು ಪಾರ್ವತಿ ದೇವಿಯನ್ನು ಗೌರವಿಸುವ ಒಂದು ಮಾರ್ಗವಾಗಿದೆ. ಇದನ್ನು ಹದಿನಾರು ಅಲಂಕಾರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಮೂಗು ಅಥವಾ ಕಿವಿಗಳನ್ನು ಚುಚ್ಚಿಕೊಳ್ಳುವುದನ್ನು ಅಲಂಕಾರದ ಒಂದು ರೂಪವೆಂದು ನಾವು ಪರಿಗಣಿಸಬಹುದು, ಆದರೆ ಅದರ ಹಿಂದೆ ವೈಜ್ಞಾನಿಕ ಕಾರಣವಿದೆ. ವಾಸ್ತವವಾಗಿ, ಮೂಗು ಚುಚ್ಚುವುದರಿಂದ ಮಹಿಳೆಯರಿಗೆ ಮುಟ್ಟಿನ ನೋವಿನಿಂದ ಪರಿಹಾರ ಸಿಗುತ್ತದೆ ಎಂದು ವೇದಗಳು ಮತ್ತು ಧರ್ಮಗ್ರಂಥಗಳಲ್ಲಿ ಬರೆಯಲಾಗಿದೆ. ಹೆಚ್ಚುವರಿಯಾಗಿ, ಹೆರಿಗೆಯ ಸಮಯದಲ್ಲಿ ಮಗುವಿಗೆ ಜನ್ಮ ನೀಡುವುದು ಸಹ ತುಂಬಾ ಸುಲಭವಾಗುತ್ತದೆ ಇದು ಆ ನೋವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಈ ಬಗ್ಗೆ ನಡೆದ ಕೆಲವು ಸಂಶೋಧನಗೆಳು ಕೂಡ ಇದಕ್ಕೆ ಪೂರಕವಾಗಿದೆ. ಮಾತ್ರವಲ್ಲ ಇದು ಮೈಗ್ರೇನ್ ನೋವಿನಿಂದ ಕೂಡ ಪರಿಹಾರ ನೀಡುತ್ತದೆ.

    ಸಾಮಾನ್ಯವಾಗಿ ಕೆಲವರಿಗೆ ಈ ಪ್ರಶ್ನೆ ಉದ್ಭವ ಆಗಬಹುದು. ಹುಡುಗಿಯರು ಯಾಕೆ ಮೂಗಿನ ಎಡಭಾಗದಲ್ಲಿಯೇ ಮೂಗುತಿ ಹಾಕುತ್ತಾರೆ? ನೀವು ಎಂದಾದರೂ ಇದರ ಬಗ್ಗೆ ಯೋಚಿಸಿದ್ದೀರಾ? ವಾಸ್ತವದಲ್ಲಿ, ಮೂಗಿನ ಎಡಭಾಗವು ಕೆಲವು ಸಂತಾನೋತ್ಪತ್ತಿ ಅಂಗಗಳಿಗೆ ಸಂಬಂಧಿಸಿದೆ. ಈ ಭಾಗದಲ್ಲಿ ಚುಚ್ಚುವುದರಿಂದ ಹೆರಿಗೆ ನೋವು ಗಮನಾರ್ಹವಾಗಿ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಎಡಭಾಗದಲ್ಲಿಯೇ ಚುಚ್ಚುವುದರಿಂದ ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ ಎಂದು ಕೆಲವರು ಹೇಳುತ್ತಾರೆ. ಮೂಗು ಅಥವಾ ಕಿವಿಗಳನ್ನು ಬಾಲ್ಯದಿಂದ ಪ್ರೌಢಾವಸ್ಥೆಯವರೆಗೆ ಯಾವುದೇ ವಯಸ್ಸಿನಲ್ಲಿಯೂ ಚುಚ್ಚಬಹುದು. ಇದು ದೇಹದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ.

    Demo
    Share. Facebook Twitter LinkedIn Email WhatsApp

    Related Posts

    ದಿನಕ್ಕೆ ಎಷ್ಟು ಬಾರಿ ಮೊಬೈಲ್ ಚಾರ್ಜ್ ಮಾಡಬೇಕು ಗೊತ್ತಾ!? ಮೊಬೈಲ್ ಪ್ರಿಯರು ತಿಳಿಯಬೇಕು!

    June 29, 2025

    ಈ ರಾಶಿಯವರ ಉದ್ಯೋಗದಲ್ಲಿ ಅತಿಯಾದ ತೊಂದರೆಯಿಂದ ಜಿಗುಪ್ಸೆ – ಭಾನುವಾರದ ರಾಶಿ ಭವಿಷ್ಯ – 29 ಜೂನ್ 2025

    June 29, 2025

    ಅತಿಯಾದ ಮೊಬೈಲ್ ಬಳಕೆ ಅನೇಕ ರೋಗಗಳಿಗೆ ಕಾರಣವಾಗುತ್ತಂತೆ!

    June 28, 2025

    ಆನೆಗಳ ಕಿವಿ ಏಕೆ ದೊಡ್ಡದಾಗಿರುತ್ತವೆ? ಇದನ್ನು ನೀವು ತಿಳಿಯಲೇಬೇಕು!

    June 28, 2025

    ಅಲೋವೆರಾ ಗಿಡವನ್ನು ಮನೆಯ ಈ ದಿಕ್ಕಿನಲ್ಲಿ ನೆಟ್ಟರೆ ಹಣದ ಕೊರತೆಯೇ ಇರುವುದಿಲ್ಲ!

    June 28, 2025

    ನಿಮ್ಮ ಹತ್ತಿರ ಇರುವ ಬೆಳ್ಳಿ ಅಸಲಿನಾ? ನಕಲಿನಾ? ತಿಳಿಯಲು ಹೀಗೆ ಮಾಡಿ!

    June 28, 2025

    ನಿಮ್ಮ ಬಳಿ ಈ ವಸ್ತುಗಳಿದ್ದರೆ ಹಾವುಗಳು ಹತ್ತಿರ ಸುಳಿಯಲ್ವಂತೆ!

    June 28, 2025

    ಹಾಸನದಲ್ಲಿ ಹೃದಯಾಘಾತ ಮರಣ ಮೃದಂಗ: ಈ ಲೀಸ್ಟ್ ನೋಡಿದ್ರೆ ನಿಮ್ಮ ಎದೆಬಡಿತ ಜಾಸ್ತಿ ಆಗೋದ್ರಲ್ಲಿ ಡೌಟೇ ಇಲ್ಲ..!

    June 28, 2025

    ಶನಿವಾರ ಈ ಐದು ಕೆಲಸಗಳನ್ನು ಮಾಡಿದ್ರೆ ಶನಿದೋಷ ದೂರವಾಗತ್ತೆ.. ತಪ್ಪದೇ ಮಾಡಿ!

    June 28, 2025

    ಎಷ್ಟು ದಿನಕ್ಕೊಮ್ಮೆ ಬಾತ್ ಟವೆಲ್ ವಾಶ್ ಮಾಡ್ಬೇಕು? ತಜ್ಞರು ಹೇಳುವುದು ಹೀಗಿದೆ!

    June 28, 2025

    ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರ ಇಡುವ ಮಾಹಿತಿ!

    June 28, 2025

    ಬೇರೆಯವರಿಗೆ ತಿಳಿಯದಂತೆ ಕಾಲ್ ರೆಕಾರ್ಡ್ ಮಾಡ್ಬಹುದು: ಈ ಟ್ರಿಕ್ ಫಾಲೋ ಮಾಡಿ!

    June 28, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.