ಹಾಸನ:- ಹಾಸನ ಜಿಲ್ಲೆಯಲ್ಲಿ ಇತ್ತೀಚೆಗೆ ಹೃದಯಾಘಾತದಿಂದ ಸಾವಿನ ಪ್ರಕರಣಗಳು ವರದಿಯಾಗುತ್ತಿರುವ ಬಗ್ಗೆ ಜನರಲ್ಲಿ ಆತಂಕ ಮೂಡಿದೆ. ದಿನಕ್ಕೊಂದರಂತೆ ಹಾಸನದಲ್ಲಿ ಕಿಲ್ಲರ್ ಹಾರ್ಟ್ ಅಟ್ಯಾಕ್‌ನಿಂದಾಗಿ ಹದಿಹರೆಯದ ಯುವಕ ಯುವತಿಯರೇ ಬಲಿಯಾಗುತ್ತಿದ್ದಾರೆ.
Heart Attack: ಸರ್ಕಾರಿ ವೈದ್ಯ ‘ಹೃದಯಾಘಾತಕ್ಕೆ’ ಬಲಿ- ಜನರಲ್ಲಿ ಹೆಚ್ಚಿದ ಆತಂಕ!
ಇದೀಗ ಹಾಸನದ ಕರಿಗೌಡ ಕಾಲೋನಿಯಲ್ಲಿ ಹೃದಯಾಘಾತದಿಂದ ವ್ಯಕ್ತಿಯೋರ್ವ ಮೃತಪಟ್ಟಿದ್ದಾರೆ. 53 ವರ್ಷದ ಸಂಪತ್ ಕುಮಾರ್ ಮೃತ ವ್ಯಕ್ತಿ. ಮೃತ ಸಂಪತ್ ಕುಮಾರ್ ಗೆ ಮೊದಲು ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಹಿಮ್ಸ್ ಆಸ್ಪತ್ರೆಗೆ ಮನೆಯವರು ಕರೆದೊಯ್ದಿದ್ದಾರೆ. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿಯೇ ಸಂಪತ್ ಕುಮಾರ್ ಸಾವನ್ನಪ್ಪಿದ್ದಾರೆ. ಈ ಮೂಲಕ ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಬಲಿಯಾದವರ ಸಂಖ್ಯೆ 28 ಕ್ಕೆ ಏರಿಕೆಯಾಗಿದೆ. ಕಳೆದ 42 ದಿನಗಳಲ್ಲಿ ಒಟ್ಟು 28 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿರುವುದು ಆತಂಕ ಹುಟ್ಟು ಹಾಕಿದೆ.