ಬೆಂಗಳೂರು:- ಇತ್ತೀಚಿನ ದಿನಗಳಲ್ಲಿ ಬ್ರ್ಯಾಂಡೆಡ್ ಹೆಸರಲ್ಲಿ ನಕಲಿ ಬಟ್ಟೆಗಳನ್ನು ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಕಿಡಿಗೇಡಿಗಳು ದುಡ್ಡು ಮಾಡುವ ಸಲುವಾಗಿ ಹೊರರಾಜ್ಯಗಳಿಂದ ಬಟ್ಟೆಗಳನ್ನು ಖರೀದಿಸಿ ಅದನ್ನು ಪ್ರತಿಷ್ಟಿತ ಕಂಪನಿಗಳ ಹೆಸರಲ್ಲಿ ಮಾರಾಟ ಮಾಡಿ ಜನರಿಗೆ ವಂಚನೆ ಮಾಡುತ್ತಿದ್ದಾರೆ.
ದಿನಕ್ಕೆ ಎಷ್ಟು ಬಾರಿ ಮೊಬೈಲ್ ಚಾರ್ಜ್ ಮಾಡಬೇಕು ಗೊತ್ತಾ!? ಮೊಬೈಲ್ ಪ್ರಿಯರು ತಿಳಿಯಬೇಕು!
ಅದರಂತೆ ನಗರದಲ್ಲಿ ಎಚ್ಚೆತ್ತಿರುವ ಪೊಲೀಸರು, ನಕಲಿ ಬ್ರಾಂಡೆಡ್ ಜೀನ್ಸ್ ತಯಾರಿಕಾ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಸುಮಾರು 30 ಲಕ್ಷಕ್ಕೂ ಅಧಿಕ ಮೌಲ್ಯದ ಜೀನ್ಸ್ ಸೀಜ್ ಮಾಡಿದ್ದಾರೆ. ಈ ಘಟನೆ ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಶನಿವಾರ ತಡರಾತ್ರಿ ಅಂದ್ರೆ ನಿನ್ನೆ ನಕಲಿ ಬ್ರಾಂಡೆಡ್ ಜೀನ್ಸ್ ತಯಾರಿಕಾ ಅಡ್ಡೆ ಮೇಲೆ ಮಾದನಾಯಕನಹಳ್ಳಿ ಪೊಲೀಸರು ದಾಳಿ ನಡೆಸಿ ಪೂಮಾ, ನೈಕಿ ಬ್ರಾಂಡ್ನ ಲಕ್ಷಾಂತರ ಮೌಲ್ಯದ ನಕಲಿ ಉತ್ಪನ್ನ ಸೀಜ್ ಮಾಡಿದ್ದಾರೆ. ಅಲ್ಲದೇ ಲೆವಿಸ್, ಪೋಲೋ, ರಾಲ್ಫ್ ಲಾರೆನ್ ಬ್ರಾಂಡ್ ಜೀನ್ಸ್ ನಕಲು ತಯಾರಿಸಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಎ.ಎ.ಫ್ಯಾಷನ್ಸ್ ಹೆಸರಿನಲ್ಲಿ ಬ್ರಾಂಡೆಡ್ ಜೀನ್ಸ್ ನಕಲಿ ತಯಾರಿಕೆ ಮಾಡಲಾಗುತ್ತಿತ್ತು. ಲೈಸೆನ್ಸ್ ಇಲ್ಲದೇ ಅಕ್ರಮವಾಗಿ ಗೋಡೌನ್ನಲ್ಲಿ ಬ್ರಾಂಡೆಡ್ ಬಟ್ಟೆಗಳ ನಕಲಿ ಪೀಸ್ ತಯಾರಿಕೆ ನಡೆಯುತ್ತಿತ್ತು. ಈ ಹಿನ್ನೆಲೆ ಮಾದನಾಯಕನಹಳ್ಳಿ ವ್ಯಾಪ್ತಿಯ ಬೈಲಕೋನೇನಹಳ್ಳಿಯಲ್ಲಿ ಪೊಲೀಸ್ ದಾಳಿ ನಡೆಸಿ ನಕಲಿ ಜೀನ್ಸ್ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.