ಕೊಡಗು : ಭಾರತೀಯ ಸೇನೆಯಲ್ಲಿ ಸುದೀರ್ಘ 30ವರ್ಷ ಸೇವೆ ಸಲ್ಲಿಸಿ ಜೂ.30 ರಂದು ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ ಯೋಧ ಎಚ್.ಎಸ್.ಕೃಷ್ಣಪ್ಪಗೆ ಹೆಬ್ಬಾಲೆ ಗ್ರಾಮಸ್ಥ ಅದ್ದೂರಿ ಸ್ವಾಗತ ಕೊರಿದರು.
ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಹೆಬ್ಬಾಲೆ ಗ್ರಾಮದ ಸಿದ್ದಪ್ಪ ಹಾಗೂ ದಿ.ಪುಟ್ಟಗೌರಮ್ಮ ದಂಪತಿಗಳ ಕಿರಿಯ ಪುತ್ರನಾಗಿರುವ ಕೃಷ್ಣಪ್ಪ ದೇಶ ಸೇವೆಯಲ್ಲಿ ತೊಡಗಿ ನಿವೃತರಾಗಿ ಇಂದು ತನ್ನ ಹುಟ್ಟುರಿಗೆ ಆಗಮಿಸುತಿದಂತೆ ಸ್ಥಳೀಯರು ಹಾಗೂ ಗ್ರಾಮಸ್ಥರು ಯೋದನ್ನನ್ನ ಅದ್ದೂರಿಯಾಗಿ ಸ್ವಾಗತಿಸಿದರು.
ದಂಪತಿಗಳನ್ನ ಗ್ರಾಮದ ಮುಖ್ಯ ಸರ್ಕಲ್ನಿಂದ ಊರಿನ ಪ್ರಮುಖ ಬೀದಿಯಲ್ಲಿ ಮಂಗಳವಾದ್ಯಗಳೊಂದಿಗೆ ಅಲಂಕೃತ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ಉದ್ದಕ್ಕೂ ಅಭಿಮಾನಿಗಳು ಜಯಘೋಷ ಹಾಕಿದರು. ನಂತರ ತಮ್ಮ ಮನೆಗೆ ಆಗಮಿಸಿದಾಗ ಮನೆಯವರು ಮಂಗಳಾರತಿಯೊಂದಿಗೆ ಯೋಧರ ಕುಟುಂಬವನ್ನು ಬರಮಾಡಿಕೊಂಡರು. ತಾನು ವಿದ್ಯಾಭ್ಯಾಸ ಮಾಡಿದ ಶಾಲೆಗೆ ಭೇಟಿ ನೀಡಿದ ನಿವೃತ್ತ ಯೋಧ ಕೃಷ್ಣಪ್ಪ ಹಾಗೂ ಪೂರ್ಣಿಮಾ ಕೃಷ್ಣಪ್ಪ ಅವರು ಉಚಿತವಾಗಿ ಎಲ್ಲಾ ಮಕ್ಕಳಿಗೂ ಟೀಶರ್ಟ್ ವಿತರಣೆ ಮಾಡಿದರು.