ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ ಹಾಗೂ ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ಅವರು, ಹೈದರಾಬಾದ್ನಲ್ಲಿ ‘ಜೋಹರ್ಫಾ’ ಎಂಬ ಹೆಸರಿನ ತಮ್ಮ ಮೊದಲ ರೆಸ್ಟೋರೆಂಟ್ ತೆರೆದಿದ್ದಾರೆ.
ಸೊಂಟದವರೆಗೂ ಕೂದಲು ಬೆಳೆಯಬೇಕಾ? ಹಾಗಿದ್ರೆ ಈರುಳ್ಳಿ ರಸದ ಜೊತೆ ಇದನ್ನು ಬೆರಸಿ ಹಚ್ಚಿ!
ಕ್ರಿಕೆಟರ್ ಜೊತೆ ಸಿರಾಜ್ ಈಗ ಉದ್ಯಮಿಯೂ ಆಗಿದ್ದಾರೆ. ನನಗೆ ಗೌರವ ನೀಡಿದ ನಗರಕ್ಕೆ ಏನನ್ನಾದರೂ ಮರಳಿ ನೀಡಲು ಮುಂದಾಗಿದ್ದೇನೆ ಎಂದು ಸಿರಾಜ್ ಹೇಳಿದ್ದಾರೆ. ಹೈದರಾಬಾದ್ನ ಹೃದಯಭಾಗದಲ್ಲಿರುವ ಜೋಹರ್ಫಾ ರೆಸ್ಟೋರೆಂಟ್, ಪ್ರಸಿದ್ಧ ಚೀನೀ ಭಕ್ಷ್ಯಗಳೊಂದಿಗೆ ಮೊಘಲಾಯಿ, ಪರ್ಷಿಯನ್ ಮತ್ತು ಅರೇಬಿಯನ್ ಆಹಾರವನ್ನು ಒದಗಿಸುತ್ತದೆ. ಈ ರೆಸ್ಟೋರೆಂಟ್ ತನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ ಎಂದು ಸಿರಾಜ್ ಹೇಳಿದರು. “ಜೋಹರ್ಫಾ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ಹೈದರಾಬಾದ್ ನನಗೆ ನನ್ನ ಗುರುತನ್ನು ನೀಡಿದೆ. ಈ ರೆಸ್ಟೋರೆಂಟ್ ಈ ನಗರಕ್ಕೆ ಏನನ್ನಾದರೂ ಮರಳಿ ನೀಡುವ ನನ್ನ ಮಾರ್ಗವಾಗಿದೆ. ಇಲ್ಲಿ ಜನರು ಒಟ್ಟಿಗೆ ಸೇರಬಹುದು, ಆಹಾರವನ್ನು ಸೇವಿಸಬಹುದು ಮತ್ತು ಮನೆಯಲ್ಲಿರುವಂತೆ ಅನುಭವ ಪಡೆಯಬಹುದು” ಎಂದು ಸಿರಾಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಈ ರೆಸ್ಟೋರೆಂಟ್ ಅನುಭವಿ ಅಡುಗೆಯವರ ತಂಡವನ್ನು ಹೊಂದಿದೆ. ಈ ಅಡುಗೆಯವರು ಸಾಂಪ್ರದಾಯಿಕ ರೀತಿಯಲ್ಲಿ ಅಡುಗೆ ಮಾಡುವಲ್ಲಿ ಪರಿಣಿತರು. ಅವರು ತಾಜಾ ಮತ್ತು ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಬಳಸುತ್ತಾರೆ. ಈ ಹೆಜ್ಜೆಯೊಂದಿಗೆ, ಸಿರಾಜ್ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿರಾಟ್ ಕೊಹ್ಲಿಯಂತಹ ಆಟಗಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.