ಬೆಂಗಳೂರು: ಬೆಂಗಳೂರು -ತುಮಕೂರು ಮಧ್ಯೆ ಮೆಟ್ರೋ ಬೇಕು. ಅದಕ್ಕೆ ನಮ್ಮ ಒತ್ತಾಯವಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬೆಂಗಳೂರು -ತುಮಕೂರು ಮಧ್ಯೆ ಮೆಟ್ರೋ ಬೇಕು. ಅದಕ್ಕೆ ನಮ್ಮ ಒತ್ತಾಯವಿದೆ. ಮೆಟ್ರೋ ಮಾಡಿದರೆ ಬೆಂಗಳೂರು ಸಂಚಾರ ಒತ್ತಡ ಕಡಿಮೆಯಾಗುತ್ತದೆ.
Vastu Tips For Broom: ಮನೆಯ ಈ ದಿಕ್ಕಲ್ಲಿ ಪೊರಕೆ ಇಟ್ರೆ ಸಂಪತ್ತು..! ಹೀಗೆ ಮಾಡಿದ್ರೆ ಬಡತನ ಕಾಡುತ್ತೆ
ಇದರ ವರದಿಯನ್ನು ಈಗಾಗಲೇ ಮಾಡಲಾಗಿದೆ. ಇದಕ್ಕಿನ್ನೂ ಡಿಪಿಆರ್ ಆಗಬೇಕು. ಬಂಡವಾಳ ವಿಚಾರ ಇದೆ, ಕೇಂದ್ರದ ಅನುಮತಿ ಬೇಕು. ಈ ಪ್ರಕ್ರಿಯೆಗಳನ್ನು ಚುರುಕು ಮಾಡಲು ತಿಳಿಸಿದ್ದೇನೆ ಎಂದು ಹೇಳಿದರು. ಸುರ್ಜೇವಾಲ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಸುರ್ಜೇವಾಲಾ ಅವರು ನಿನ್ನೆ ಬರುವುದಕ್ಕೆ ಹೇಳಿದ್ರು. ಆದರೆ, ನನಗೆ ನಿನ್ನೆ ಭೇಟಿ ಮಾಡಲು ಆಗಲಿಲ್ಲ. ಅದಕ್ಕಾಗಿ ಇವತ್ತು ಸಂಜೆ ಭೇಟಿ ಮಾಡುತ್ತೇನೆ ಎಂದು ಹೇಳಿದರು.
ಬೆಂಗಳೂರು ಉತ್ತರ ಜಿಲ್ಲೆ ರಚನೆ ವಿಚಾರ ಸಂಬಂಧ ಸಂಪುಟ ಸಭೆಯಲ್ಲಿ ಚರ್ಚೆ ಆಗಬೇಕು. ಸಂಪುಟ ತೀರ್ಮಾನದ ನಂತರ ಸರ್ಕಾರ ಆದೇಶ ಹೊರಡಿಸುತ್ತದೆ. ಇವತ್ತು ಆ ವಿಷಯ ಬಂದಿದ್ರೆ ಅದರ ಚರ್ಚೆ ಆಗುತ್ತದೆ ಎಂದರು.