ರಾಕಿಂಗ್ ಸ್ಟಾರ್ ಯಶ್ ರಾಮಾಯಣ ಮೊದಲ ಭಾಗದ ಶೂಟಿಂಗ್ ಮುಗಿಸಿ ಕುಟುಂಬ ಸಮೇತರಾಗಿ ಫಾರಿನ್ ಟ್ರಿಪ್ ಗೆ ಹೋಗಿದ್ದಾರೆ. ಯಶ್ ಪಕ್ಕ ಫ್ಯಾಮಿಲಿ ಮ್ಯಾನ್. ಶೂಟಿಂಗ್ ಅಂತಾ ಬ್ಯುಸಿಯಾಗಿರುವ ರಾಕಿಭಾಯ್ ಫ್ಯಾಮಿಲಿಗೂ ಟೈಮ್ ಕೊಡ್ತಾರೆ. ಅದರಂತೆ ಇಡೀ ಕುಟುಂಬ ಟ್ರಿಪ್ ಗಾಗಿ ಯುಎಸ್‌ಗೆ ಹಾರಿದ್ದಾರೆ. ಈ ಬೆನ್ನಲ್ಲೇ ರಾಧಿಕಾ ತಮ್ಮ ಇನ್ ಸ್ಟಾಗ್ರಾಂನಲ್ಲಿ ರೋಮ್ಯಾಂಟಿಕ್ ಫೋಟೋ ಹಂಚಿಕೊಂಡಿದ್ದಾರೆ.
ಯಶ್ ರಾಧಿಕಾ ಅವರನ್ನು ಎತ್ತಿಕೊಂಡಿರುವ ಫೋಟೋ ವೈರಲ್ ಆಗಿದ್ದು, ಫ್ಯಾನ್ಸ್ ಫೋಟೋ ನೋಡಿ ಫುಲ್ ಖುಷಿಯಾಗಿದ್ದಾರೆ. ಈ ಜೋಡಿಯ ಅನ್ಯೂನ್ಯತೆ ನೋಡಿ ಎಂಥ ಜೋಡಿ ಅಂತಾ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.
ರಾಕಿಭಾಯ್ ರಾಮಾಯಣ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಿದ್ರಿಂದ ಯಶ್ ರಾಧಿಕಾ ಹಾಗೂ ಮಕ್ಕಳ ಜೊತೆ ಅಮೆರಿಕಾಗೆ ತೆರಳಲು ಸಾಧ್ಯವಾಗಿರಲಿಲ್ಲ. ಇದೀಗ ರಾಮಾಯಣ ಹಾಗೂ ಟಾಕ್ಸಿಕ್ ಚಿತ್ರದ ಶೂಟಿಂಗ್ ಮುಗಿಸಿ ನಿನ್ನೆ ಅಮೆರಿಕಾಗೆ ತೆರಳಿದ್ದಾರೆ. ಹಲವು ದಿನಗಳ ಕಾಲ ಯಶ್ ಫ್ಯಾಮಿಲಿ ಅಮೆರಿಕ ವೆಕೇಶನ್‌ನಲ್ಲಿ ಇರುತ್ತಾರೆ.
View this post on Instagram