ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅರೆಸ್ಟ್ ಆದ ಬಳಿಕ ಕೆಲ ತಿಂಗಳು ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ರು. ಆರು ತಿಂಗಳ ಕಾಲ ಬಳ್ಳಾರಿ ಜೈಲಲ್ಲಿದ್ದ ದರ್ಶನ್ ಜಾಮೀನು ದೊರೆತ ಬಳಿಕ ದರ್ಶನ್ ಜೈಲಿನಿಂದ ಹೊರಗೆ ಬಂದಿದ್ದಾರೆ. ಆದರೆ, ದರ್ಶನ್ ಬಂದು ಹೋದ ಮೇಲೆ ಬಳ್ಳಾರಿ ಜೈಲಿನ ಚಿತ್ರಣವೇ ಬದಲಾಯ್ತಾ ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ.
ಹೌದು, ಜೈಲು ಅಂದರೆ ಖೈದಿಗಳ ಮನ ಪರಿವರ್ತನೆ ಕೇಂದ್ರವಾಗಬೇಕು.. ಆದರೆ ಬಳ್ಳಾರಿ ಜೈಲು ಖೈದಿಗಳಿಗೆ ಐಶಾರಾಮಿ ಜೀವನ ಕೇಂದ್ರವಾಗಿದೆಯಾ ಎಂಬ ಪ್ರಶ್ನೆ ಶುರುವಾಗಿದೆ. ಬಳ್ಳಾರಿ ಜೈಲಿನಲ್ಲಿ ಖೈದಿಗಳ ಐಶಾರಾಮಿ ಜೀವನಕ್ಕೆ ಫೋಟೊ, ವಿಡಿಯೋ ಸಾಕ್ಷ್ಯ ಸಿಕ್ಕಿದೆ. ಬಳ್ಳಾರಿ ಜೈಲಿನಲ್ಲಿ ಖೈದಿಗಳು ಮೊಬೈಲ್ ಪೋನ್ ಬಳಸಿದ್ದೂ ಅಲ್ಲದೆ , ಭರ್ಜರಿ ಫೋಟೋ ಶೂಟ್ ಮಾಡಿದ್ದಾರೆ.
ಜೈಲಿನಲ್ಲಿ ಗಾಂಜಾ, ನಾನ್ ವೆಜ್ ಅಡುಗೆ ತಯಾರಿಕೆ, ಆಂಡ್ರಾಯ್ಡ್ ಮೊಬೈಲ್, ಪೋಟೋಗೆ ಪೋಸ್ ಕೊಡುವ ಖೈದಿಗಳ ಪೋಟೋ, ವಿಡಿಯೋ ವೈರಲ್ ಆಗುತ್ತಿದೆ. ಆದ್ರೆ ಈ ವಿಚಾರವನ್ನು ಜೈಲು ಅಧೀಕ್ಷಕಿ ಲತಾ ತಳ್ಳಿ ಹಾಕಿದ್ದಾರೆ. ಈ ಪೋಟೋ ಇಂದಿನದು ಅಲ್ಲ, ಹಿಂದಿನದು ಅಂತಾ ಸ್ಪಷ್ಟನೆ ನೀಡಿದ್ದಾರೆ.
ಆದ್ರೆ, ಬಳ್ಳಾರಿ ಜೈಲು ಅಧಿಕಾರಿಗಳಿಗೆ ಖೈದಿಗಳು ಬ್ಲಾಕ್ ಮೇಲ್ ಮಾಡ್ತಿದ್ದಾರಂತೆ . ಜೈಲಿನಲ್ಲಿ ಹಿಂದೆ ಇದ್ದ ಕೆಲ ಕೈದಿಗಳು ಐಶಾರಾಮಿ ಜೀವನ ನಡೆಸಿದ್ರು. ಖೈದಿಗಳ ಐಶಾರಾಮಿ ಜೀವನದ ಪೋಟೋಳನ್ನ ವೈರಲ್ ಮಾಡೋದಾಗಿ ಬೆದರಿಕೆ ಹಾಕ್ತಿದ್ದಾರಂತೆ. ಇದಕ್ಕೆ ಕಾರಣ ಹಳೇಯ ಪೋಟೋ ಇಟ್ಟುಕೊಂಡು ಸಿಬ್ಬಂದಿ ಬೆದರಿಸಿ ಹೆಚ್ಚಿನ ಸೌಲಭ್ಯ ಪಡೆಯೋ ಪ್ಲಾನ್ ಅಂತ ಜೈಲು ಅಧೀಕ್ಷಕಿ ಹೇಳ್ತಿದ್ದಾರೆ.
ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಆರೋಪಿಗಳಲ್ಲಿ ಇಬ್ಬರು ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದಾರೆ. ಅವರಿಂದಲೇ ಈ ರೀತಿ ಬೆದರಿಕೆ ಎಂದು ಜೈಲು ಅಧಿಕ್ಷಕಿ ಲತಾ ಸ್ಪಷ್ಟನೆ ನೀಡಿದ್ದಾರೆ.