ಬೆಂಗಳೂರು: ಸಿಎಂ ಬಗ್ಗೆ ಮಾತಾಡುವಷ್ಟು ನಾನು ದೊಡ್ಡವನಲ್ಲ ಎಂದು ಮಾಗಡಿ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಿಎಂ ಬಗ್ಗೆ ಮಾತಾಡುವಷ್ಟು ನಾನು ದೊಡ್ಡವನಲ್ಲ. ಎಲ್ಲರಿಗೂ ಅನುದಾನ ಕೊಟ್ಟಿದ್ದಾರೆ. ಕೆಲವರು ಹೇಳ್ಕೊಂಡಿದ್ದಾರೆ ಕೆಲವರು ಹೇಳ್ಕೊಂಡಿಲ್ಲ ಎಂದರು.
Vastu Tips For Broom: ಮನೆಯ ಈ ದಿಕ್ಕಲ್ಲಿ ಪೊರಕೆ ಇಟ್ರೆ ಸಂಪತ್ತು..! ಹೀಗೆ ಮಾಡಿದ್ರೆ ಬಡತನ ಕಾಡುತ್ತೆ
ಶಾಸಕ ಬಿ ಆರ್ ಪಾಟೀಲ್ ಅವರಿಗೆ ವಯಸ್ಸಾಗಿದೆ . ಅವರಿಗೆ ಗೌರವ ಸಿಗದಿದ್ದಾಗ ಹಾಗೆ ಮಾತಾಡಿರಬಹುದು. ಅವರು ಸಿಎಂಗೆ ಆತ್ಮೀಯರು. ಅವರು ಸಿಎಂ ಬಳಿ ಅನುದಾನ ಪಡೆಯಬಹುದು ಎಂದರು. ಡಿಕೆ ಶಿವಕುಮಾರ್ ಅವರು ಸಹ ಪಕ್ಷ ಅಧಿಕಾರಕ್ಕೆ ಬರಲು ಕಾರಣ.
ಇವತ್ತೇ ಮಾಡಿ, ಈಗಲೇ ಮಾಡಿ ಎಂದೇನು ಹೇಳಿರಲಿಲ್ಲ. ಆದರೆ ಇವತ್ತು ಯಾವುದೇ ರಾಜಕೀಯ ಚರ್ಚೆಯಾಗಿಲ್ಲ. ಕೆಲವು ಪ್ರಶ್ನೆಗಳನ್ನ ನಮ್ಮ ಮುಂದಿಟ್ರು, ಅದಕ್ಕೆ ನಾವು ಉತ್ತರ ಕೊಟ್ಟಿದ್ದೇವೆ. ಪಾರ್ಟಿಗೆ ಡ್ಯಾಮೇಜ್ ಆಗ್ತಿರುವ ವಿಚಾರ ಅವರೇನು ಕೇಳಿಲ್ಲ. ಕೇಳಿದ್ರೆ ನಾನು ಹೇಳ್ತಾ ಇದ್ದೆ ಎಂದರು.