ನಮ್ಮ ಪುಟ್ಟ ಹೃದಯಕ್ಕೆ ನಿರಂತರವಾಗಿ ಕೆಲಸ ಮಾಡುವುದೂ ಗೊತ್ತು, ಹಾಗೆ ಒಮ್ಮೆಲೇ ನಿಂತು ಹೋಗುವುದೂ ಗೊತ್ತು. ಏಕೆಂದರೆ ಇವೆರಡೂ ನಮ್ಮ ಕೈಯಲ್ಲೇ ಇವೆ. ಧೂಮಪಾನ, ಮದ್ಯಪಾನ ಅಭ್ಯಾಸದ ದಾಸರಾಗುವುದು, ಜಡ ಜೀವನ ಶೈಲಿಯನ್ನು ಅನುಸರಿಸುವುದು ಇತ್ಯಾದಿ ಹೃದಯದ ಆರೋಗ್ಯ ಹಾಳಾಗುತ್ತಿದೆ. ಈ ವಿಚಾರಗಳನ್ನು ತಿಳಿದೂ ಜನ ಈ ತಪ್ಪುಗಳನ್ನು ಮಾಡುತ್ತಲೇ ಇದ್ದಾರೆ. ಹಂತ ಹಂತವಾಗಿ ಹೃದಯಾಘಾತವಾದಾಗ ಯಾವ ರೀತಿ ರೋಗಿಗೆ ಚಿಕಿತ್ಸೆ ನೀಡಬೇಕು ಎನ್ನುವುದು ಇಲ್ಲಿ ತಿಳಿಸಲಾಗಿದೆ.
ಹಂತ-1
* ಮೊದಲನೇಯದಾಗಿ ಹೃದಯಘಾತವಾಗಿ ವ್ಯಕ್ತಿ ಪ್ರಜ್ಞಾಹೀನನಾಗಿ ಕುಸಿದಾಗ ಮೊದಲು ಆತನನ್ನು ಸೇಫ್ ಸ್ಥಳದಲ್ಲಿ ಮಲಗಿಸಬೇಕು.
* ಆಂಬುಲೆನ್ಸ್ ಬರುವವರೆಗೆ ಸಮಯ ತೆಗೆದುಕೊಳ್ಳೋದ್ರಿಂದ ವ್ಯಕ್ತಿಯನ್ನು ಮೊದಲು ನೇರವಾಗಿ ಮಲಗಿಸಬೇಕು. ಯಾವುದು ದಿಂಬು ಇಡಬಾರದು
* ಅದಾದ ಬಳಿಕ ಎರಡು ಎದೆಯ ನಡುವೆ ಮಧ್ಯಭಾಗದಲ್ಲಿ ಸ್ವಲ್ಪ ಕೆಳಭಾಗದಲ್ಲಿ ಅಂಗೈ ಎರಡನ್ನು ಒಟ್ಟಿಗೆ ಇಟ್ಟು ಗಟ್ಟಿಯಾಗಿ ಒತ್ತಬೇಕು. ಇದನ್ನು ಸ್ವಲ್ಪ ಫಾಸ್ಟ್ ಆಗಿಯೇ ಮಸಾಜ್ ರೀತಿಯಲ್ಲಿ ಮಾಡಬೇಕು. 100 ರಿಂದ 120 ಬಾರಿ ಎದೆಯ ಜಾಗವನ್ನು ಪ್ರೆಸ್ ಮಾಡಬೇಕು.
ಹಂತ-2
* ಓಪನ್ ಏರ್ ವೇನಲ್ಲಿ ಇರಿಸಬೇಕು
* ಗಲ್ಲವನ್ನು ಕೊಂಚ ಮೇಲಕ್ಕೆತ್ತಿ, ಮೂಗು ಮುಚ್ಚಿ ಬಾಯಿಯ ಮೂಲಕ ವ್ಯಕ್ತಿಗೆ ಉಸಿರು ನೀಡಬೇಕು. ಇದನ್ನು ಎರಡರಿಂದ ಮೂರು ಬಾರಿ ಮಾಡಬೇಕು. ಆದರೆ ಕೊರೊನಾ ಸಂದರ್ಭದಲ್ಲಿ ಇದು ಕೊಂಚ ಕಷ್ಟ. ಈ ರೀತಿ ಮಾಡುವುದರಿಂದ ಮೆದುಳಿಗೆ ರಕ್ತಸಂಚಾರ ಸ್ಥಗಿತಗೊಳ್ಳುವುದು ಹಾಗೂ ರೋಗಿ ಹೃದಯಾಘಾತದಿಂದ ಸಾವನ್ನಪ್ಪುವುದನ್ನು ತಪ್ಪಿಸಬಹುದಾಗಿದೆ.
* ಇದಾದ ಬಳಿಕ ವ್ಯಕ್ತಿಗೆ ತತ್ ಕ್ಷಣ ಟ್ರೀಟ್‌ಮೆಂಟ್ ಕೊಟ್ಟರೆ ಜೀವವನ್ನು ಉಳಿಸಬಹುದು.