ಮಡಿಕೇರಿ: ರಸ್ತೆಯಲ್ಲಿ ಮಲಗಿದ್ದ ಜಾನುವಾರುಗಳಿಗೆ ಅಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ ಕರುಗಳು ಸೇರಿದಂತೆ ನಾಲ್ಕು ಹಸುಗಳು ಸಾವನ್ನಪ್ಪಿರುವ ಘಟನೆ ಸಂಪಾಜೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಕೊಯನಾಡಿನಲ್ಲಿ ನಡೆದಿದೆ.
ಕೊಯನಾಡು ಶ್ರೀಗಣಪತಿ ದೇವಾಲಯದ ತಿರುವಿನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮಧ್ಯರಾತ್ರಿ ವಾಹನ ಡಿಕ್ಕಿಯಾಗಿರಬಹುದೆಂದು ಶಂಕಿಸಲಾಗಿದೆ. ಜಾನುವಾರುಗಳನ್ನು ಸಾಕುವ ಮಾಲೀಕರು ಅವುಗಳ ಸುರಕ್ಷತೆಯ ಬಗ್ಗೆಯೂ ಹೆಚ್ಚಿನ ಕಾಳಜಿ ತೋರಬೇಕು ಮತ್ತು ಹೆದ್ದಾರಿಯಲ್ಲಿ ಮೇಯಲು ಬಿಡಬಾರದು ಎಂದು ಪ್ರಾಣಿ ಪ್ರಿಯರು ಮನವಿ ಮಾಡಿದ್ದಾರೆ