ಗೀತಾ ಪಿಕ್ಚರ್ಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಸಿನಿಮಾ ಪಬ್ಬಾರ್. ಧೀರೇನ್ ರಾಮ್ ಕುಮಾರ್ ಹಾಗೂ ಶಾಖಾಹಾರಿ ಸೂತ್ರಧಾರಿ ಸಂದೀಪ್ ಸುಂಕದ್ ಕಾಂಬಿನೇಷನ್ ಈ ಚಿತ್ರದಿಂದ ಹೊಸ ಅಪ್ ಡೇಟ್ ಸಿಕ್ಕಿದೆ. ಮೇ ತಿಂಗಳಲ್ಲಿ ಸೆಟ್ಟೇರಿದ್ದ ಪಬ್ಬಾರ್ ಸಿನಿಮಾದ ಮೊದಲ ಹಂತದ ಚಿತ್ರೀಕರಣವಾಗಿ ಮುಕ್ತಾಯಗೊಂಡಿದೆ. ಮೈಸೂರಿನಲ್ಲಿ ಚಿತ್ರತಂಡ ಫಸ್ಟ್ ಶೆಡ್ಯುಲ್ಡ್ ಮುಗಿಸಿದೆ.
‘ಶಿವ 143’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಧೀರೆನ್ ಅವರನ್ನು ಪಬ್ಬಾರ್ ಚಿತ್ರದಲ್ಲಿ ಸಂದೀಪ್ ಹೊಸ ಅವತಾರದಲ್ಲಿ ತೋರಿಸಲು ಹೊರಟಿದ್ದಾರೆ. ಇದೊಂದು ಕ್ರೈಂ, ಅಡ್ವೆಂಚರಸ್ ಥ್ರಿಲ್ಲರ್ ಸಿನಿಮಾವಾಗಿದ್ದು, ಹಿಮಾಚಲ ಪ್ರದೇಶದ ಶಿಮ್ಲಾ ಬಳಿ ಪಬ್ಬಾರ್ ನದಿ ಕಣಿವೆ ಇದೆ. ಚಿತ್ರದ ಕಥೆಗೂ ಈ ಜಾಗಕ್ಕೂ ಲಿಂಕ್ ಇದೆ. ಆ ಜಾಗವೇ ಚಿತ್ರದ ಕಥೆಯ ಕೇಂದ್ರಬಿಂದು. ಹಾಗಾಗಿ ಚಿತ್ರಕ್ಕೆ ‘ಪಬ್ಬಾರ್’ ಎಂಬ ಟೈಟಲ್ ಇಡಲಾಗಿದೆ.
ಶಾಖಾಹಾರಿ ಸಿನಿಮಾದಲ್ಲಿ ಕೆಲಸ ಮಾಡಿದ್ದ ತಾಂತ್ರಿಕ ಬಳಗವೂ ಪಬ್ಬಾರ್ ನಲ್ಲಿ ದುಡಿಯುತ್ತಿದೆ. ಮಯೂರ್ ಅಂಬೆಕಲ್ಲು ಸಂಗೀತ ನಿರ್ದೇಶನ, ವಿಶ್ವಜಿತ್ ರಾವ್ ಛಾಯಾಗ್ರಹಣ ಸಿನಿಮಾಕ್ಕಿದೆ. ಸಿನಿಮಾದಲ್ಲಿ ಧೀರೆನ್ ಜೋಡಿಗೆ ನಾಯಕಿಯಾಗಿ ನೆನಪಿರಲಿ ಪ್ರೇಮ್ ಮಗಳು ಅಮೃತಾ ಪ್ರೇಮ್ ಸಾಥ್ ಕೊಟ್ಟಿದ್ದಾರೆ. ಜೊತೆಗೆ ಚಿತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ, ಡ್ಯಾನಿ ಕುಟ್ಟಪ್ಪ ಸೇರಿದಂತ ದೊಡ್ಡ ತಾರಾ ಬಳಗವೆ ಇದೆ. ಸದ್ಯ ಭರದಿಂದ ಚಿತ್ರೀಕರಣ ಮಾಡುತ್ತಿರುವ ಪಬ್ಬಾರ್ ಚಿತ್ರತಂಡ ಈ ವರ್ಷವೇ ಸಿನಿಮಾವನ್ನು ಬೆಳ್ಳಿತೆರೆ ಅಖಾಡಕ್ಕೆ ಇಳಿಸಲು ಹೊರಟಿದೆ.
https://twitter.com/GeethaPictures/status/1940026743232073818