ಬೆಂಗಳೂರು: ದೇಶದಲ್ಲಿ ತ್ರಿವಳಿ ತಲಾಖ್ ನಿಷೇಧವಾಗಿ ಹಲವು ವರ್ಷಗಳೇ ಕಳೆದಿವೆ. ಆದರೆ ಇದೀಗ ನಿಷೇಧವಾಗಿರುವ ತಲಾಖ್ ರಾಜ್ಯದಲ್ಲಿ ಮತ್ತೇ ಸದ್ದು ಮಾಡುತ್ತಿದೆ. ಪತ್ನಿಗೆ ವೇಶ್ಯಾವಾಟಿಕೆ ಮಾಡುವಂತೆ ಪೀಡಿಸುತ್ತಿದ್ದ ಪಾಪಿ ಪತಿ ಅಕೆ ಒಪ್ಪದ್ದಕ್ಕೆ ಆರು ಬಾರಿ ತಲಾಖ್ ನೀಡಿದ್ದಾನೆ.
ಏನಿದು ಪ್ರಕರಣ ಅನ್ನೋದನ್ನು ನೋಡೋದಾದರೆ ಯುನೂಸ್ ಎಂಬಾತನ ವಿರುದ್ಧ ಆಕೆಯ ಪತ್ನಿ ಕಿರುಕುಳ ಆರೋಪ ಮಾಡಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಮಹಿಳೆಯ ದೂರಿನಲ್ಲಿ ಯೂನಸ್ ತನಗೆ ರಾಜಕಾರಣಿ ಜೊತೆಗೆ ದೈಹಿಕ ಸಂಪರ್ಕ ಮಾಡುವಂತೆ ಪದೇ ಪದೇ ಒತ್ತಾಯಿಸುತ್ತಿದ್ದ. ಇದಕ್ಕೆ ಒಪ್ಪದಿದ್ದಕ್ಕೆ ಹಿಂಸೆ ಕೊಟ್ಟು ತಲಾಖ್ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಅಲ್ಲದೇ ತನ್ನ ಗರ್ಭಪಾತ ಮಾಡಿಸಿದ್ದಾನೆ ಎಂದು ಆರೋಪಿಸಿರುವ ಪತ್ನಿ ಬನಶಂಕರಿ ಠಾಣೆಯಲ್ಲಿ ಯೂನುಸ್ ವಿರುದ್ಧ ದೂರು ನೀಡಿದ್ದಾಳೆ. ಪತಿ ಮಾತ್ರವಲ್ಲ ಅತ್ತೆಮಾವ ಸಹ ನಿರಂತರ ಟಾರ್ಚರ್ ನೀಡುತ್ತಿದ್ದು, ಮಸಾಜ್ ಮಾಡುವಂತೆ ತನಿಗೆ ಮಾವ ಒತ್ತಾಯಿಸುತ್ತಿದ್ದ ಎಂದು ನೊಂದ ಮಹಿಳೆ ಆರೋಪಿಸಿದ್ದಾರೆ. ಸದ್ಯ ಈ ಸಂಬಂಧ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.