ಹುಬ್ಬಳ್ಳಿ : ಕಾಂಗ್ರೆಸ್ ನಲ್ಲಿ 140 ಶಾಸಕರು ಇರುವುದರಿಂದ ಅಸಮಾಧಾನ ಸಹಜ, ಆದರೆ ಅವರ ಅಸಮಾಧಾನ ಪಕ್ಷದ ವಿರುದ್ಧವಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ ಲಾಡ್, ನಮ್ಮದು 140 ಶಾಸಕರು ಇರೋ ಪಕ್ಷ. ಹೀಗಾಗಿ ಅಸಮಾಧಾನ ಸಹಜ, ಅವರ ಅಸಮಾಧಾನ ಪಕ್ಷದ ವಿರುದ್ಧ ಅಲ್ಲ. ಸುರ್ಜೇವಾಲಾ ಅವರು ಶಾಸಕರ ಜೊತೆ ಮಾತನಾಡುತ್ತಿದ್ದಾರೆ. ಅವರ ಅಸಮಾಧಾನ ಬಗೆಹರಿಸೋ ಕೆಲಸ ಮಾಡುತ್ತಿದ್ದಾರೆ, ಸಮಸ್ಯೆಗೆ ಪರಿಹಾರ ಕಂಡು ಹಿಡಿಯುತ್ತಾರೆ ಎಂದಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ದುರ್ಬಲ ಅಧ್ಯಕ್ಷ ಎಂಬ ಹೇಳಿಕೆಗೆ ಕಿಡಿಕಾರಿದ ಅವರು, ವಿಶ್ವಗುರು, ಪವರ್ ಫುಲ್ ಅಂತ ಬರೀ ಹೇಳಿಕೊಂಡು ಅಡ್ಡಾಡಿದ್ರೆ ಸಾಲದು. ಪಹಲ್ಗಾಂ ಘಟನೆ ನಡೆದಾಗ ನಾಲ್ಕೈದು ಜನ ಉಗ್ರರ ಫೋಟೋ ತೋರಿಸಿದರು. ಉಗ್ರಗಾಮಿಗಳು ಕಥೆ ಏನಾಯ್ತು..? ಪಹಲ್ಗಾಮ್ ಘಟನೆ ಬಗ್ಗೆ ಕೇಳಬಾರದಾ..? ಎಂದು ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದರು.
ಮಲ್ಲಿಕಾರ್ಜುನ ಖರ್ಗೆ ಹೈಕಮಾಂಡ್ ಕುರಿತು ಹೇಳಿರೋ ಅರ್ಥ ಬೇರೆ ಇದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೂ ಪಕ್ಷದ ಕುರಿತು ಮಾಹಿತಿ ಕೊಡಬೇಕಾಗುತ್ತೆ. ಹೈಕಮಾಂಡ್ ಅಂತ ಹೇಳಿರೋದು ಗೌರವ ಪೂರಕವಾಗಿ ಅದನ್ನೇ ಇವರು ದೊಡ್ಡ ಮಟ್ಟದಲ್ಲಿ ಚರ್ಚಿಸ್ತಿದ್ದಾರೆ ಸಮಸ್ಯೆಗಳ ಬಗ್ಗೆ ಮೊದಲು ಚರ್ಚೆ ಮಾಡಬೇಕು. ಚೈನಾಗೆ ಇಂಡಿಯಾಗೆ ಹೋಲಿಸಿಕೊಂಡು ಮಾತಾಡೋಣ್ವಾ.? ಬಿಜೆಪಿಯ ವಿದೇಶಾಂಗ ನೀತಿ ಫೇಲ್ ಆಗಿದೆ ಎಂದು ಕಿಡಿಕಾರಿದರು.
ಇನ್ನೂ ಭ್ರಷ್ಟಾಚಾರ ಕಾಂಗ್ರೆಸ್ ಡಿಎನ್ಎದಲ್ಲಿದೆ ಎಂಬ ಜೋಶಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಯುಪಿಎ ಅವಧಿಯಲ್ಲಿ ಕಲ್ಲಿದ್ದಲು ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿಲ್ಲ, ಹೀಗಂತ ಬಿಜೆಪಿ ಸರ್ಕಾರವೇ ಹೇಳಿದೆ. ಯುಪಿಎ ಸರ್ಕಾರದಲ್ಲಿ ಯಾವುದೇ ಸ್ಕ್ಯಾಮ್ ಆಗಿಲ್ಲಾ ಅಂತ ಇದೇ ಬಿಜೆಪಿ ಸರ್ಕಾರ ರಿಪೋರ್ಟ್ ಹೇಳಿದೆ. ಇವರ 11 ವರ್ಷದ ಅವಧಿಯಲ್ಲಿ ಯಾರಿಗೆಲ್ಲಾ ಕಲ್ಲಿದ್ದಲು ಟೆಂಡರ್ ಕೊಟ್ಟಿದ್ದಾರೆ ಅಂತ ಬಿಜೆಪಿ ಹೇಳಲಿ ಅಂತಾ ಆಗ್ರಹಿಸಿದರು.
ರಾಜ್ಯ ಸರ್ಕಾರ ಮಹಾನಗರ ಪಾಲಿಕೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಕೇಂದ್ರದವರು ಮೊದಲು ನರೇಗಾ ಬಿಲ್ ಬಿಡುಗಡೆ ಮಾಡಲಿ. ಕೇಂದ್ರ ಸರ್ಕಾರ ನೂರು ಕಡೆ ಸ್ಮಾರ್ಟ್ ಸಿಟಿ ಯೋಜನೆ ಮಾಡಿತು. ಎಷ್ಟು ಸಿಟಿ ಸ್ಮಾರ್ಟ್ ಆಗಿವೆ..?. ಹುಬ್ಬಳ್ಳಿಯೂ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಆಯ್ಕೆಯಾಗಿತ್ತು. ಆದರೆ ಇಲ್ಲಿನ ಡ್ರೈನೇಜ್ ಸ್ಥಿತಿ ಏನಾಗಿದೆ.? 300 ಕೋಟಿ ಹೆಚ್ಚುವಾರಿಯಾಗಿ ಕೆಲಸ ಮಾಡಿದ್ದಾರೆ.
ರಾಜ್ಯದಲ್ಲಿ ಇದೇ ರೀತಿ ಹಣವಿಲ್ಲದೆಯೇ 2 ಲಕ್ಷ ರೂಪಾಯಿ ಟೆಂಡರ್ ಕರೆದು ಹೋಗಿದ್ದಾರೆ . ಅವಳಿ ನಗರದಲ್ಲಿ 300 ಕೋಟಿ ಟೆಂಡರ್ ಹೇಗೆ ಕರೆದರು..? ಈ ಪ್ರಶ್ನೆ ಬಿಜೆಪಿ ಅವರನ್ನೇ ಕೇಳಿ ಎಂದರು.