ಮಂಡ್ಯ :ಅವಧಿಪೂರ್ವ ಮುಂಗಾರು ಮಳೆಯ ನೆರವಿನಿಂದ ಈ ವರ್ಷ ಕೆಆರ್ಎಸ್ ಡ್ಯಾಂ ಜೂನ್ ಕೊನೆಯ ವಾರದಲ್ಲೇ ಭರ್ತಿಯಾಗಿ ದಾಖಲೆ ಬರೆದಿದೆ. ಈ ಹಿನ್ನೆಲೆ ಇಂದು ಸಿಎಂ ಸಿದ್ದರಾಮಯ್ಯ ಕಾವೇರಿ ಬಾಗಿನ ಅರ್ಪಿಸಲಿದ್ದಾರೆ.
ಬೆಂಗಳೂರಿನಲ್ಲಿ ಮಹಿಳೆ ಕೊಂದು ಕಸದ ಲಾರಿಗೆ ಶವ ಎಸೆದ ಕೇಸ್: ಆರೋಪಿ ಅರೆಸ್ಟ್!
ಸಿಎಂ ಬಾಗಿನ ಹಿನ್ನೆಲೆ ಕಾವೇರಿ ನೀರಾವರಿ ನಿಗಮದ ಭರದ ಸಿದ್ಧತೆ ನಡೆಸುತ್ತಿದೆ. ಡ್ಯಾಂಗೆ ಸುಣ್ಣ ಬಣ್ಣ ಬಳಿಯುವ ಕಾರ್ಯ ಪ್ರಾರಂಭಗೊಂಡಿದೆ. ಮತ್ತೊಂದೆಡೆ ಡ್ಯಾಂ ಮೇಲೆ ಕನ್ನಡ ಬಾವುಟಗಳು ರಾರಾಜಿಸುತ್ತಿವೆ. ಬಾಗಿನ ಅರ್ಪಿಸಿ ಕಾವೇರಿ ಮಾತೆಗೆ ಸಿದ್ದರಾಮಯ್ಯ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಿಎಂ ದಾಖಲೆ ಬರೆಯುವ ತವಕ ಹಿನ್ನೆಲೆ ತರಾತುರಿಯಲ್ಲಿ ಬಾಗಿನ ಸಮರ್ಪಿಸುವ ಕಾರ್ಯಕ್ರಮ ನಿಗದಿಪಡಿಸಲಾಗಿದೆ.
ಇಂದು ಬೆಳಗ್ಗೆ 11:30ರ ಅಭಿಜಿನ್ ಮೂಹೂರ್ತದಲ್ಲಿ ಬಾಗಿನ ಅರ್ಪಣೆ ಕಾರ್ಯಕ್ರಮ ನಡೆಯಲಿದೆ. ವೈದಿಕ ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನಡೆಯಲಿದ್ದು, ಬಾಗಿನ ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ಪೂಜೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೇ ಬಾಗಿನ ಅರ್ಪಿಸುವ 40 ಜೊತೆ ಬಾಗಿನ ಕೂಡ ತಯಾರು ಮಾಡಲಾಗಿದೆ. ಮೊರದಲ್ಲಿ ನವ ಧಾನ್ಯ, ಅರಿಶಿಣ ಕುಂಕುಮ, ಸೀರೆ, ಬಳೆ ಹಾಕಿ ಬಾಗಿನ ಸಿದ್ಧಪಡಿಸಲಾಗಿದೆ. ಡ್ಯಾಂ ಕೆಳಗೆ ವೇದಿಕೆ ಕಾರ್ಯಕ್ರಮದಲ್ಲಿ
ಸಿ.ಎಂ.ಆಗಮನದ ಹಿನ್ನಲೆಯಲ್ಲಿ ಡ್ಯಾಂ ಬಳಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.