ವಾಷಿಂಗ್ಟನ್:- ಅರೇಂಜ್ಡ್ ಮ್ಯಾರೇಜ್ ಆಗಿ ಅಮೆರಿಕಕ್ಕೆ ಹೋಗಿದ್ದ ಮಹಿಳೆ ಏಕಾಏಕಿ ನಾಪತ್ತೆಯಾಗಿದ್ದಾರೆ. 24 ವರ್ಷದ ಸಿಮ್ರನ್ ನಾಪತ್ತೆಯಾದ ಭಾರತೀಯ ಮಹಿಳೆ.
ಸರಣಿ ಹೃದಯಾಘಾತ ಪ್ರಕರಣ: ಹಾಸನದ 5 ತಾಲೂಕಿಗೆ ಸ್ಟೆಮಿ ಯೋಜನೆ ಜಾರಿಗೆ ಪ್ರಸ್ತಾವನೆ!
24 ವರ್ಷದ ಭಾರತೀಯ ಮಹಿಳೆ ಸಿಮ್ರನ್ ಜೂನ್ 20ರಂದು ಭಾರತದಿಂದ ನ್ಯೂಜೆರ್ಸಿಗೆ ಬಂದು ಸ್ವಲ್ಪ ಸಮಯದ ನಂತರ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದಾರೆ.
ಲಿಂಡೆನ್ವೋಲ್ಡ್ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ.ವಿಡಿಯೋದಲ್ಲಿ ಅವರು ತಮ್ಮ ಮೊಬೈಲ್ ನೋಡುತ್ತಿರುವುದನ್ನು ಕಾಣಬಹುದು. ಹಾಗೆಯೇ ಯಾವುದೇ ಚಿಂತೆಯಾಗಲಿ ಅಥವಾ ಅವರು ತೊಂದರೆಯಲ್ಲಿರುವಂತೆ ಕಾಣಿಸಿರಲಿಲ್ಲ.
ಸಿಮ್ರನ್ ಅಮೆರಿಕಕ್ಕೆ ಬಂದ ಐದು ದಿನಗಳ ಬಳಿಕ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ನಾಪತ್ತೆಯಾಗಿರುವ ಕುರಿತು ತನಿಖೆ ಆರಂಭಿಸಿರುವ ಪೊಲೀಸರಿಗೆ ಅವರನ್ನು ಅರೇಂಜ್ಡ್ ಮದುವೆ ಎಂಬುದು ತಿಳಿದುಬಂದಿದೆ. ಮದುವೆಯಾದ ಬಳಿಕ ಅವರು ಅಮೆರಿಕಕ್ಕೆ ಹೋಗಿದ್ದಾರೆ. ಅಮೆರಿಕಕ್ಕೆ ಉಚಿತ ವಿಮಾನ ಟಿಕೆಟ್ ಪಡೆಯಲು ಮದುವೆ ಒಂದು ನೆಪವಾಗಿರಬಹುದೇ ಎಂಬ ಸಾಧ್ಯತೆಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ .