ಕನ್ನಡ, ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿ ಮೇಘನಾ ರಾಜ್ ಎರಡನೇ ಮದುವೆ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತವೆ. 2018ರಲ್ಲಿ ಚಿರಂಜೀವಿ ಅವರನ್ನು ಮೇಘನಾ ವರಿಸಿದ್ದರು. ಈ ಜೋಡಿಗೆ ಮುದ್ದಾದ ಮಗನಿದ್ದಾನೆ. ಆದ್ರೆ ವಿಧಿಯಾಟವೇ ಬೇರೆಯಿತ್ತು. 2020 ಜೂನ್ 7 ಭಾನುವಾರದಂನ ಚಿರು 39ನೇ ವಯಸ್ಸಿನಲ್ಲಿ ಜೀವ ಬಿಟ್ಟಿದ್ದರು. ನಟ ಚಿರಂಜೀವಿ ಸರ್ಜಾ ಅವರು ಅಕಾಲಿಕ ಮರಣ ಹೊಂದಿದ ನಂತರ ಕನ್ನಡ ನಟಿ ಮೇಘನಾ ರಾಜ್ ಅವರು ನೋವಿನಲ್ಲೇ ಜೀವನ ಸಾಗಿಸುತ್ತಿದ್ದಾರೆ. ಹೀಗಿರುವಾಗ ಮೇಘನಾ ರಾಜ್ 2ನೇ ಮದುವೆ ವಿಚಾರ ಭಾರೀ ಸದ್ದು ಮಾಡಿತ್ತು. ವಿಜಯ್ ರಾಘವೇಂದ್ರ ಅವರನ್ನು ಮೇಘನಾ ರಾಜ್ ಮತ್ತೆ ಮದುವೆಯಾಗಲಿದ್ದಾರೆ ಎಂಬ ಊಹಾಪೋಹ ಸೋಷಿಯಲ್ ಮೀಡಿಯಾದಲ್ಲಿ ಹರಿಡಿತ್ತು. ಅದಕ್ಕೀಗ ಮೇಘನಾ ರಾಜ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಯೂಟ್ಯೂಬ್ ವೊಂದಕ್ಕೆ ಪ್ರತಿಕ್ರಿಯಿಸಿರುವ ಮೇಘನಾ ರಾಜ್, “ಜನರಿಗೆ ನಾನು ಏನೂ ಉತ್ತರ ಕೊಟ್ಟಿದ್ದೇನೆ ಎನ್ನುವುದು ಅರ್ಥವಾಗಿಲ್ಲ. ಆದರೂ ಕಮೆಂಟ್ ಹಾಕಿದ್ದಾರೆ. ಇವತ್ತು ನಾನು ಉತ್ತರ ಕೊಟ್ಟರೆ ಅದಕ್ಕೂ ಕಮೆಂಟ್ ಹಾಕುತ್ತಾರೆ. ತುಂಬಾ ಕಮೆಂಟ್ ಮಾಡುವುವವರಿಗೆ ನಾನು ಹೇಳಲು ಇಷ್ಟವಿಲ್ಲ. ಅದು ಪ್ರಶ್ನೆಯಾಗಿ ಉಳಿಯಲಿಲ್ಲ. ನಾನನು ಏನೂ ಹೇಳ್ತಿಲ್ಲ. ಜನ ಎಲ್ಲವನ್ನೂ ಹೇಳುತ್ತಿದ್ದಾರೆ. ಅವರಿಗೆ ಎಷ್ಟು ಖುಷಿಯಾಗುತ್ತೋ ಅಷ್ಟು ಹೇಳಲಿ” ಎಂದು ಹೇಳಿದ್ದಾರೆ.
ನಟ ವಿಜಯ್ ರಾಘವೇಂದ್ರ ಅವರು ಕೂಡ ಹೆಂಡತಿಯನ್ನ ಕಳೆದುಕೊಂಡು ನೋವಲ್ಲಿ ಇದ್ದಾರೆ. ಹೀಗೆ ಕನ್ನಡ ಸಿನಿಮಾ ರಂಗದ ಇಬ್ಬರು ಕಲಾವಿದರ ಬಾಳಲ್ಲಿ ವಿಧಿ ಆಟ ಆಡಿದೆ. ಒಂದು ಕಡೆ ನಟಿ ಮೇಘನಾ ರಾಜ್ ಅವರ ಗಂಡ ಚಿರಂಜೀವಿ ಸರ್ಜಾ ಅವರು ಅಕಾಲಿಕ ಮರಣ ಹೊಂದಿದ ನಂತರ ವಿಜಯ್ ರಾಘವೇಂದ್ರ ಅವರ ಹೆಂಡತಿ ಕೂಡ ಅಕಾಲಿಕ ಮರಣ ಹೊಂದಿದರು. ಇಂತಹ ಸಮಯದಲ್ಲೇ ಕೆಲವರು ಅನಗತ್ಯವಾಗಿ, ನಟಿ ಮೇಘನಾ ರಾಜ್ ಹಾಗೂ ವಿಜಯ್ ರಾಘವೇಂದ್ರ ಅವರ ಬಗ್ಗೆ ಮಾತನಾಡಿ ಸುಳ್ಳು ಸುದ್ದಿ ಹಬ್ಬಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಇಂತಹ ಸುದ್ದಿಗಳ ವಿರುದ್ಧ, ನಟಿ ಮೇಘನಾ ರಾಜ್ ಎಚ್ಚರಿಕೆ ಕೊಟ್ಟ ನಂತರ ಸೈಲೆಂಟ್ ಆಗಿದ್ದರು.
ಮೇಘನಾ ರಾಜ್ 2ನೇ ಮದುವೆ ವಿಚಾರ & ವಿಜಯ್ ರಾಘವೇಂದ್ರ ಬಗ್ಗೆ ಮತ್ತೆ ದಿಢೀರ್ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ದಿಢೀರ್ ಈ ರೀತಿಯಾಗಿ ಚರ್ಚೆ ಶುರುವಾಗೋದಕ್ಕೆ ಕಾರಣ ಆಗಿದ್ದು ವಿಜಯ್ ರಾಘವೇಂದ್ರ ಅವರ ಒಂದು ರೀಲ್ಸ್, ಸೋಷಿಯಲ್ ಮೀಡಿಯಾ ಅಕೌಂಟ್‌ನ ಮೂಲಕ ಆಕ್ಟಿವ್ ಆಗಿರುವ ವಿಜಯ್ ರಾಘವೇಂದ್ರ ಅವರು ಹಾಡು ಒಂದನ್ನ ಹಾಡಿದ್ದರು. ಇನ್ಸ್‌ಟಾಗ್ರಾಂ ಅಕೌಂಟ್ ಮೂಲಕ ವಿಜಯ್ ರಾಘವೇಂದ್ರ ಅವರು ಈ ಹಾಡು ಪೋಸ್ಟ್ ಮಾಡಿದ್ರು. ಮೇಘ ಬಂತು ಮೇಘ, ಮೇಘ ಬಂತು ಮೇಘ, ಮೇಘ ನೀಲಿಯ ಮೇಘ, ಮೇಘ ಮಲ್ಹಾರ ಮೇಘ… ಅಂತಾ ಹಾಡು ಹಾಡಿದ್ದರು. ಇದೀಗ ಇದೇ ವಿಡಿಯೋ ಇಟ್ಟುಕೊಂಡು ಮತ್ತೊಮ್ಮೆ ಕೆಲವರು ಗಾಳಿ ಸುದ್ದಿ ಹರಡುವ ಮೂಲಕ ಚರ್ಚೆ ಶುರು ಮಾಡಿದ್ದಾರೆ. ಈ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.