ಬೆಂಗಳೂರು: ಒಂದು ವರ್ಷದಿಂದ ಆರ್ ಆರ್ ನಗರ ಏರಿಯಾ ಮನೆಗಳೇ ಟಾರ್ಗೆಟ್ ಮಾಡಿ ಪೊಲೀಸರ ನಿದ್ದೆಗೆಡಿಸಿದ್ದ ತಮಿಳುನಾಡಿನ ಕಳ್ಳ ಕೊನೆಗೂ ಅರೆಸ್ಟ್ ಆಗಿದ್ದಾನೆ. ರವಿ ಬಂಧಿತ ಆರೋಪಿಯಾಗಿದ್ದು, ಅಕ್ಕಸಾಲಿಗನ ಕೆಲಸ ಮಾಡಿಕೊಂಡಿದ್ದ ಆರೋಪಿ ಮನೆಗಳನ್ನ ಹಗಲಲ್ಲಿ ಹೋಗಿ ಟಾರ್ಗೆಟ್ ಮಾಡಿಕೊಂಡು ಬರ್ತಿದ್ದನು.
ಗ್ರಾಹಕರಿಗೆ ಎಚ್ಚರಿಕೆ.. ನೀವು ಈ ವಿಷಯಗಳನ್ನು ತಿಳಿದುಕೊಳ್ಳಲೇಬೇಕು..! ಇಂದಿನಿಂದ ಹೊಸ ನಿಯಮಗಳು ಜಾರಿಗೆ!
ಅನಂತರ ತಮಿಳು ನಾಡಿನಿಂದ ನಾಗಮಣಿಯನ್ನ ಕರೆಸಿ, ಆತನಿಗೆ ಬೆಂಗಳೂರಿನಲ್ಲಿ ರೂಂ ಬುಕ್ ಮಾಡಿ ಒಂದು ಬೈಕ್ ಕೊಡ್ತಿದ್ದನು. ಅನಂತರ ಪಕ್ಕಾ ಅಡ್ರೆಸ್ ಕೊಟ್ಟು ಕಳ್ಳತನ ಮಾಡಿಸಿ ವಾಪಸ್ ತಮಿಳುನಾಡಿಗೆ ಕಳಿಸುತ್ತಿದ್ದನು.
ಇದೇ ರೀತಿ 1 ವರ್ಷದಲ್ಲಿ ಆರ್ ಆರ್ ನಗರವೊಂದರಲ್ಲೇ 6 ಮನೆಕಳ್ಳತನ ಮಾಡಿಸಿದ್ದನು. ಕೊನೆಗೂ ನಾಗಮಣಿ ಹಾಗೂ ರವಿಯನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 530 ಗ್ರಾಂ ಚಿನ್ನ , 8 ಕೆ.ಜಿ ಬೆಳ್ಳಿ ವಶಕ್ಕೆ ಪಡೆದು ಘಟನೆ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.