ಧಾರವಾಡ : ಕಾರ್ಯಕ್ರಮದ ವೇದಿಕೆಯೊಂದರಲ್ಲಿ ಸಿಎಂ ಸಿದ್ದರಾಮಯ್ಯರಿಂದ ಅಪಮಾನಕ್ಕೆ ಒಳಗಾಗಿದ್ದ ಧಾರವಾಡ ಎಎಸ್‌ಪಿ ನಾರಾಯಣ ಭರಮಣ್ಣಿ ಅವರು ಸ್ವಯಂ ನಿವೃತ್ತಿ ಕೋರಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದರಿಂದಾಗಿ ಸರ್ಕಾರ ತೀವ್ರ ಮುಜುಗರಕ್ಕೆ ಒಳಗಾಗಿದೆ.
ಇತ್ತೀಚಿಗೆ ಬೆಳಗಾವಿಯ ಸಮಾರಂಭ ವೇದಿಕೆಯಲ್ಲಿಯೇ ಸಣ್ಣ ವಿಚಾರಕ್ಕೆ ಗರಂ ಆಗಿದ್ದ ಸಿಎಂ ಸಿದ್ದರಾಮಯ್ಯ ಎಎಸ್‌ಪಿ ನಾರಾಯಣ ಭರಮಣ್ಣಿ ಅವರಿಗೆ ಕಪಾಳ ಮೋಕ್ಷ ಮಾಡಲು ಮುಂದಾಗಿದ್ದರು. ಈ ಘಟನೆಯಿಂದಾಗಿ ಭರಮಣ್ಣಿ ತೀವ್ರವಾಗಿ ನೊಂದು ಕೊಂಡಿದ್ದರು.
ಇದೀಗ ಏಕಾಏಕಿ ನಾರಾಯಣ ಭರಮಣ್ಣಿ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದು, ಆ ಘಟನೆಯೇ ಇದಕ್ಕೆ ಕಾರಣವಾಯ್ತ ಎನ್ನುವ ಚರ್ಚೆ ಶುರುವಾಗಿದೆ. ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಹಿರಿಯ ಅಧಿಕಾರಿಗಳು ಭರಮಣ್ಣಿ ಅವರ ಮನವೊಲಿಸುವ ಯತ್ನ ನಡೆಸಿದ್ಧಾರೆ ಎನ್ನಲಾಗಿದೆ.