ಧಾರವಾಡ : ದಿನದಿನಕ್ಕೂ ಹೆಚ್ಚಾಗುತ್ತಿರುವ ಹೃದಯಾಘಾತ ಪ್ರಕರಣಗಳು ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿವೆ. ಇಷ್ಟು ದಿನ ಕೇವಲ ಹಾಸನದಲ್ಲಿ ಮಾತ್ರ ಹೃದಯಾಘಾತ ಪ್ರಕರಣಗಳು ವರದಿಯಾಗುತ್ತಿದ್ದಿವೆ. ಇದೀಗ ಶಿವಮೊಗ್ಗ, ತುಮಕೂರು, ಬೀದರ್, ಧಾರವಾಡಗಳಲ್ಲೂ ವರದಿಯಾಗುತ್ತಿದ್ದು, ಜನತೆಯ ಆತಂಕಕ್ಕೆ ಕಾರಣವಾಗಿದೆ.
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ಬುಧವಾರ ಒಂದೇ ದಿನ ಇಬ್ಬರು ಹೃದಯಸ್ತಂಭನದಿಂದ ಸಾವನ್ನಪ್ಪಿದ್ದಾರೆ. ತಾಲೂಕಿನ ಯಮನೂರ ಗ್ರಾಮದ ಫಕ್ಕಿರಪ್ಪ ಬಣಕಾರ (45) ಹಾಗೂ ನವಲಗುಂದ ಸಿದ್ದಾಪೂರ ಒಣಿಯ ಮುತ್ತಪ್ಪ ಪೂಜಾರ್ (44) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ನವಲಗುಂದ ತಾಲೂಕಿನಲ್ಲಿ ಒಂದೇ ದಿನ ಒಂದೇ ವಯಸ್ಸಿನವರು ಹೃದಯಾಘಾತದಿಂದ ಸಾವನ್ನಪ್ಪಿದ್ದು, ಇಬ್ಬರು ಸಹ ಮಲಗಿದ್ದ ವೇಳೆಯೇ ಕಾರ್ಡಿಯಾಕ್ ಅರೆಸ್ಟ್‌ನಿಂದ ಪ್ರಾಣ ಬಿಟ್ಟಿದ್ದಾರೆ.