ಬೆಂಗಳೂರು: ರಾಜ್ಯ ಸರ್ಕಾರದ 14ನೇ ಸಚಿವ ಸಂಪುಟ ಸಭೆ ಇಂದು ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ನಡೆಯಲಿದೆ. ನಂದಿಬೆಟ್ಟದಲ್ಲಿ ಸಚಿವ ಸಂಪುಟ ಸಭೆಗಾಗಿ ಅಂತಿಮ ಹಂತದ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.
ಇನ್ನೂ ದೇವನಹಳ್ಳಿ ಕಾಂಗ್ರೆಸ್ ಕಾರ್ಯಕರ್ತರಿಂದ ಡಿ.ಕೆ.ಶಿವಕುಮಾರ್ ಅವರಿಗೆ ಭರ್ಜರಿ ಸ್ವಾಗತ ಕೊರಿದ್ದಾರೆ. ದೇವನಹಳ್ಳಿ ಬೈಪಾಸ್ ಬಳಿ ಇರುವ ಶ್ರೀನಿಧಿ ವೈಭವ್ ಹೋಟೆಲ್ ಬಳಿ ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಜೈ ಎಂದು ಕೈ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ.
Vastu Tips For Broom: ಮನೆಯ ಈ ದಿಕ್ಕಲ್ಲಿ ಪೊರಕೆ ಇಟ್ರೆ ಸಂಪತ್ತು..! ಹೀಗೆ ಮಾಡಿದ್ರೆ ಬಡತನ ಕಾಡುತ್ತೆ
ಚಿಕ್ಕಬಳ್ಳಾಪುರ ಸಚಿವ ಸಂಪುಟ ಸಭೆಗೆ ಹೋಗುವ ವೇಳೆ ಜಯ ಘೋಷಣೆ ಕೂಗಿದ್ದು, ಕೈ ಕಾರ್ಯಕರ್ತರ ಉತ್ಸಾಹ ಕಂಡು ಡಿಕೆಶಿ ಫುಲ್ ಖುಷ್ ಆಗಿದ್ದಾರೆ. ಈ ವೇಳೆ ನಗೆಯ ನಗೆ ಬೀರಿ ಚಿಕ್ಕಬಳ್ಳಾಪುರ ಸಚಿವ ಸಂಪುಟ ಸಭೆಗೆ ಡಿ.ಕೆ.ಶಿವಕುಮಾರ್ ತೆರಳಿದ್ದಾರೆ.