ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ಜಿಲ್ಲಾಡಳಿತ ಭವನದ ಮುಂದೆ ಸರ್ಕಾರದ ಅಡಿಯ ಕನ್ನಡ ಮತ್ತು ಸಂಕೃತಿ ಇಲಾಖೆ ವತಿಯಿಂದ ಅದ್ದೂರಿ ನಾಡಪ್ರಭು ಕೆಂಪೇಗೌಡರ 516 ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು
ಚಿನ್ನಸ್ವಾಮಿ ಸ್ಟೇಡಿಯಂನ ಕರೆಂಟ್ ಕಟ್: ಸಂಪೂರ್ಣ ಪವರ್ ಕಟ್ ಮಾಡಿದ್ಯಾಕೆ ಬೆಸ್ಕಾಂ?
ದೇವನಹಳ್ಳಿ ತಾಲೂಕಿನ ಹಲವು ಗ್ರಾಮ ಪಂಚಾಯತಿ ವತಿಯಿಂದ ಸುಮಾರು ಇಪ್ಪತ್ತಕ್ಕೂ ಹೆಚ್ಚು ವಿವಿಧ ರೀತಿಯ ಬಗೆ ಬಗೆಯ ಹೂವಿನ ಪಲ್ಲಕ್ಕಿಗಳು ಆಗಮಿಸಿ ನಗರ ನಿರ್ಮಾತ ಸರದಾರನಿಗೆ ಗೌರವ ಸಲ್ಲಿಸಲಾಯಿತು. ಜೊತೆಗೆ ಜಾನಪದ ಕಲಾತಂಡಗಳಾದ ದೊಡ್ದುಕುಣಿತ, ವೀರಗಾಸೆ, ಬೊಂಬೆ ಕುಣಿತ, ಸೇರಿ ಹತ್ತು ಹಲವು ಕಲಾತಂಡಗಳು ಆಗಮಿಸಿದ್ದವು.
ಇನ್ನು ಇದೇ ಸಂದರ್ಭದಲ್ಲಿ ಆಹಾರ ಸಚಿವ ಕೆ ಹೆಚ್ ಮುನಿಯಪ್ಪ ಮತ್ತು ಗ್ರಾಮಾಂತರದ ಜಿಲ್ಲಾಧಿಕಾರಿ ಎ ಬಿ ಬಸವರಾಜು ಸೇರಿದಂತೆ ಅನೇಕ ನಾಯಕರು ಗಣ್ಯರು ಕೆಂಪೇಗೌಡರ ಪುತ್ತಳಿಗೆ ಪುಷ್ಪ ನಮನ ಸಲ್ಲಿಸಿದರು.