ಚಿತ್ರದುರ್ಗ : ಜಿಲ್ಲೆಯಲ್ಲಿ ಕಳ್ಳರ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಕಳೆದ ರಾತ್ರಿಯೂ ಕೂಡ ಮೆದೇಹಳ್ಳಿಯಲ್ಲಿ ಸರಿ ರಾತ್ರಿ ಯಲ್ಲಿ ನಾಲ್ಕೈದು ಜನರ ಕಳ್ಳರ ತಂಡವೊಂದು ಮದೆಹಳ್ಳಿ ಗಲ್ಲಿ ಗಲ್ಲಿಗಳಲ್ಲಿ ಓಡಾಡಿರು ದೃಶ್ಯ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಇದರಿಂದ ಗ್ರಾಮಸ್ಥರು ಭಯ ಭೀತರಾಗಿದ್ದಾರೆ.
ತಲೆಗೆ ಟವಲ್ ಸುತ್ತಿಕೊಂಡು ಬನಿಯನ್ ಹಾಗೂ ಚಡ್ಡಿಗಳ ಧರಿಸಿಕೊಂಡು ಓಡಿಹೋಗುವ ದೃಶ್ಯವೂ ಸೆರೆಯಾಗಿದೆ. ಈ ಕಳ್ಳರ ತಂಡದಿಂದಾಗಿ ಮೇದೇಹಳ್ಳಿ ಹಾಗೂ ಸುತ್ತಲಿನ ಜನರಲ್ಲಿ ಭಯದ ವಾತಾವರಣ ಮೂಡಿಸಿದೆ. ಪೊಲೀಸರು ಎಚ್ಚೆತ್ತುಕೊಂಡು ಈ ಕಳ್ಳರ ತಂಡವನ್ನು ಹಿಡಿದು ಜನರ ಭಯವನ್ನು ಹೋಗಲಾಡಿಸಬೇಕು. ಜೊತೆಗೆ ಮುಂದಾಗುವ ಅನಾಹುತಗಳನ್ನು ತಡೆಯಲು ಮುಂದಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.