ಅಮೆರಿಕ: ಉಕ್ರೇನ್ ಜೊತೆ ದೀರ್ಘ ಯುದ್ಧದಲ್ಲಿ ತೊಡಗಿರುವ ರಷ್ಯಾದೊಂದಿಗೆ ತನ್ನ ಸಂಬಂಧವನ್ನು ಮುಂದುವರಿಸಿದರೆ ಭಾರೀ ಸುಂಕ ವಿಧಿಸುವುದಾಗಿ ಅಮೆರಿಕ ಎಚ್ಚರಿಸಿದೆ. ಮಾಸ್ಕೋ ಜೊತೆ ಈಗಾಗಲೇ ವ್ಯವಹಾರ ಸಂಬಂಧ ಹೊಂದಿರುವ ಭಾರತ ಮತ್ತು ಚೀನಾದ ಮೇಲೆ ಶೇ.500 ರಷ್ಟು ಸುಂಕ ವಿಧಿಸುವುದಾಗಿ ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ಎಚ್ಚರಿಸಿದ್ದಾರೆ. ಇದಕ್ಕಾಗಿ ಮಸೂದೆಯನ್ನು ಸಹ ತರಲಾಗುವುದು ಎಂದು ಅವರು ಹೇಳಿದರು.
Vastu Tips For Broom: ಮನೆಯ ಈ ದಿಕ್ಕಲ್ಲಿ ಪೊರಕೆ ಇಟ್ರೆ ಸಂಪತ್ತು..! ಹೀಗೆ ಮಾಡಿದ್ರೆ ಬಡತನ ಕಾಡುತ್ತೆ
ಎಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಲಿಂಡ್ಸೆ ಗ್ರಹಾಂ, ‘ರಷ್ಯಾದ ಉತ್ಪನ್ನಗಳನ್ನು ಖರೀದಿಸುವ ಮೂಲಕ ಉಕ್ರೇನ್‌ಗೆ ಸಹಾಯ ಮಾಡದ ದೇಶಗಳ ಉತ್ಪನ್ನಗಳ ಮೇಲೆ ಶೇ.500 ರಷ್ಟು ಸುಂಕ ವಿಧಿಸಲಾಗುವುದು. ಭಾರತ ಮತ್ತು ಚೀನಾ ತಮ್ಮ ತೈಲದ ಶೇ.70 ರಷ್ಟು ಮಾಸ್ಕೋದಿಂದ ಖರೀದಿಸುತ್ತವೆ.’ ಎಂದು ಅವರು ಹೇಳಿದರು.
ರಷ್ಯಾದೊಂದಿಗೆ ವ್ಯಾಪಾರ ಸಂಬಂಧವನ್ನು ಕಾಯ್ದುಕೊಳ್ಳುವ ದೇಶಗಳ ಮೇಲೆ ಹೆಚ್ಚಿನ ಸುಂಕ ವಿಧಿಸಲು ಟ್ರಂಪ್ ಬೆಂಬಲದೊಂದಿಗೆ ಅಮೆರಿಕ ಸೆನೆಟ್‌ನಲ್ಲಿ ಮಸೂದೆಯನ್ನು ತರಲಾಗುವುದು ಎಂದು ಅವರು ಹೇಳಿದರು. ಈ ಮಸೂದೆಯನ್ನು ಮುಂದಿನ ತಿಂಗಳು ಮಂಡಿಸುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.
ಭಾರತ ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಖರೀದಿಸುತ್ತಿದೆ ಎಂದು ತಿಳಿದುಬಂದಿದೆ. ಚೀನಾ ಕೂಡ ಮಾಸ್ಕೋದಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಅಮೆರಿಕ ಮಂಡಿಸಿದ ಈ ಮಸೂದೆ ಭಾರತ ಮತ್ತು ಚೀನಾದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.