ಕೊಪ್ಪಳ:- ಇತ್ತೀಚಿನ ದಿನಗಳಲ್ಲಿ ಕಳ್ಳರ ಕಾಟ ಹೆಚ್ಚಾಗಿದೆ. ಅದರಂತೆ ಬುರ್ಖಾ ಹಾಕಿಕೊಂಡು ಬಂದ ಕಳ್ಳಿಯರು ಗೃಹಬಳಕೆಯ ಸಾಮಾಗ್ರಿಗಳನ್ನು ಕ್ಷಣಮಾತ್ರದಲ್ಲಿ ಕಳ್ಳತನ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಜರುಗಿದೆ.
ನಿಮಗಿದು ಗೊತ್ತಾ!? ಹೆಣ್ಣು ಮಕ್ಕಳಿಗೆ ಎಡಭಾಗದಲ್ಲಿ ಏಕೆ ಮೂಗು ಚುಚ್ಚುತ್ತಾರೆ?
ಬುರ್ಖಾ ಧರಿಸಿಕೊಂಡು ಬಂದ ಇಬ್ಬರು ಮಹಿಳೆಯರು ಆಹಾರ ಸಾಮಾಗ್ರಿಗಳನ್ನು ತಮ್ಮ ಬಟ್ಟೆಯೊಳಗೆ ಸೇರಿಸಿಕೊಂಡು ಕಳ್ಳತನ ಮಾಡಿದ್ದಾರೆ. 20 ಸಾವಿರ ಮೌಲ್ಯದ ಆಹಾರ ಸಾಮಾಗ್ರಿಗಳನ್ನು ಕಳ್ಳತನ ಮಾಡಿದ್ದಾರೆ. ಕಳ್ಳಿಯರ ಕೈಚಳಕ ಸಿಸಿಟಿವಿಯಲ್ಲಿ ಕಂಡು ಅಂಗಡಿ ಮಾಲೀಕರು ಶಾಕ್ ಆಗಿದ್ದಾರೆ. ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ದೂರು ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.