Close Menu
Ain Live News
    Facebook X (Twitter) Instagram YouTube
    Tuesday, July 1
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Heart Attack Symptoms: ಹೃದಯಾಘಾತಕ್ಕೂ ಮುನ್ನ ಈ ಲಕ್ಷಣಗಳು ಕಂಡು ಬರುತ್ತವೆ..! ನಿರ್ಲಕ್ಷಿಸಬೇಡಿ

    By Author AINJuly 1, 2025
    Share
    Facebook Twitter LinkedIn Pinterest Email
    Demo

    ಇದು ನಿಜಕ್ಕೂ ಹೃದಯಕ್ಕೆ ಘಾಸಿಯಾಗುವ ವಿಚಾರ. ಇತ್ತೀಚೆಗೆ ಯುವಕರ ಹೃದಯದ ಲಬ್​ಡಬ್​ ಹೆಚ್ಚಾಗಿದೆ. ಹೃದಯ ಹಿಂಡುತ್ತಿದೆ. ಜೀವ ಬೆಂಡಾಗುತ್ತಿದೆ. ಹಾಸನ ಜಿಲ್ಲೆ ಹೃದಯಾಘಾತಗಳ ಹಾಟ್​ಸ್ಪಾಟ್ ಆಗಿ ಬದಲಾಗಿದೆ. ದೇಹದಲ್ಲಿ ಕಂಡುಬರುವ ಎಲ್ಲಾ ನೋವುಗಳು ಹೃದಯಾಘಾತದ ಲಕ್ಷಣಗಳು ಎಂದು ಹೇಳಲು ಆಗದು. ಆದರೆ ನೋವಿನ ಜತೆಗೆ ಬೇರೆ ಲಕ್ಷಣಗಳು ಕೂಡ ಇದ್ದರೆ ಆಗ ಇದು ಹೃದಯಾಘಾತದ ಸೂಚನೆ ಎಂದು ಹೇಳಬಹುದು.

    ಹೃದಯಾಘಾತದ ಲಕ್ಷಣಗಳು

    • ಹೃದಯಾಘಾತ ವೇಳೆ ಎದೆಯಲ್ಲಿ ನೋವು, ಅಸ್ವಸ್ಥತೆ, ಭಾರವಾಗು ವುದು, ಹಿಸುಕಿದಂತೆ ಆಗುವುದು. ಎದೆಯಲ್ಲಿ ಆರಂಭವಾಗುವ ನೋವು ಕೈ, ಭುಜ, ಕುತ್ತಿಗೆ, ಬೆನ್ನು, ದವಡೆ ಅಥವಾ ಸೊಂಟಕ್ಕೂ ತಲುಪ ಬಹುದು.
    • ಕೆಲವರು ಇದನ್ನು ಅಜೀರ್ಣ ಅಥವಾ ಎದೆಯುರಿ ಎಂದು ತಪ್ಪಾಗಿ ತಿಳಿದುಕೊಳ್ಳಬಹುದು. ಇದರ ಲಕ್ಷಣಗಳ ಬಗ್ಗೆ ತಿಳಿಯಲು ಈ ಲೇಖನ ಓದಿ…​

    ಪುರುಷರು ಮತ್ತು ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳು

    • ಹೃದಯಾಘಾತವು ಪುರುಷರು ಹಾಗೂ ಮಹಿಳೆಯರಲ್ಲಿ ತುಂಬಾ ಭಿನ್ನವಾಗಿ ಪರಿಣಾಮ ಬೀರುವುದು. ಆದರೆ ಎರಡೂ ಲಿಂಗಗಳಲ್ಲಿ ಎದೆನೋವಿನ ಲಕ್ಷಣವು ಕಾಣಿಸುವುದು.
    • ಮಹಿಳೆಯರಲ್ಲಿ ವಾಕರಿಕೆ, ಬೆನ್ನು ಮತ್ತು ದವಡೆ ನೋವು, ಉಸಿ ರಾಟದ ತೊಂದರೆ ಕಾಣಿಸಿಕೊಳ್ಳಬಹುದು. ಈ ಲಕ್ಷಣ ಗಳನ್ನು ಕಡೆಗಣಿ ಸುವುದು ತುಂಬಾ ಅಪಾಯಕಾರಿ ಮತ್ತು ಇಂತಹ ಲಕ್ಷಣಗಳನ್ನು ಆರಂಭದಲ್ಲೇ ಪತ್ತೆ ಮಾಡುವುದು ಅತೀ ಅಗತ್ಯ.​

    ಪುರುಷರಲ್ಲಿ ಹೃದಯಾಘಾತದ ಲಕ್ಷಣಗಳು

    • ಉಸಿರಾಟದ ತೊಂದರೆ
    • ನೋವು ಕೈ, ಭುಜ, ಕುತ್ತಿಗೆ, ದವಡೆ ಮತ್ತು ಹೊಟ್ಟೆಯ ಮೇಲ್ಭಾಗಕ್ಕೆ ಹಬ್ಬುವುದು.
    • ವಾಕರಿಕೆ
    • ಎದೆಯುರಿ ಮತ್ತು ಅಜೀರ್ಣ
    • ನಿಯಮಿತ ಸೆಳೆತ ಮತ್ತು ಎದೆನೋವು
    • ಹಠಾತ್ ಅಥವಾ ಅತಿಯಾದ ತಲೆನೋವು ಮತ್ತು ಬಳಲಿಕೆ.
    • ಬೆವರುವಿಕೆ
    • ನಿಶ್ಯಕ್ತಿ
    • ಉಸಿರಾಡಲು ಕಷ್ಟಪಡುವುದು.

    ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳು

    • ನಿಶ್ಯಕ್ತಿ
    • ದೇಹದ ಮೇಲಿನ ಭಾಗದಲ್ಲಿ ನೋವು
    • ಅತಿಯಾಗಿ ಬೆವರುವುದು
    • ಅಸ್ಥಿರ ಮತ್ತು ನಿದ್ರೆಗೆ ತೊಂದರೆ
    • ಹೊಟ್ಟೆಯ ಸಮಸ್ಯೆ
    • ವಾಕರಿಕೆ ಮತ್ತು ವಾಂತಿ
    • ಅಜೀರ್ಣ
    • ಲಘು ತಲೆನೋವು​

    ತಜ್ಞರು ಏನು ಹೇಳುವರು

    • ಪುರುಷರು ಮತ್ತು ಮಹಿಳೆಯರಲ್ಲಿ ಹೃದಯಾಘಾತದ ಕೆಲವು ಲಕ್ಷಣಗಳು ಭಿನ್ನವಾಗಿರುವುದು. ಪುರುಷರಲ್ಲಿ ಎದೆನೋವು ಕಾಣಿಸಿಕೊಂಡರೆ, ಮಹಿಳೆಯರಲ್ಲಿ ವಾಕರಿಕೆ, ಬಳಲಿಕೆ, ಉಸಿರಾಟದ ತೊಂದರೆ ಇತ್ಯಾದಿ ಕಾಣಿಸಿಕೊಳ್ಳುವುದು.
    • ಈ ಲಕ್ಷಣಗಳನ್ನು ಲಘುವಾಗಿ ಪರಿಗಣಿಸದಂತೆ ವೈದ್ಯರು ಹೇಳಿರುವರು. ಇಂತಹ ಲಕ್ಷಣಗಳು ಪದೇ ಪದೇ ಕಂಡುಬರುತ್ತ ಲಿದ್ದರೆ, ಆಗ ನೀವು ವೈದ್ಯರನ್ನು ಭೇಟಿ ಮಾಡಿ ತಪಾಸಣೆ ಮಾಡಿಸಿಕೊಳ್ಳಿ.
    • ಹೃದಯಾಘಾತ ಮತ್ತು ಪಾರ್ಶ್ವವಾಯುವಿನಿಂದ ಸಾವಿನ ಸಮಸ್ಯೆಯು ಇಂದು ವಿಶ್ವದೆಲ್ಲೆಡೆಯಲ್ಲಿ ಅತಿಯಾಗುತ್ತಲಿದೆ. ಆದರೆ ಮುನ್ನೆಚ್ಚರಿಕೆ ತೆಗೆದುಕೊಂಡರೆ ಆಗ ಇದನ್ನು ಶೇ.೮೦ ರಷ್ಟು ಕಡಿಮೆ ಮಾಡಬಹುದು.

     

    Demo
    Share. Facebook Twitter LinkedIn Email WhatsApp

    Related Posts

    ಲಕ್ಕಿ ಲಾಟರಿ ಸಿಎಂ ಎಂದ BR ಪಾಟೀಲ್​ ಗುಮ್ಮಿದ ಸಿದ್ದರಾಮಯ್ಯ!

    July 1, 2025

    ನಿಜ ಸುದ್ದಿಗಾಗಿ ಹೋರಾಟ ನಡೆಸುವ ಸಂದರ್ಭ ಬಂದಿದೆ ಎಂದರೆ, ಸುಳ್ಳು ಸುದ್ದಿಗಳು ಹೆಚ್ಚಾಗಿವೆ ಅಂಥ ತಾನೇ ಅರ್ಥ: ಸಿಎಂ ಪ್ರಶ್ನೆ

    July 1, 2025

    1 ವರ್ಷದಿಂದ RR ನಗರ ಏರಿಯಾ ಮನೆಗಳೇ ಟಾರ್ಗೆಟ್..! ಪೊಲೀಸರ ನಿದ್ದೆಗೆಡಿಸಿದ್ದ ತಮಿಳುನಾಡಿನ ಕಳ್ಳ ಅರೆಸ್ಟ್

    July 1, 2025

    Gold Rate Today: ಆಭರಣ ಪ್ರಿಯರಿಗೆ ಶಾಕಿಂಗ್ ನ್ಯೂಸ್: ದೇಶಾದ್ಯಂತ ಇಂದು ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ!

    July 1, 2025

    Bengaluru: ಗನ್ ಹಿಡಿದು ನಿವೃತ್ತ ಪೊಲೀಸ್ ಅಧಿಕಾರಿಯ ರಂಪಾಟ..! ವಿಡಿಯೋ ವೈರಲ್

    July 1, 2025

    ವೇಶ್ಯಾವಾಟಿಕೆಗೆ ಒಪ್ಪದ ಪತ್ನಿಗೆ 6 ಬಾರಿ ತಲಾಖ್;ಸೈಕೋ ಪತಿ ವಿರುದ್ಧ ಠಾಣೆ ಮೆಟ್ಟಿಲೇರಿದ ಹೆಂಡ್ತಿ

    July 1, 2025

    ಚಿನ್ನಸ್ವಾಮಿ ಕಾಲ್ತುಳಿತ ಕೇಸ್: IPS ಅಧಿಕಾರಿ ವಿಕಾಸ್ ಕುಮಾರ್ ಅಮಾನತು ರದ್ದು.!

    July 1, 2025

    National Doctors Day.. ಇಂದು ರಾಷ್ಟ್ರೀಯ ವೈದ್ಯರ ದಿನ: ಈ ದಿನದ ಇತಿಹಾಸ, ಮಹತ್ವದ ಮಾಹಿತಿ ಇಲ್ಲಿದೆ

    July 1, 2025

    Commercial Cylinder Price: ಗ್ರಾಹಕರಿಗೆ ಸಿಹಿ ಸುದ್ದಿ: ಸಿಲಿಂಡರ್ ಬೆಲೆಯಲ್ಲಿ ಇಳಿಕೆ..!

    July 1, 2025

    ಅಪ್ರಾಪ್ತೆ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಪಾತ ಮಾಡಿಸಿದ ಆರೋಪ: ಪ್ರಿಯಕರ ಅರೆಸ್ಟ್!

    July 1, 2025

    ಚಿನ್ನಸ್ವಾಮಿ ಸ್ಟೇಡಿಯಂನ ಕರೆಂಟ್ ಕಟ್: ಸಂಪೂರ್ಣ ಪವರ್ ಕಟ್ ಮಾಡಿದ್ಯಾಕೆ ಬೆಸ್ಕಾಂ?

    July 1, 2025

    ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಗ್ನಿ ಅವಘಡ!

    July 1, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.