ಬೆಂಗಳೂರು: ಸಿದ್ದರಾಮಯ್ಯ ಲಕ್ಕಿ ಸಿಎಂ ಎಂಬ ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ಹೇಳಿಕೆಯ ಆಡಿಯೋ ವೈರಲ್ ಆಗಿದ್ದು, ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ, ಆ ಹೇಳಿಕೆ ಕುರಿತು ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. ಸಿದ್ದರಾಮಯ್ಯರನ್ನು ಸೋನಿಯಾ ಗಾಂಧಿ ಜೊತೆ ಭೇಟಿ ಮಾಡಿಸಿದ್ದೇ ನಾನು ಎಂದು ಎಲ್ಲೂ ಹೇಳಿಲ್ಲ.
Vastu Tips For Broom: ಮನೆಯ ಈ ದಿಕ್ಕಲ್ಲಿ ಪೊರಕೆ ಇಟ್ರೆ ಸಂಪತ್ತು..! ಹೀಗೆ ಮಾಡಿದ್ರೆ ಬಡತನ ಕಾಡುತ್ತೆ
ಅದು ಸಂಪೂರ್ಣ ತಪ್ಪು. ನಾವು ಜತೆಯಾಗಿ ಭೇಟಿಗೆ ಹೋಗಿದ್ದೆವು. ಈ ಸಲ ಬೇಡ ಎಂದು ಅವರು ಹೇಳಿದ್ದರು. ಆದರೆ, ನಾನು ಒತ್ತಾಯದಿಂದ ಅವರನ್ನು ಭೇಟಿಯಾಗುವಂತೆ ಮನವೊಲಿಸಿದೆ. ಸಿದ್ದರಾಮಯ್ಯ ಒಬ್ಬ ಮಾಸ್ ಲೀಡರ್ ಎಂದು ಹೇಳಿದ್ದಾರೆ.
ಇನ್ನೂ ತನ್ನನ್ನು ತೇಜೋವಧೆ ಮಾಡುವ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗಿರುವ ಸಂಬಂಧವನ್ನು ಹಾಳು ಮಾಡುವ ಪ್ರಯತ್ನ ನಡೆದಿದೆ ಎಂದು ಹೇಳಿದ್ದಾರೆ.